
ಬಿಜೆಪಿ ಹಿರಿಯ ನಾಯಕ, ಗೋವಾ ಮಾಜಿ ಸಿಎಂ ಮನೋಹರ್ ಪರ್ರಿಕರ್ ಬಯೋಪಿಕ್ ತೆರೆಗೆ ಬರಲಿದೆ.
ಗೋವಾ ಮೂಲದ ಪ್ರೊಡಕ್ಷನ್ ಹೌಸ್, ಪರ್ರಿಕರ್ ಪುತ್ರ ಉತ್ಪಾಲ್ ಪರ್ರಿಕರ್ ಜೊತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡಿದೆ. 2020 ಡಿಸಂಬರ್ 13 ರಂದು ಅಂದರೆ ಪರ್ರಿಕರ್ ಹುಟ್ಟುಹಬ್ಬದಂದು ತೆರೆಗೆ ಬರಲಿದೆ. ಬಯೋಪಿಕ್ ಹಿಂದಿ ಹಾಗೂ ಕೊಂಕಣಿಯಲ್ಲಿ ಬರಲಿದೆ.
ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್ 2 ಟೀಂನಿಂದ ಹೊಸ ಸುದ್ಧಿ!
ಪರ್ರಿಕರ್ ರಕ್ಷಣಾ ಸಚಿವರಾಗಿದ್ದಾಗಲೇ ಬಯೋಪಿಕ್ ಕೆಲಸ ಶುರುವಾಗಿದೆ. ಮನೋಹರ್ ಪರ್ರಿಕರ್ ವೈಯಕ್ತಿಕ ಹಾಗೂ ರಾಜಕೀಯ ಜೀವನವನ್ನು ಈ ಬಯೋಪಿಕ್‌ನಲ್ಲಿ ತೋರಿಸಲಾಗುತ್ತದೆ. ಅದೇ ರೀತಿ ಇವರ ಸುತ್ತ ಸುತ್ತಿಕೊಂಡಿದ್ದ ವಿವಾದಗಳನ್ನು ತೋರಿಸಲಾಗುತ್ತದೆ' ಎಂದು ಪ್ರೊಡ್ಯೂಸರ್ ಸ್ವಪ್ನಿಲ್ ಶೇಖರ್ ಹೇಳಿದ್ದಾರೆ.
'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?
ಆರ್‌ಎಸ್‌ಎಸ್ ಪ್ರಚಾರಕ ಹುದ್ದೆಯಿಂದ ದೇಶದ ರಕ್ಷಣಾ ಸಚಿವರಾಗಿ, ಗೋವಾ ಸಿಎಂ ಆಗಿ ಬೆಳೆದ ಪರಿ ಗಮನಾರ್ಹವಾಗಿದ್ದು. ಗೋವಾದಲ್ಲಿ 4 ಬಾರಿ ಸಿಎಂ ಆಗಿ ಸೇವೆ ಸಲ್ಲಿಸಿದ್ದರು. ನರೇಂದ್ರ ಮೋದಿ ಭಾಗ 1 ಸರ್ಕಾರದಲ್ಲಿ 2014 - 2017 ರವರೆಗೆ ರಕ್ಷಣಾ ಮಂತ್ರಿಯಾಗಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿದ್ದು ಪರ್ರಿಕರ್ ರಕ್ಷಣಾ ಸಚಿವರಾಗಿದ್ದಾಗಲೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.