
ಅಮೆಝಾನ್ ಪ್ರೈಂ ವಿಡಿಯೋ ಮುಂಬೈ ದಾಳಿ ಕುರಿತ ಮುಂಬೈ ಡೈರೀಸ್ 26/11 ಟೀಸರ್ ರಿಲೀಸ್ ಮಾಡಿದೆ. ಈ ಸಿರೀಸ್ ದಾಳಿಯ ಸಂದರ್ಭ ಸಂತ್ರಸ್ತರನ್ನು ಬದುಕುಳಿಸಲು ಹಗಲು ರಾತ್ರಿ ಅವಿರತವಾಗಿ ದುಡಿದ ವೈದ್ಯರ ಕಷ್ಟಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡಲಿದೆ.
ಘಟನೆ ನಡೆದು 12 ವರ್ಷವಾಗಿದ್ದು, ಅದೇ ದಿನ ಟೀಸರ್ ಕೂಡಾ ರಿಲೀಸ್ ಮಾಡಲಾಗಿದೆ. ಸ್ವಲ್ಪ ಹೊತ್ತಿನ ಶಾರ್ಟ್ ಟೀಸರ್‌ನಲ್ಲಿ ವೈದ್ಯರೂ, ದಾದಿಯರೂ, ಉಳಿದ ಸಿಬ್ಬಂದಿ ಒಳಗೆ ಬರುತ್ತಿದ್ದ ಸಂತ್ರಸ್ತರನ್ನು ಗಡಿಬಿಡಿಯಿಂದ ಉಪಚರಿಸುವುದನ್ನು ಕಾಣಬಹುದು.
ಎಮಿ ಅವಾರ್ಡ್‌ಗೆ ಆಯ್ಕೆಯಾದ ದೆಹಲಿ ಕ್ರೈಂನ ಖಡಕ್ ಪೊಲೀಸ್ ಇವ್ರೇ ನೋಡಿ
ಅತ್ಯಂತ ಕಷ್ಟದ ಸಂದರ್ಭ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಂಡ ವೈದ್ಯರ ಪಾತ್ರವನ್ನು ನಿರ್ವಹಿಸಲಿದ್ದಾರೆ ಮೋಹಿತ್ ರೈನಾ. ನಿಖಿಲ್ ಅಡ್ವಾಣಿ ರಚಿಸಿದ ಮತ್ತು ಎಮೇ ಎಂಟರ್‌ಟೈನ್‌ಮೆಂಟ್ ವೆಬ್ ಸಿರೀಸ್ ನಿರ್ಮಿಸುತ್ತಿದೆ.
ಮುಂಬೈ ಡೈರೀಸ್ 26/11ನಲ್ಲಿ ಕೊಂಕಣ ಸೇನ್ ಶರ್ಮಾ, ಮೋಹಿತ್, ಟೀನಾ ದೇಸಾಯಿ ಮತ್ತು ಶ್ರೇಯಾ ಧನ್ವಂತರಿ ನಟಿಸಲಿದ್ದಾರೆ. ಇದು ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳ ಕಥೆಯನ್ನು ಚಿತ್ರಿಸುತ್ತದೆ ಮತ್ತು ಮಾರ್ಚ್ 2021 ರಲ್ಲಿ ಈ ಸಿರೀಸ್ ಅಮೆಜಾನ್‌ನಲ್ಲಿ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.