ಒಂಬತ್ತನೇ ಕ್ಲಾಸ್ ಓದುತ್ತಿದ್ದಾಗ ಅಪ್ಪ ಕಲಿಸಿದ ಪಾಠ, ಜೀವ ಇರೋವರೆಗೂ ಮರೆಯಲಾರೆ; ಅನುಪಮ್ ಖೇರ್

By Shriram Bhat  |  First Published Dec 14, 2023, 1:25 PM IST

ಇಷ್ಟು ಮಾತುಕತೆ ನಮ್ಮಿಬ್ಬರ ಆದ ಮೇಲೆ ಖಂಡಿತ ನನ್ನ ತಂದೆ ನನ್ನ 59ನೇ ರ‍್ಯಾಂಕ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ ಎಂದುಕೊಂಡೆ. ಆದರೆ, ಹಾಗಾಗಲಿಲ್ಲ. 


ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತಮ್ಮ ಬಾಲ್ಯದ ದಿನಗಳ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅನುಪಮ್ ಖೇರ್ 'ನಾನು ಒಂಬತ್ತನೇ ತರಗತಿ ಆಗಿದ್ದಾಗಿನ ಘಟನೆ. ನಾವು ಪ್ರತಿ ವರ್ಷದ ಮಾರ್ಕ್ಸ್‌ ಕಾರ್ಡ್ ಪೋಷಕರಿಗೆ ಸಹಿ ಮಾಡಲು ಕೊಡಬೇಕಿತ್ತು. ಅದರಂತೆ, ನಾನು ನನ್ನ 9ನೇ ತರಗತಿ ಮಾರ್ಕ್ಸ್‌ ಕಾರ್ಡ್ ಕೊಟ್ಟಾಗ ಅದನ್ನು ಹಿಡಿದು ನೋಡಿ ನನ್ನ ತಂದೆ 'ನೀನು 59ನೇ ರ‍್ಯಾಂಕ್ ಬಂದಿದ್ದೀಯಾ?' ಎಂದು ಕೇಳಿದರು. ನಾನು ಹೌದು ಎಂದೆ. ಕ್ಲಾಸಿನಲ್ಲಿ ಎಷ್ಟು ಜನ ವಿದ್ಯಾರ್ಥಿಗಳು ಇದ್ದಾರೆ ಎಂದು ಕೇಳಿದರು ನನ್ನ ತಂದೆ. ನಾನು 59 ಸ್ಟೂಡೆಂಟ್ಸ್ ಎಂದೆ. 

ಇಷ್ಟು ಮಾತುಕತೆ ನಮ್ಮಿಬ್ಬರ ಆದ ಮೇಲೆ ಖಂಡಿತ ನನ್ನ ತಂದೆ ನನ್ನ 59ನೇ ರ‍್ಯಾಂಕ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ ಎಂದುಕೊಂಡೆ. ಆದರೆ, ಹಾಗಾಗಲಿಲ್ಲ. ಅವರು ಅದು ಸ್ಪೋರ್ಟ್ಸ್‌ ಆಗಿರಲಿ, ಸ್ಟಡೀಸ್ ಆಗಿರಲಿ, 1 ರ‍್ಯಾಂಕ್ ಬಂದವರಿಗೆ ಯಾವತ್ತೂ ತಾವು ಸೆಕೆಂಡ್ ರ‍್ಯಾಂಕ್ ಗೆ ಜಾರಿ ಬಿಟ್ಟರೆ ಎಂಬ ಭಯ ಇರುತ್ತದೆ. ಆದರೆ 59, 69 ರ‍್ಯಾಂಕ್ ಬಂದವರಿಗೆ ಅದು ಇರುವುದಿಲ್ಲ. ಅವರಿಗೆ 49, 25ನೇ ರ‍್ಯಾಂಕ್ ಬರಲು ಕೂಡ ಅವಕಾಶ ಇರುತ್ತದೆ. ಅವರಿಗೆ ಯಾವುದೇ ಆತಂಕ ಕಾಡುವುದಿಲ್ಲ. 59ನೇ ರ‍್ಯಾಂಕ್ ನಿಂದ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಬಾರಿ ನೀನು 49ನೇ ರ‍್ಯಾಂಕ್ ಬಾ' ಎಂದು ಹೇಳಿದರು. 

Latest Videos

undefined

ಕಂಫರ್ಟ್ ಬಯಸುವ ನಟಿಯಲ್ಲ, ತಲೆ ತಗ್ಗಿಸಿ ಕೆಲಸ ಮಾಡುವುದಷ್ಟೇ ಗೊತ್ತು; ಪ್ರಿಯಾಂಕಾ ಚೋಪ್ರಾ

ನನ್ನ ತಂದೆಯವರ ಮಾತಿನಿಂದ ನನಗೆ ಸಂತೋಷ ಆಗಿದ್ದು ಅಷ್ಟೇ ಅಲ್ಲ, ಸ್ಕೂಲಿನಲ್ಲಿ ಯಾವತ್ತೂ ಹೇಳದ ಪಾಠವನ್ನು ನಾನು ನನ್ನ ತಂದೆಯವರಿಂದ ಕಲಿತುಕೊಂಡೆ. ನನ್ನ ತಂದೆಯವರ ಮಾತು ನಿಜ. ಮೊದಲ ರ‍್ಯಾಂಕ್ ಬಂದವರಿಗೆ ಮತ್ತೆ ಮೇಲೆ ಹೋಗಲು ಅವಕಾಶವೇ ಇಲ್ಲ. ಅವರಿಗೆ ತಾವು ಎರಡನೇ ರ‍್ಯಾಂಕ್ ಬಂದುಬಿಟ್ಟರೆ ಗತಿ ಏನು ಎಂಬ ಚಿಂತೆ ಸದಾ ಕಾಡುತ್ತಲೇ ಇರುತ್ತದೆ. ಆದರೆ, ಕೆಳಗಿನವರಿಗೆ ಮೇಲೆ ಬರಲು ಸದಾ ಅವಕಾಶಗಳು ಓಪನ್ ಆಗಿರುತ್ತವೆ. ಇಂಥ ಪಾಠವನ್ನು ನನಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಾಡಿದ್ದಕ್ಕಾಗಿ ನಾನು ನನ್ನ ತಂದೆಯವರಿಗೆ ಯಾವತ್ತೂ ಋಣಿಯಾಗಿದ್ದೇನೆ' ಎಂದಿದ್ದಾರೆ ನಟ ಅನುಪಮ್ ಖೇರ್.

ಆ್ಯನಿಮಲ್‌ನಲ್ಲಿ ದಾಂಪತ್ಯ ಅತ್ಯಾಚಾರ, ಸಮಾಜದಲ್ಲಿ ಇರೋದು ಹೌದು: ಬಾಬ್ಬಿ ಡಿಯೋಲ್ 

click me!