ಹುಟ್ಟುವಾಗಲೇ ಮಗಳ ಹೃದಯಲ್ಲಿ ಎರಡು ರಂಧ್ರ. 3ನೇ ದಿನ ನಮಗೆ ಸಮಸ್ಯೆ ಅರಿವಾಯಿತು. ಮೂರನೇ ತಿಂಗಳಲ್ಲಿ ಹಾರ್ಟ್ ಸರ್ಜರಿ ಮಾಡಬೇಕಿತ್ತು. 3 ತಿಂಗಳ ಹಸಗೂಸು, ನಾನು ಫೈಟರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದರೆ, ನನ್ನ ಪುಟ್ಟ ಮಗಳು ನಿಜವಾದ ಫೈಟರ್ ಆಗಿ ಸವಾಲು ಎದುರಿಸಿದ್ದಾಳೆ ಎಂದು ಕರಣ್ ಗ್ರೋವರ್ ಸಿಂಗ್ ಹೇಳಿದ್ದಾರೆ.
ಮುಂಬೈ(ಫೆ.02) ಹೃತಿಕ್ ರೋಶನ್ ಅಭಿನಯದ ಫೈಟರ್ ಚಿತ್ರ ಭಾರಿ ಮೆಚ್ಚುಗೆ ಗಳಿಸಿದೆ. ಈ ಚಿತ್ರದಲ್ಲಿ ಕಾಣಿಸಿಕೊಂಡ ಬಿಪಾಶಾ ಬಸು ಪತಿ ಕರಣ್ ಗ್ರೋವರ್ ಸಿಂಗ್, ಭಾವುಕರಾಗಿದ್ದಾರೆ.ಫೈಟರ್ ಚಿತ್ರದಲ್ಲಿ ನಾನು ಪಾತ್ರ ನಿರ್ವಹಿಸಿದ್ದೇನೆ, ಆದರೆ ನಿಜವಾದ ಫೈಟರ್ ನನ್ನ ಮಗಳು ಎಂದಿದ್ದಾರೆ. ಮಗಳು ಹುಟ್ಟಿದ 3ನೇ ದಿನ ನಮಗೆ ಆಘಾತ ಕಾದಿತ್ತು. ಕಾರಣ ಮಗಳ ಹೃದಯದಲ್ಲಿ ಎರಡು ರಂಧ್ರಗಳಿದ್ದವು. 5ನೇ ದಿನ ನಾನು ಫೈಟರ್ ಚಿತ್ರದ ಶೂಟಿಂಗ್‌ಗೆ ತೆರಳಬೇಕಿತ್ತು. 3ನೇ ತಿಂಗಳಲ್ಲಿ ಮಗಳಿಗೆ ಹಾರ್ಟ್ ಸರ್ಜರಿ ಆಗಬೇಕಿತ್ತು. ಆ ದಿನಗಳು ನನ್ನ ಪಾಲಿನ ಅತ್ಯಂತ ನೋವಿನ ಹಾಗೂ ಸಂಕಷ್ಟದ ದಿನ ಎಂದು ಬಿಪಾಶಾ ಪತಿ ಕರಣ್ ಗ್ರೋವರ್ ಸಿಂಗ್ ಹೇಳಿದ್ದಾರೆ.
ಕರಣ್ ಗ್ರೋವರ್ ಮಾತುಗಳು ಎಂತಹರನ್ನು ಒಂದು ಕ್ಷಣ ಭಾವುಕರನ್ನಾಗಿ ಮಾಡುತ್ತದೆ. ಕಾರಣ, ಪುಟ್ಟ ಕಂದಮ್ಮಗೆ ಹೃದಯದ ಗಂಭೀರ ಆರೋಗ್ಯ ಸಮಸ್ಯೆ, ಮತ್ತೊಂದೆಡೆ ಸರ್ಜರಿ, ಇನ್ನೊಂದೆಡೆ ಶೂಟಿಂಗ್. ಇವೆಲ್ಲವನ್ನೂ ನಿಭಾಯಿಸುವುದು ಅತ್ಯಂಕ ಕಷ್ಟವಾಗಿತ್ತು. ಆದರೆ ಬಿಪಾಶ ತೋರಿದ ಧೈರ್ಯ, ಆಕೆಯ ಸಹನೆಯಿಂದ ನಾವು ಸಂಕಷ್ಟದಿಂದ ಪಾರಾಗಿದ್ದೇವೆ ಎಂದು ಕರಣ್ ಗ್ರೋವರ್ ಹೇಳಿದ್ದಾರೆ.
undefined
ತಾಯಿಯಾದ್ಮೇಲೆ ರ‍್ಯಾಂಪ್ ವಾಕ್ ಮಾಡಿದ ಬಿಪಾಶಾ ಬಸು ಟ್ರೋಲ್: ರಕ್ಷಣೆಗೆ ಬಂದ ಫ್ಯಾನ್ಸ್
ಮೂರನೇ ತಿಂಗಳಲ್ಲಿ ಸರ್ಜರಿ ಮಾಡಲು ನಾನು ಒಪ್ಪಿರಲಿಲ್ಲ. ಕಾರಣ ಅಷ್ಟ ಪುಟ್ಟ ಮಗಳಿಗೆ ಹಾರ್ಟ್ ಸರ್ಜರಿ ಅಂದರೆ ನನ್ನ ಎದೆಬಡಿತವೇ ಹೆಚ್ಚಾಗಿತ್ತು. ಆ ನೋವು, ಶಸ್ತ್ರಚಿಕಿತ್ಸೆಯನ್ನು ಎದುರಿಸುವ, ತಡೆದುಕೊಳುವ ಶಕ್ತಿ 3 ತಿಂಗಳ ಕಂದನಿಗೆ ಎಲ್ಲಿರುತ್ತೆ? ಆದರೆ ಬಿಪಾಶ, ಸೂಕ್ತ ಸಮಯದಲ್ಲಿ ಆಗಬೇಕು ಎಂದಳು. ಆಕೆ ಹೆಚ್ಚು ವಿಶ್ವಾಸ ತೋರಿಸಿದ್ದಳು. ವೈದ್ಯರ ಸಲಹೆಯಂತೆ 3 ತಿಂಗಳಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಲಾಯಿತು. ಹುಟ್ಟಿದ ದಿನದಿಂದಲೇ ನನ್ನ ಮಗಳು ಫೈಟರ್. ಅತೀ ದೊಡ್ಡ ಸವಾಲನ್ನು ಎದುರಿಸಿದ ಆಕೆಯೇ ನಿಜವಾದ ಫೈಟರ್ ಎಂದು ಕರಣ್ ಗ್ರೋವರ್ ಸಿಂಗ್ ಹೇಳಿದ್ದಾರೆ.
ಮಗಳ ಹೃದಯದಲ್ಲಿ ರಂಧ್ರ: ಶಾಕಿಂಗ್ ವಿಷಯ ಬಹಿರಂಗಗೊಳಿಸಿದ ನಟಿ ಬಿಪಾಷಾ ಬಸು
ವೈದ್ಯರು, ಹಿರಿಯ ತಜ್ಞರನ್ನು ಸಂಪರ್ಕಿಸಲಾಗಿತ್ತು. ಮಗಳ ಸ್ಕ್ರಾನಿಂಗ್ ನಡೆದಿತ್ತು. 3 ತಿಂಗಳ ಮಗಳ ಹಾರ್ಟ್ ಸರ್ಜರಿಗೆ ಬಿಪಾಶ ಮಾನಸಿಕವಾಗಿ ಸಿದ್ದವಾಗಿದ್ದಳು. ಗಟ್ಟಿ ನಿರ್ಧಾರವನ್ನು ಮಾಡಿದ್ದಳು. ಆದರೆ ನಾನು ಸಿದ್ದವಾಗಿರಲಿಲ್ಲ. ನನಗೆ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. 3 ತಿಂಗಳಿಗೆ ಮಾಡಬೇಕಾ? ಈ ವಯಸ್ಸಿನಲ್ಲಿ, ಮಗಳ ಆರೋಗ್ಯ, ಸರ್ಜರಿ ಬಳಿಕ ಶೇಕಡಾ 100 ರಷ್ಟು ಸಮಸ್ಯೆ ಗುಣಮುಖವಾಗಿ ಆಕೆ ಸಹಜ ಸ್ಥಿತಿಗೆ ಮರಳುತ್ತಾಳ? ಹೀಗೆ ನೂರಾರು ಪ್ರಶ್ನೆಗಳು ಕಾಡುತ್ತಲೇ ಇತ್ತು. ಆದರೆ ಬಿಪಾಶ ನನಗೆ ಧೈರ್ಯ ತುಂಬಿದಳು. ಕೊನೆಗೂ ನಮ್ಮ ಕಂದ ಯುದ್ಧ ಗೆದ್ದ ಬಂದಳು ಎಂದು ಕರಣ್ ಗ್ರೋವರ್ ಸಿಂಗ್ ಹೇಳಿದ್ದಾರೆ.