D Imman: ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಂಡ ತಮಿಳಿನ ಮಾಸ್ ಮ್ಯೂಸಿಕ್ ಡೈರೆಕ್ಟರ್ ಇಮ್ಮಾನ್‌!

Suvarna News   | Asianet News
Published : Mar 10, 2022, 12:02 PM IST
D Imman: ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಂಡ ತಮಿಳಿನ ಮಾಸ್ ಮ್ಯೂಸಿಕ್ ಡೈರೆಕ್ಟರ್ ಇಮ್ಮಾನ್‌!

ಸಾರಾಂಶ

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಡಿ. ಇಮ್ಮಾನ್‌ ಅವರು ಇದೀಗ ಎರಡನೇ ಮದುವೆಯಾಗುತ್ತಿದ್ದಾರೆ ಎಂದು ಚೆನ್ನೈ ಮೂಲಗಳು ಹೇಳುತ್ತಿದೆ. ಪ್ರಸ್ತುತ ಡಿ.ಇಮ್ಮಾನ್ ಕಾಲಿವುಡ್‌ನ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು.

ತಮಿಳಿನ (Kollywood) ಖ್ಯಾತ ಸಂಗೀತ ನಿರ್ದೇಶಕ (Music Director) ಡಿ. ಇಮ್ಮಾನ್‌ (D Imman) ಅವರು ಇದೀಗ ಎರಡನೇ ಮದುವೆಯಾಗುತ್ತಿದ್ದಾರೆ (Second Marriage) ಎಂದು ಚೆನ್ನೈ ಮೂಲಗಳು ಹೇಳುತ್ತಿದೆ. ಪ್ರಸ್ತುತ ಡಿ.ಇಮ್ಮಾನ್ ಕಾಲಿವುಡ್‌ನ ಟಾಪ್ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಇಮ್ಮಾನ್ 2003 ರಲ್ಲಿ ಬಿಡುಗಡೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ವಿಜಯ್ ಅಭಿನಯದ,'ತಮೀಳನ್'  ಚಿತ್ರದೊಂದಿಗೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮಾಸ್ ಮ್ಯೂಸಿಕ್ ಕಂಪೋಸ್ ಮಾಡಿ ಅಭಿಮಾನಿಗಳ ಮನ ಗೆಲ್ಲುತ್ತಿರುವ ಸಮಯದಲ್ಲೇ ಕೌಟುಂಬಿಕ ಸಮಸ್ಯೆ ಒಳಗೆ ಸಿಲುಕಿದ್ದರು. ಡಿ.ಇಮ್ಮಾನ್ ಅವರು ಏಪ್ರಿಲ್ 2008ರಲ್ಲಿ ಕಂಪ್ಯೂಟರ್ ಇಂಜಿನಿಯರ್ ಮೋನಿಕಾ ಅವರನ್ನು ವಿವಾಹವಾದರು ಮತ್ತು ವೆರೋನಿಕಾ ಡೊರೊಥಿ ಇಮ್ಮಾನ್ ಮತ್ತು ಬ್ಲೆಸಿಕಾ ಕ್ಯಾಥಿ ಇಮ್ಮಾನ್ ಎಂಬ ಇಬ್ಬರು ಪುತ್ರಿಯರನ್ನು ಹೊಂದಿದ್ದಾರೆ. 

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾವಿಬ್ಬರು ವಿಚ್ಛೇದನ ಪಡೆದಿದ್ದೇವೆ ಎಂದು ಡಿ.ಇಮ್ಮಾನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social Media) ಅಧಿಕೃತವಾಗಿ ಘೋಷಿಸಿಕೊಂಡಿದ್ದರು. ಇದೀಗ ವಿಚ್ಛೇದನ ನೀಡಿ 3 ಮೂರು ತಿಂಗಳಲ್ಲಿ ಎರಡನೇ ಮದುವೆಗೆ ಇಮ್ಮಾನ್‌ ಸಿದ್ದತೆ ಮಾಡಿಕೊಂಡಿದ್ದು, ಮೇನಲ್ಲಿ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಮ್ಮಾನ್‌ ಅವರು ಚೆನ್ನೈ ಮೂಲದ 'ಉಮಾ' ಎಂಬುವರನ್ನು ಮದುವೆಯಾಗಲಿದ್ದಾರೆ ಎಂದು ಅವರ ಕುಟುಂಬದ ಆಪ್ತರು ಖಚಿತಪಡಿಸಿದ್ದಾರೆ. ಈ ಬಗ್ಗೆ ಇಮ್ಮಾನ್‌ ಅವರು ಇಲ್ಲಿಯವರೆಗೂ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಮುಖ್ಯವಾಗಿ ಈಗಾಗಲೇ ಇಬ್ಬರು ಕೂಡ ನಿಶ್ಚಿತಾರ್ಥ (Engagement) ಕೂಡ ಮಾಡಿಕೊಂಡಿದ್ದಾರೆ ಎಂದು ಚೆನ್ನೈ ವರದಿಗಳು ಸಹ ದೃಢಪಡಿಸುತ್ತಿದೆ.

D Imman Announces Divorce: 14 ವರ್ಷದ ದಾಂಪತ್ಯ ಕೊನೆ, ಗಾಯಕ ವಿಚ್ಚೇದನೆ

ಸಾಮಾಜಿಕ ಜಾಲತಾಣದ ಮೂಲಕ ವಿಚ್ಛೇದನದ ಬಹಿರಂಗಪಡಿಸಿದ ಡಿ.ಇಮ್ಮಾನ್: ನನ್ನ ಎಲ್ಲಾ ಹಿತೈಷಿಗಳು ಮತ್ತು ಸಂಗೀತ ಪ್ರೇಮಿಗಳು ನೀಡಿದ ಬೆಂಬಲಕ್ಕಾಗಿ ನಾನು ನಿಜವಾಗಿಯೂ ಆಭಾರಿಯಾಗಿದ್ದೇನೆ. ಜೀವನವು ನಮ್ಮನ್ನು ಬೇರೆ ಬೇರೆ ದಾರಿಗಳಲ್ಲಿ ಕೊಂಡೊಯ್ಯುತ್ತಿದ್ದು ಮೋನಿಕಾ ರಿಚರ್ಡ್ ಮತ್ತು ನಾನು ನವೆಂಬರ್ 2020 ರ ಹೊತ್ತಿಗೆ ಪರಸ್ಪರ ಒಪ್ಪಿಗೆಯಿಂದ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿದ್ದೇವೆ. ಇನ್ನು ಮುಂದೆ ನಾವು ಗಂಡ ಮತ್ತು ಹೆಂಡತಿಯಾಗಿರುವುದಿಲ್ಲ. ನಮ್ಮ ಎಲ್ಲಾ ಹಿತೈಷಿಗಳು, ಸಂಗೀತ ಪ್ರೇಮಿಗಳು ಮತ್ತು ಮಾಧ್ಯಮಗಳು ನಮ್ಮ ಖಾಸಗಿತನಕ್ಕೆ ಅವಕಾಶ ನೀಡಿ ಮುಂದುವರಿಯಲು ಸಹಾಯ ಮಾಡಲು ನಾನು ವಿನಂತಿಸುತ್ತೇನೆ. ನಿಮ್ಮ ತಿಳುವಳಿಕೆ, ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದರು.



ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದ ನಂತರ ತಮಿಳು ಚಲನಚಿತ್ರೋದ್ಯಮದಲ್ಲಿ ಡಿ ಇಮ್ಮಾನ್ ಅವರ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ನಯನತಾರಾ ಮತ್ತು ಅಜಿತ್ ಕುಮಾರ್ ಅವರ 2019 ರ ಚಲನಚಿತ್ರ ವಿಶ್ವಾಸಂಗೆ ಸಂಗೀತ ಸಂಯೋಜಿಸಿದ್ದಕ್ಕಾಗಿ ಅವರು ಈ ವರ್ಷ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. ದಕ್ಷಿಣ ಚಲನಚಿತ್ರಗಳಲ್ಲಿನ ಅವರ ಕೆಲಸಕ್ಕಾಗಿ ಡಿ ಇಮ್ಮಾನ್ ಹಲವಾರು ಇತರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಡಿ ಇಮ್ಮಾನ್ ಶಿಳ್ಳೆ, ಗಿರಿ, ಮೈನಾ, ಕುಮ್ಕಿ, ಕಯಲ್, ಜೀವ ಮತ್ತು ಜಿಲ್ಲೆ ಮುಂತಾದ ಚಿತ್ರಗಳಲ್ಲಿ ಹಾಡುಗಳನ್ನು ಸಂಯೋಜಿಸಿ ಹೆಸರು ವಾಸಿಯಾಗಿದ್ದಾರೆ. 

Samantha And NagaChaitanya: ಮದುವೆ ಸೀರೆ ವಾಪಾಸ್ ಕೊಟ್ರಾ ಸಮಂತಾ !

ಇನ್ನು ಪುನೀತ್ ರಾಜಕುಮಾರ್ (Puneeth Rajkumar) ಅಭಿನಯದ 'ನಟಸಾರ್ವಭೌಮ' ಚಿತ್ರ ಸೇರಿದಂತೆ ಕನ್ನಡ -ತಮಿಳು- ತೆಲುಗು- ಮಲಯಾಳಂನಲ್ಲಿ ಸುಮಾರು 100ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಖ್ಯಾತ ತಮಿಳು ಚಲನಚಿತ್ರ ಸಂಗೀತ ನಿರ್ದೇಶಕರು ಡಿ.ಇಮ್ಮಾನ್. ತಮಿಳು ಹೊರತಾಗಿ ಅವರು ತೆಲುಗು, ಹಿಂದಿ, ಮಲಯಾಳಂ ಚಿತ್ರಗಳು ಕೂಡ ಸಂಗೀತ ನೀಡಿದ್ದಾರೆ. ಇನ್ನು ನೀನಾಸಂ ಸತೀಶ್ ಅಭಿನಯದ 'ಅಂಜದ ಗಂಡು' ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೂ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ಡಿ.ಇಮ್ಮಾನ್ ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-2' ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?