ಸುಮಲತಾ ಅವರನ್ನು ನೋಡಿ ಕಲಿ: ಪವನ್ ಕಲ್ಯಾಣ್ ವಿರುದ್ಧ ಕೊಡಲಿ ನಾನಿ ಕಿಡಿ

By Shruthi KrishnaFirst Published Jun 19, 2023, 11:18 AM IST
Highlights

ಸುಮಲತಾ ಅವರನ್ನು ನೋಡಿ ಕಲಿ ಎಂದು ಆಂಧ್ರ ಪ್ರದೇಶದ ಮಿನಿಸ್ಟರ್ ಕೊಡಲು ನಾನಿ ಕಿಡಿ ನಟ, ರಾಜಕಾರಣಿ ಪವನ್ ಕಲ್ಯಾಣ್ ವಿರುದ್ಧ ಕಿಡಿ ಕಾರಿದ್ದಾರೆ. 

ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ವಾರಾಹಿ ಯಾತ್ರೆ ಆರಂಭಿಸಿದ್ದು, ಹೋದಲ್ಲೆಲ್ಲ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಆಡಳಿತ ಪಕ್ಷ ವೈಸಿಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಸಿನಿಮಾ ಶೈಲಿಯಲ್ಲಿಯೇ ಮಾಸ್ ಡೈಲಾಗ್​ಗಳನ್ನು ಜನರ ಗಮನ ಸೆಳೆಯುತ್ತಿದ್ದಾರೆ. ಪವನ್ ಕಲ್ಯಾಣ್ ಮಾಸ್ ಡೈಲಾಗ್​ಗಳಿಗೆ ವೈಸಿಪಿಯ ಸದಸ್ಯರು ತಿರುಗೇಟು ನೀಡುತ್ತಿದ್ದಾರೆ. ಪವನ್ ಕಲ್ಯಾಣ್ ಅವರ ವೀರಾವೇಶದ ಭಾಷಣಕ್ಕೆ ಆಂಧ್ರ ಪ್ರದೇಶದ ಸಚಿವ ಕೊಡಲಿ ನಾನಿ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ. ಪವನ್ ಕಲ್ಯಾಣ್ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರನ್ನು ನೋಡಿ ಕಲಿಯಬೇಕು ಎಂದಿದ್ದಾರೆ.

ಗುಡಿವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಲಿ ನಾನಿ ಮಾತನಾಡಿ ಪವನ್ ಕಲ್ಯಾಣ್ ವಿರುದ್ಧ ಕಿಡಿ ಕಾರಿದರು. ಆ ಕಾರ್ಯಕ್ರಮದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಕೂಡ ಪಾಲ್ಗೊಂಡಿದ್ದರು. 'ಕಳೆದ ಮೂರು ದಿನಗಳಿಂದ ಒಬ್ಬ ಯಾತ್ರೆ ಹೊರಟಿದ್ದಾನೆ. ಅವನೇ ಪವನ್ ಕಲ್ಯಾಣ್. ವಿಧಾನಸಭೆಗೆ ಪ್ರವೇಶಿಸಿಯೇ ತೀರುತ್ತೇನೆ ಧಮ್ ಇದ್ದರೆ ನನ್ನನ್ನು ತಡೆಯಿರಿ ಎಂದು ನಿಮಗೆ (ಸಿಎಂ ಜಗನ್) ಸವಾಲು ಹಾಕಿದ್ದಾನೆ. ನೀವು ಅದನ್ನೆಲ್ಲ ಗಮನಿಸಿರುವುದಿಲ್ಲ ಬಿಡಿ. ಆದರೆ ಅವನ ಹುಚ್ಚುತನ ಕಂಡು ಅವನು ಪಕ್ಷ ಸ್ಥಾಪಿಸಿದ್ದು, ಚಂದ್ರಬಾಬು ನಾಯ್ಡು ಹಾಗೂ ಇನ್ನಿತರರ ಜೊತೆ ಕೈಜೋಡಿಸಿದ್ದು ಜನಗಳಿಗಾಗಿ ಅಲ್ಲ ಬದಲಿಗೆ ಅವನು ಗೆದ್ದು ವಿಧಾನಸಭೆ ಪ್ರವೇಶಿಸಲು ಮಾತ್ರ' ಎಂದಿದ್ದಾರೆ.

Latest Videos

ಇದೇ ವೇಳೆ ನಟಿ, ಸಂಸದೆ ಸುಮಲತಾ ಹಾಗೂ ನವನೀತ್ ಕೌರ್ ಹೆಸರನ್ನು ಉಲ್ಲೇಖಿಸಿದ್ದಾರೆ. ಪಕ್ಕದ ಕರ್ನಾಟಕದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ನಟಿ ಸುಮಲತಾ ಇದ್ದಾರೆ. ಮಹಾರಾಷ್ಟ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ನಟಿ ನವನೀತ್ ಕೌರ್ ಇದ್ದಾರೆ. ಇವರಿಬ್ಬರಿಂದ ಪವನ್ ಕಲ್ಯಾಣ್ ಕಲಿಯಬೇಕು. ನೀವು ವಿಧಾನಸಭೆ ಪ್ರವೇಶಿಸಬೇಕಾದರೆ ಪಕ್ಷೇತರರಾಗಿ ಸ್ಪರ್ಧಿಸಿ, ಅದನ್ನು ಬಿಟ್ಟು ಹದಿನಾರು ಪಕ್ಷದೊಂದಿಗೆ ಕೈ ಜೋಡಿಸಿ ನನ್ನನ್ನು ಸೋಲಿಸಿ ನೋಡೋಣ ಎಂದು ಹೇಳೋದಲ್ಲ' ಎಂದು ಹೇಳಿದ್ದಾರೆ. 

Pawan Kalyan: ಮೂರು ಮದ್ವೆಯಾದೆ, ಆತ್ಮಹತ್ಯೆಗೆ ಟ್ರೈ ಮಾಡಿದ್ದೆ... ಗುಟ್ಟು ಬಿಚ್ಚಿಟ್ಟ ನಟ ಪವನ್​ ಕಲ್ಯಾಣ್

'ಅವರ ಉದ್ದೇಶ ಏನು ಎನ್ನುವುದು ಅವರ ಮಾತಿನಲ್ಲೇ ಅರ್ಥವಾಗುತ್ತದೆ. ಪವನ್ ಕಲ್ಯಾಣ್ ಪಕ್ಷ ಕಟ್ಟಿದ್ದು, ಜನರ ಮುಂದೆ ಹೋಗಿ ಚಂದ್ರಬಾಬು ನಾಯ್ಡು ಮತ್ತಿತರ ಪಕ್ಷಗಳೊಂದಿಗೆ ಕೈ ಜೋಡಿಸುತ್ತಿರುವುದು ಜನರ ಹಿತಕ್ಕಾಗಿ ಅಲ್ಲ ಅವರ ಸ್ವಂತ ಆಸೆಗಾಗಿ. ಸಿಎಂ ಆಗಲು ಇಷ್ಟೆಲ್ಲ ಕಸರತ್ತು ಮಾಡುತ್ತಿದ್ದಾರೆ. ಪವನ್‌ಗೆ ಶಾಸಕನಾಗಬೇಕು, ಚಂದ್ರಬಾಬು ನಾಯ್ಡು ಪ್ರತಿಪಕ್ಷ ನಾಯಕನಾಗಬೇಕು ಎಂಬ ಆಸೆ ಇದೆ. ಏನೇ ಆಗಲಿ ಜಗನ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಶಕ್ತಿ ಯಾರಿಗೂ ಇಲ್ಲ, ಈ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ' ಎಂದು ಕೊಡಲಿ ನಾಣಿ ಕಿಡಿ ಕಾರಿದ್ದಾರೆ. 

ಮಗನ ಸಂಗೀತ್ ಕಾರ್ಯಕ್ರಮಕ್ಕೆ ವಜ್ರದ ನೆಕ್ಲೇಸ್ ಧರಿಸಿದ ಸುಮಲತಾ ಅಂಬರೀಶ್!

ನವನೀತ್ ಕೌರ್ ಮೂಲತಃ ಮಹಾರಾಷ್ಟ್ರದವರು. ರಾಜಕೀಯದಲ್ಲಿ ಗುರುತಿಸಿಕೊಳ್ಳುವ ಮೊದಲು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದರು.ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ನವನೀತ್ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಇನ್ನೂ ನಟಿ ಸುಮಲತಾ ಅಂಬರೀಷ್ ಕೂಡ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ನಟ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಲೋಕಸಭೆ ಪ್ರವೇಶಿಸಿದ್ದರು. ಇದೀಗ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ.

click me!