
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರವೂ ಕಳೆದ ಜನವರಿ 25ರಂದು ರಿಲೀಸ್ ಆಗಿದೆ. ನಟಿಯರು ಬೆತ್ತಲಾದರೆ ಮಾತ್ರ ಚಿತ್ರ ಓಡುತ್ತದೆ ಎನ್ನುವಂತೆ, ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್‌ಫೋರ್ಸ್ ಆಫೀಸರ್ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ. ಹೇಳಿ ಕೇಳಿ ಫೈಟರ್ ದೇಶಭಕ್ತಿ ಮೆರೆಯುವ ಚಿತ್ರ. ಇದರಲ್ಲಿಯೂ ಈ ರೀತಿ ಮುಕ್ಕಾಲಂಶ ದೇಹ ಪ್ರದರ್ಶನ ಮಾಡುವುದು ಬೇಕಾ ಎಂದು ಸಕತ್ ಟೀಕೆಗೆ ಒಳಗಾಗುತ್ತಿದೆ. ಇನ್ನೊಂದಿಷ್ಟು ಮಂದಿ ಇದೇ ವೇಳೆ ಬಾಯಿ ಚಪ್ಪರಿಸಿಕೊಂಡು ಬೆತ್ತಲಾದರೆ ಏನು ಎಂದೂ ಕೇಳುತ್ತಿದ್ದಾರೆ.
ಹೀಗೆ ಬೆತ್ತಲಾಗಿ ಬಿಟ್ಟರೆ ಚಿತ್ರ ಸಕ್ಸಸ್ ಆಗಬಹುದು ಎಂದುಕೊಂಡ ನಿರ್ದೇಶಕರಿಗೆ ಭಾರಿ ನಿರಾಸೆಯಾಗಿದೆ. ಪಠಾಣ್ ಚಿತ್ರದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನಿರ್ದೇಶಕ ಸಿದ್ಧಾರ್ಥ್ ಆನಂದ್ (Siddharth Anand) ಈಗ ತಾವು ಅಂದುಕೊಂಡ ರೀತಿಯಲ್ಲಿ ಫೈಟರ್ ಯಶಸ್ಸು ಕಾಣದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿನ ಬೆತ್ತಲೆ ದೃಶ್ಯ ನೋಡಿ ಅದನ್ನು ಜನರು ಬ್ಲಾಕ್ಬಸ್ಟರ್ ಮಾಡಿದಂತೆ ತಮ್ಮ ಚಿತ್ರವೂ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಸಿದ್ಧಾರ್ಥ್ ಆನಂದ್ ಅವರಿಗೆ ಈಗ ನಿರಾಸೆ ಕಾಡಿದೆ. ಇಷ್ಟೆಲ್ಲಾ ಮಾಡಿದ ಮೇಲೂ ಯಾಕೆ ತಮ್ಮ ಚಿತ್ರ ಅಷ್ಟೊಂದು ಯಶಸ್ವಿಯಾಗಿಲ್ಲ ಎನ್ನುವುದಕ್ಕೆ ಇದೀಗ ತಮ್ಮದೇ ಆದ ಕಾರಣಗಳನ್ನು ನಿರ್ದೇಶಕರು ನೀಡಿದ್ದಾರೆ. ಭಾರತದಲ್ಲಿ ಚಿತ್ರದ ಕಲೆಕ್ಷನ್ ಆಗುತ್ತಿಲ್ಲ. ವಿದೇಶಗಳಲ್ಲಿ ತಕ್ಕ ಮಟ್ಟಿಗೆ ಚಿತ್ರ ಕಲೆಕ್ಷನ್ ಮಾಡುತ್ತಿದೆ.
ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್' ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!
ಅಷ್ಟಕ್ಕೂ ಕೆಲವೊಂದು ಸಿನಿಮಾಗಳ ಹೋಲಿಕೆ ಮಾಡಿದ ಸಿದ್ಧಾರ್ಥ್ ಆನಂದ್, ತಮ್ಮ ಫೈಟರ್ ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ ಗೆಲ್ಲದೇ ಇರುವುದಕ್ಕೆ ಏನು ಕಾರಣ ಎಂದು ಹೇಳಿದ್ದಾರೆ. ಕೆಲವು ಚಿತ್ರಗಳ ಉದಾಹರಣೆ ಕೊಟ್ಟು, ಅವು ಏಕೆ ಸಕ್ಸಸ್ ಕಂಡವು ಎಂದು ಹೇಳಿದ್ದಾರೆ. ಅವರು ಹೇಳಿದ್ದೇನೆಂದರೆ, ಏಕ್ ಥಾ ಟೈಗರ್ ಚಿತ್ರ ಹಿಟ್ ಯಾಕೆ ಆಯಿತೆಂದರೆ ಭಾರತದಲ್ಲಿ ಶೇಕಡಾ 90 ರಷ್ಟು ಜನ RAW ಏಜೆಂಟ್ಸ್ ಇದ್ದಾರೆ. ಹಾಗಾಗಿಯೇ ಈ ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿತು. ಜುರಾಸಿಕ್ ಪಾರ್ಕ್ ಚಿತ್ರ ಗೆಲ್ಲಲು ಕಾರಣ, ಡೈನೋಸಾರ್‌ಗಳ ಬಗ್ಗೆ ಜನರಿಗೆ ಕುತೂಹಲ ಇದೆ. ಹಾಗಾಗಿಯೇ ಈ ಚಿತ್ರ ಓಡಿದೆ. ಅವತಾರ್ ಚಿತ್ರ ಜನಕ್ಕೆ ಒಪ್ಪಿಗೆ ಆಗಿದ್ದು ಏಕೆಂದ್ರೆ, ಈ ಚಿತ್ರದ ಆ ನೀಲಿ ಬಣ್ಣ ಜನರ ಗಮನ ಸೆಳೆದಿದೆ ಎಂದೆಲ್ಲಾ ತಮ್ಮದೇ ಆದ ರೀತಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ನಿರ್ದೇಶಕರು.
ಇದೇ ವೇಳೆ ಫೈಟರ್ ಚಿತ್ರ ಸಕ್ಸಸ್ ಆಗದೇ ಇರುವುದಕ್ಕೆ ಅವರು ಹೇಳಿದ್ದೇನೆಂದರೆ, ನಮ್ಮ ಅದೆಷ್ಟೋ ಜನ ವಿಮಾನದಲ್ಲಿಯೇ ಪ್ರಯಾಣ ಮಾಡಿಲ್ಲ. ವಿಮಾನ ನಿಲ್ದಾಣವನ್ನೂ ಕಂಡಿಲ್ಲ. ಹಾಗಾಗಿಯೇ ನಮ್ಮ ಫೈಟರ್ ಚಿತ್ರದಲ್ಲಿ ಏನಿದೆ? ಹೇಗೆಲ್ಲ ಇದು ಸಾಧ್ಯ ಆಗುತ್ತದೆ ಅನ್ನೋ ಕಲ್ಪನೆ ಕೂಡ ಇಲ್ವೇ ಇಲ್ಲ. ಈ ಕಾರಣಕ್ಕೇನೆ ನಮ್ಮ ಫೈಟರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಚೆನ್ನಾಗಿ ಮಾಡಿಲ್ಲ ಎಂದಿದ್ದಾರೆ. ಆದರೆ ದೇಶಭಕ್ತಿ ಮೆರೆವ ಚಿತ್ರದಲ್ಲಿ ನಗ್ನ ದೃಶ್ಯ ಉದ್ದೇಶಪೂರ್ವಕವಾಗಿ ತುರುಕಿದ್ದು ಯಾಕೆ ಎಂಬ ಬಗ್ಗೆ ನಿರ್ದೇಶಕರು ಸ್ಪಷ್ಟನೆ ಕೊಟ್ಟಿಲ್ಲ. ಅಂದಹಾಗೆ ಫೈಟರ್ ಚಿತ್ರ 250 ಕೋಟಿ ರೂಪಾಯಿಗಳಲ್ಲಿ ಮಾಡಿದ್ದು, ಭಾರತದಲ್ಲಿ ಈವರೆಗೆ ಕಲೆಕ್ಷನ್ ಆಗಿದ್ದು, 5.75 ಕೋಟಿ ರೂಪಾಯಿಗಳು ಮಾತ್ರ.
ನಟರಾದ ಅನುಷ್ಕಾಶೆಟ್ಟಿ- ಪ್ರಭಾಸ್ ಮದ್ವೆ ಫೋಟೋಗಳು ವೈರಲ್: ದೂರು ದಾಖಲಿಸಿದ ಪೋಷಕರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.