ಬಹುಭಾಷಾ ನಟಿ ನಿತ್ಯಾ ಮೆನನ್ ನಟರ ಬದುಕಿನ ರಿಯಾಲಿಟಿ ಕುರಿತು ಆ್ಯಂಕರ್ ಅನುಶ್ರೀ ಜೊತೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?
ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ಸೈ ಎನಿಸಿಕೊಂಡಿರುವ ಬಹುಭಾಷಾ ತಾರೆ ನಿತ್ಯಾ ಮೆನನ್. ಈಕೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿಲ್ಲವಾದರೂ, ಮಾಡಿರುವ ಬಹುತೇಕ ಸಿನಿಮಾಗಳು ಹಿಟ್ ಆಗಿವೆ. ಬೆಂಗಳೂರಿನಲ್ಲಿಯೇ ಹುಟ್ಟಿರುವ ಈ ನಟಿ ಕನ್ನಡತಿ ಎನ್ನುವುದೇ ಹೆಚ್ಚಿನವರಿಗೆ ತಿಳಿದಿಲ್ಲ. ಇವರನ್ನು ದಕ್ಷಿಣದ ವಿದ್ಯಾ ಬಾಲನ್ ಎಂದೂ ಹೇಳಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಹಲವು ಸಿನಿಮಾ ಮಾಡದಿದ್ದರೂ ಮಾಡಿದ ಸಿನಿಮಾಗಳು ಹಿಟ್ ಸಾಲಿನಲ್ಲಿ ನಿಲ್ಲುವುದಕ್ಕೇ ಅವರಿಗೆ ಈ ಬಿರುದು. ಬಹುತೇಕ ಎಲ್ಲಾ ಭಾಷೆಗಳ ಚಿತ್ರಗಳೂ ಇವರದ್ದು ಹಿಟ್ ಆಗಿವೆ. 2006 ರಲ್ಲಿ ಸಂತೋಷ್ ರಾಜ್ ನಿರ್ದೇಶನದಲ್ಲಿ ತೆರೆಕಂಡಿರುವ 7 ಓ ಕ್ಲಾಕ್ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಸಿನಿ ಪಯಣ ಆರಂಭಿಸಿರುವ ನಟಿ, ಜೋಶ್, ಮೈನಾ,ಕೋಟಿಗೊಬ್ಬ 2 ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ, ತಮಿಳು, ತೆಲುಗು, ಮಲಯಾಳಂ ಚಿತ್ರರಂಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಇದೀಗ ನಟಿ ತಮ್ಮ ಸಿನಿ ಪಯಣ ಹಾಗೂ ಕನ್ನಡದ ಬಗ್ಗೆ ಆ್ಯಂಕರ್ ಅನುಶ್ರೀ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಇದರ ವಿಡಿಯೋ ಅನ್ನು ಫೋಕಸ್ ಮೀಡಿಯಾ ಶೇರ್ ಮಾಡಿಕೊಂಡಿದೆ. ಇದರಲ್ಲಿ ನಿತ್ಯಾ ಮೆನನ್ ಅವರು, ಕನ್ನಡದ ಬಗೆಗಿನ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ನನಗೆ ಕನ್ನಡ ಓದುವುದು ಬರೆಯುವುದು ಚೆನ್ನಾಗಿ ಗೊತ್ತು. ಓದುವುದು, ಬರೆಯುವುದು ಮತ್ತು ಮಾತನಾಡುವುದು ಈ ಮೂರು ಬರುವುದು ಕನ್ನಡದಲ್ಲಿ ಮಾತ್ರ ಎಂದು ಹೇಳಿದ್ದಾರೆ. ಬೆಂಗಳೂರಿನ ಉಡುಪಿ ಮಠದ ಪೂರ್ಣಪ್ರಜ್ಞದಲ್ಲಿ ಓದಿದ್ದೇನೆ. ಓದಿರುವುದು ಕನ್ನಡದಲ್ಲಿಯೇ ಎಂದಿದ್ದಾರೆ.
ಆಹಾರದ ಮೇಲೆ ಉಗುಳಿ ಕೊಟ್ರೆ ತಪ್ಪೇನು? ಶ್ರೀರಾಮನ ಉದಾಹರಣೆ ಕೊಟ್ಟ ಸೋನು ಸೂದ್ ವಿರುದ್ಧ ಭಾರಿ ತರಾಟೆ
ಬಣ್ಣದ ಬದುಕಿಗೆ ಬಂದ ಮೇಲೆ ಏನಾದರೂ ಬದಲಾವಣೆ ಆಗಿದೆಯಾ ಎಂಬ ಪ್ರಶ್ನೆಗೆ, ನಿತ್ಯಾ, ನಾವು ಹೇಗೆ ಚಿಕ್ಕ ವಯಸ್ಸಿನಲ್ಲಿ ಇರುತ್ತೇವೆಯೋ ಹಾಗೆಯೇ ಇರುತ್ತೇವೆ. ನಮ್ಮ ಕೈಗೆ ದುಡ್ಡು ಬಂದಾಗ, ಹೆಸರು ಸಿಕ್ಕಾಗ ಒಳಗಡೆ ಏನು ಇರುತ್ತೋ ಅದು ಹೊರಗಡೆ ಬರುತ್ತದೆ. ಯಾರೂ ಚೇಂಜ್ ಆಗಲ್ಲ. ರಿಯಾಲಿಟಿ ಹೊರಗೆ ಬರುವುದು ದುಡ್ಡು, ಹೆಸರು ಬಂದಾಗ ಎಂದಿದ್ದಾರೆ.
ಅಂದಹಾಗೆ ನಿತ್ಯಾ, ಕೊನೆಯದಾಗ ಕಳೆದ ವರ್ಷ ಬಿಡುಗಡೆಯಾದ ಮಲಯಾಳದ ಕೊಲಂಬಿಯಲ್ಲಿ ಕಾಣಿಸಿಕೊಂಡರು. ಸದ್ಯ ಅವರು ತಮಿಳಿನ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಫ್ಯಾಂಟಸಿ ರೋಮ್-ಕಾಮ್ ಎಂದು ಹೇಳಲಾದ ಈ ಚಿತ್ರವನ್ನು ಬಾಸ್ಕ್ ಟೈಮ್ ಥಿಯೇಟರ್ಸ್ ಮತ್ತು ಪಾಪ್ಟರ್ ಮೀಡಿಯಾ ನಿರ್ದೇಶಿಸಿದೆ. ಸದ್ಯ ನಟಿ ಡಿಯರ್ ಎಕ್ಸಸ್ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಷ್ಣುವರ್ಧನ್ ಅವರ ಸಹಾಯಕ ನಿರ್ದೇಶಕರಾಗಿದ್ದ ಗಾಮಿನಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ. ಈ ಸಿನಿಮಾದಲ್ಲಿ ವಿನಯ್ ರಾಯ್ ನಾಯಕನಾಗಿ ನಟಿಸುತ್ತಿದ್ದಾರೆ. ಬಾಸ್ಕ್ ಟೈಮ್ ಥಿಯೇಟರ್ಸ್ ಮತ್ತು ಪಾಪ್ಟರ್ ಮೀಡಿಯಾ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ. ಚಿತ್ರದಲ್ಲಿ ನವದೀಪ್, ದೀಪಕ್ ಪರಂಬೋಲ್, ಪ್ರತೀಕ್ ಬಬ್ಬರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ಏಪ್ರಿಲ್ನಲ್ಲಿ ಇದರ ಪೋಸ್ಟರ್ ರಿಲೀಸ್ ಆಗಿತ್ತು. ಕೈಯಲ್ಲಿ ಕಾಕ್ಟೇಲ್ ಹಿಡಿದ ವಧು ನಿತ್ಯಾ ಮೆನನ್ ಗಮನ ಸೆಳೆದಿದ್ದರು.
ನಟಿ ಕಾಜೋಲ್ ಹಿಂಭಾಗಕ್ಕೆ ಇದೇನಾಗೋಯ್ತು? ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಶಾಕ್