ಬ್ಯಾಗ್ ಹಿಡಿದು ಹೊರಟಾ ನಿಹಾರಿಕಾ. ಏರ್‌ಪೋರ್ಟ್ ಪ್ರವೇಶ ದ್ವಾರದಲ್ಲಿ ತಡೆದಿದ್ದಕ್ಕೆ ತಿಳಿಯಿತ್ತು ಇದು ಇಂದಿನ ಫ್ಲೈಟ್ ಅಲ್ಲ ಎಂದು...
ತೆಲುಗು ನಟ ಹಾಗೂ ನಿರ್ಮಾಪಕ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಇತ್ತೀಚಿಗೆ ಸೃಷ್ಟಿ ಮಾಡಿಕೊಂಡ ಅವಾಂತರ ಸಖತ್ ವೈರಲ್ ಆಗುತ್ತಿದೆ. ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿ ಮತ್ತು ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದಾರೆ. ಆದರೆ ಈಗ ಹೆಡ್‌ಲೈನ್ ಆಗಿರುವುದು ಗೊತ್ತಿಲ್ಲದೆ ಮಾಡಿಕೊಂಡಿರುವ ತುಂಟಾಟದಿಂದ ಎನ್ನಬಹುದು.....
ಹೌದು! ನಿಹಾರಿಕಾ ಕೊನಿಡೆಲಾ ಟ್ರಾವಲ್ ಮಾಡಲು ತುಂಬಾ ಇಷ್ಟ ಪಡುತ್ತಾರೆ. ಒಂಟಿಯಾಗಿ ಹೋಗುವುದು ಅಪರೂಪ....ಜೊತೆಗೆ ಫ್ರೆಂಡ್ ಅಥವಾ ಫ್ಯಾಮಿಲಿ ಇದ್ದೇ ಇರುತ್ತಾರೆ. ಕೆಲವು ದಿನಗಳ ಹಿಂದೆ ಸ್ನೇಹಿತರ ಜೊತೆ ಟ್ರಿಪ್ ಹೋಗಬೇಕು ಎಂದು ನಿಹಾರಿಕಾ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಟಿಕೆಟ್ ಮೇಲಿನ ಮಾಹಿತಿ ಎಲ್ಲವೂ ಸರಿಯಾಗಿದೆ ಎಂದು ಬುಕ್ ಮಾಡುವ ವೇಳೆ ಚೆಕ್ ಮಾಡಿಕೊಂಡಿದ್ದಾರೆ ಅದಾದ ಮೇಲೆ ಆ ಕಡೆ ಗಮನ ಹರಿಸಿಲ್ಲ. ಹೀಗಾಗಿ ಟಿಕೆಟ್ ಬುಕ್ ಮಾಡಿರುವ ದಿನಾಂಕಕ್ಕೂ ಒಂದು ತಿಂಗಳು ಮುನ್ನವೇ ಬ್ಯಾಕ್ ಪ್ಯಾಕ್ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆಕ್‌ಇನ್ ಮಾಡುವ ಸಮಯದಲ್ಲಿ ಗಗನ ಸಖಿ ತಿಳಿಸಿದಾಗ ಮಾಡಿಕೊಂಡಿರುವ ಎಡವಟ್ಟು ಗಮನಕ್ಕೆ ಬಂದಿದೆ.
ಓಡೋಡಿ ಬಂದು ನಟ ಗೋವಿಂದ್‌ನ ಅಪ್ಪಿಕೊಂಡ ಸಲ್ಮಾನ್ ಖಾನ್; ಸಲ್ಲು ಹೊಟ್ಟೆ ನೋಡಿ ನೆಟ್ಟಿಗರು ಶಾಕ್!
'How much discipline is too much discipline? ಒಂದು ತಿಂಗಳು ಮುನ್ನವೇ ವಿಮಾನ ನಿಲ್ದಾಣದ ಕಡೆ ಪ್ರಯಾಣ ಮಾಡಿದ್ದೀವಿ. ಮೇಡಂ ಸರ್ ಮೇಡಂ ಅಂತೆ. ಮೇಡಂ ಮುಂದಿನ ತಿಂಗಳಿಗೆ ಟಿಕೆಟ್ ಬುಕ್ ಮಾಡಿ ಇಂದು ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಬೆಳಗ್ಗೆ 5 ಗಂಟೆಗೆ ಏರ್‌ಪೋರ್ಟ್‌ನಲ್ಲಿ ಇದ್ದೀವಿ. ನಾನು ಯಾರು? ಒಂದು ನಿಮಿಷವೂ ಟಿಕೆಟ್ ಚೆಕ್ ಮಾಡದೆ ಆಕೆ ಹೇಳಿದ್ದನ್ನು ನಂಬಿ ಬಂದಿರುವೆ.' ಎಂದು ಗೆಳತಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ನಾವು ನಿಹಾರಿಕಾ ರೀತಿ ಎಡವಟ್ಟು ಮಾಡಿದ್ದೀವಿ ಆದರೆ ಸುದ್ದಿ ಆಗಿಲ್ಲ ಎಂದಿದ್ದಾರೆ.