RRR: ನಾಟು ನಾಟು..ಆಸ್ಕರ್ ಗೆದ್ದಾಗ ಭಾವುಕರಾದ ದೀಪಿಕಾ ಪಡುಕೋಣೆ, ವಿಡಿಯೋ ವೈರಲ್

By Shruthi Krishna  |  First Published Mar 14, 2023, 3:22 PM IST

RRR ಸಿನಿಮಾದ ನಾಟು ನಾಟು..ಹಾಡು ಆಸ್ಕರ್ ಗೆದ್ದಾಗ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ. 


'ಆಸ್ಕರ್ 2023' ಭಾರತೀಯರಿಗೆ ತುಂಬಾ ವಿಶೇಷವಾಗಿತ್ತು. 95ನೇ ಅಕಾಡೆಮಿ ಅವಾರ್ಡ್‌ ಸಮಾರಂಭದಸಲ್ಲಿ ಭಾರತ ಎರಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆರ್ ಆರ್ ಆರ್ ಸಿನಿಮಾದ 'ನಾಟು ನಾಟು..' ಹಾಡು ಮತ್ತು ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ದಿ ಎಲಿಫೆಂಡ್ ವಿಸ್ಪರ್ಸ್' ಪ್ರಶಸ್ತಿ ಗೆದ್ದುಕೊಂಡಿದೆ. ನಾಟು ನಾಟು...ಹಾಡಿಗೆ ಆಸ್ಕರ್ ಗರಿ ಸಿಗುತ್ತಿದ್ದಂತೆ ಆರ್ ಆರ್ ಆರ್ ತಂಡದ ಸಂಭ್ರಮ ಮುಗಿಲು ಮುಟ್ಟಿತ್ತು.  ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾಗೆ ಪ್ರಶಸ್ತಿ ಘೋಷಿಸುತ್ತಿದ್ದಂತೆ ನಿರ್ದೇಶಕ ಎಸ್‌ಎಸ್ ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹಾಗೂ ಇಡೀ ತಂಡ ಸಂತೋಷ, ಕಣ್ಣೀರು ಮತ್ತು ಅಪ್ಪುಗೆಯಿಂದ ಸಂಭ್ರಮಿಸಿದರು. ಮತ್ತೊಂದೆಡೆ ದೀಪಿಕಾ ಪಡುಕೋಣೆ ಭಾವುಕರಾಗಿದ್ದಾರೆ. 

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಘೋಷಣೆಯಾಗುತ್ತಿದ್ದಂತೆ ದೀಪಿಕಾ ಭಾವುಕರಾದರು. ಕಣ್ಣಂಚಲ್ಲಿ ನೀರು ಜಿನುಗಿಸುತ್ತಲೇ ಚಪ್ಪಾಳೆ ತಟ್ಟುತ್ತಾ ಆರ್ ಆರ್ ಆರ್ ತಂಡಕ್ಕೆ ಅಭಿನಂದಿಸಿದರು. ಆರ್ ಆರ್ ಆರ್ ತಂಡವನ್ನು ಬೆಂಬಲಿಸುತ್ತಾ ಪ್ರೇಕ್ಷಕರ ಜೊತೆ ಕುಳಿತಿದ್ದ ದೀಪಿಕಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ ಆರ್ ಆರ್ ಆಸ್ಕರ್ ಗೆದ್ದಿರುವುದು ಭಾರತೀಯರಿಗೆ ಭಾವನಾತ್ಮಕ ಕ್ಷಣವಾಗಿತ್ತು. ಆಸ್ಕರ್ ಸಮಾರಂಭದಲ್ಲಿದ್ದ ದೀಪಿಕಾ ಆನಂದಭಾಷ್ಪ ಸುರಿಸಿದ್ದಾರೆ. ನಮ್ಮ ದೇಶಕ್ಕೆ ಆಸ್ಕರ್ ಬಂದ ಸಂತಸವನ್ನು ಸಂಭ್ರಮಿಸಿದರು. 

ಆಸ್ಕರ್‌ಗೆ ರಾಮ್ ಚರಣ್-ಉಪಾಸನಾ ರೆಡಿಯಾಗಿದ್ದು ಹೇಗೆ? ದೇವರಿಗೆ ನಮಸ್ಕರಿಸಿ ಹೊರಟ ವಿಡಿಯೋ ವೈರಲ್

Tap to resize

Latest Videos

ಆಸ್ಕರ್ ಘೋಷಣೆಗೂ ಮೊದಲು ನಾಟು ನಾಟು ಹಾಡಿನ ಪ್ರದರ್ಶನವಿತ್ತು. ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಹಾಡು ಹೇಳಿ ಡಾನ್ಸ್ ಮಾಡಿ ಸಂಭ್ರಮಿಸಲಾಯಿತು. ಪ್ರದರ್ಶನಕ್ಕೂ ಮೊದಲು ದೀಪಿಕಾ ಪಡುಕೋಣೆ ಆರ್ ಆರ್ ಆರ್ ಸಿನಿಮಾದ ಬಗ್ಗೆ ವಿವರಿಸಿದರು. ದೀಪಿಕಾ ವಿವರಣೆ ಭಾರತೀಯರ ಹೃದಯ ಗೆದ್ದಿದೆ. ಈ ಬಾರಿಯ ಆಸ್ಕರ್ ನಲ್ಲಿ ದೀಪಿಕಾ ವಿಶೇಷ ನಿರೂಪಕಿಯಾಗಿದ್ದರು. ನಾಟು ನಾಟು ಪ್ರದರ್ಶನದ ಬಳಿಕ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿರುವುದು ವಿಶೇಷವಾಗಿತ್ತು.&

deepika when naatu naatu won the oscar 🥺 pic.twitter.com/IuT5tgouhE

— Tara (@sarphiriiiii)

ಆಸ್ಕರ್ ಗೆದ್ದ ಬಳಿಕ ಉಕ್ರೇನ್‌ಗೆ ಧನ್ಯವಾದ ತಿಳಿಸಿ ರಾಜಮೌಳಿ ಹೇಳಿದ್ದೇನು?

ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್‌ಗೆ ಮುತ್ತಿಟ್ಟಿದೆ. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಚಂದ್ರಬೋಷ್ ಅವರ ಸಾಹಿತ್ಯವಿದೆ. ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ವರ್ಲ್ಡ್ ಸೆನ್ಸೇಷನ್ ನಾಟು ನಾಟು ಹಾಡಿಗೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಹೆಜ್ಜೆಹಾಕಿದ್ದಾರೆ.  

click me!