ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಅವರ ಬ್ಯುಸಿನೆಸ್, ಆಸ್ತಿ, ಐಷಾರಾಮಿ ಜೀವನ ಶೈಲಿ ಎಲ್ಲರನ್ನು ಸೆಳೆಯುತ್ತದೆ. ಅಂಬಾನಿ ಕುಟುಂಬ ವಿಶ್ವದ ಅನೇಕ ಕಡೆ ಆಸ್ತಿ ಮಾಡಿದೆ. ಲಂಡನ್ ನಲ್ಲಿರುವ ದುಬಾರಿ ದುನಿಯಾ ಕಣ್ಣುಕುಕ್ಕುತ್ತೆ.
ಭಾರತೀಯ ಬಿಲಿಯನೇರ್, ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿ. 113 ಶತಕೋಟಿ ಡಾಲರ್ ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಮುಖೇಶ್ ಅಂಬಾನಿ ಹೊಂದಿದ್ದಾರೆ. ಇದು ಅನೇಕ ಸಣ್ಣ ದೇಶಗಳ ಆರ್ಥಿಕತೆಯ ಗಾತ್ರಕ್ಕೆ ಸಮಾನವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿರುವ ಮುಖೇಶ್ ಅಂಬಾನಿ, ಆಸ್ತಿ ಸಾಕಷ್ಟಿದೆ. ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ಮುಂಬೈನ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ. ಇದು ಅಂದಾಜು 4.6 ಬಿಲಿಯನ್ ಡಾಲರ್ ಖಾಸಗಿ ನಿವಾಸವಾಗಿದೆ. ಆಂಟಿಲಿಯಾ 27 ಮಹಡಿಯನ್ನು ಹೊಂದಿದ್ದು, ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಕಟ್ಟಡದ ರಚನೆ ಮತ್ತು ಅದರ ಒಳಾಂಗಣವು ಎಲ್ಲರನ್ನೂ ಸೆಳೆಯುತ್ತದೆ. ಕಟ್ಟಡದ ಹೊರಗೆ ನಿಂತು ಜನರು ಸೆಲ್ಫಿ ತೆಗೆದುಕೊಳ್ಳೋದು, ಆಂಟಿಲಿಯಾ ಫೋಟೋ ಕ್ಲಿಕ್ಕಿಸೋದು ಸಾಮಾನ್ಯ.
ಮುಖೇಶ್ ಅಂಬಾನಿ (Mukesh Ambani) ಆಸ್ತಿ ಕೇವಲ ಮುಂಬೈ (Mumbai) ನಲ್ಲಿ ಮಾತ್ರ ಇಲ್ಲ. ಅವರು ವಿಶ್ವದ ಇನ್ನೂ ಅನೇಕ ಭಾಗಗಳಲ್ಲಿ ಅತ್ಯಂತ ದುಬಾರಿ ಆಸ್ತಿ ಹೊಂದಿದ್ದಾರೆ. ಅವುಗಳಲ್ಲಿ ಒಂದು ಲಂಡನ್ ಸ್ಟೋಕ್ ಪಾರ್ಕ್ (Stoke Park).
ಭಾರತದ ಆರ್ಥಿಕ ಶಿಸ್ತಿಗೆ ಐಎಂಎಫ್ ಮುಕ್ತ ಪ್ರಶಂಸೆ
ಸ್ಟೋಕ್ ಪಾರ್ಕ್ ಎಸ್ಟೇಟ್ ಹೇಗಿದೆ ಗೊತ್ತಾ? : 2021 ರಲ್ಲಿ, ಬಿಲಿಯನೇರ್ ಮುಖೇಶ್ ಅಂಬಾನಿ ಲಂಡನ್‌ನಲ್ಲಿರುವ ಐಷಾರಾಮಿ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು 79 ಮಿಲಿಯನ್ ಡಾಲರ್ ಅಂದ್ರೆ ಸುಮಾರು 592 ಕೋಟಿಗೆ ಖರೀದಿಸುವ ಮೂಲಕ ಸುದ್ದಿ ಮಾಡಿದ್ದರು. ಗೋಲ್ಡ್ ಫಿಂಗರ್ ಮತ್ತು ಟುಮಾರೊ ನೆವರ್ ಡೈಸ್‌ನಂತಹ ಅಪ್ರತಿಮ ಜೇಮ್ಸ್ ಬಾಂಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸ್ಟೋಕ್ ಪಾರ್ಕ್ ತನ್ನದೇ ಆದ ಸ್ಟಾರ್-ಸ್ಟಡ್ ಇತಿಹಾಸವನ್ನು ಹೊಂದಿದೆ. ತಮ್ಮ ಅದ್ದೂರಿ ಜೀವನಶೈಲಿಗೆ ಹೆಸರುವಾಸಿಯಾದ ಅಂಬಾನಿ ಕುಟುಂಬವು ಈ ರತ್ನವನ್ನು ತಮ್ಮ ಸಂಗ್ರಹಕ್ಕೆ ಸೇರಿಸಿದೆ.
ಪ್ರಶಾಂತ ಇಂಗ್ಲಿಷ್ ಗ್ರಾಮಾಂತರದಲ್ಲಿ ನೆಲೆಗೊಂಡಿರುವ ಸ್ಟೋಕ್ ಪಾರ್ಕ್ 300 ಎಕರೆಗಳಷ್ಟು ಸುಂದರವಾದ ಉದ್ಯಾನವನ ಹೊಂದಿದೆ. ಗಿಜಿಬಿಜಿ ಲಂಡನ್‌ನಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಇದು ಪ್ರಶಾಂತವಾಗಿದೆ. ಇಲ್ಲಿ ಐಷಾರಾಮಿ ಪಂಚತಾರಾ ಹೊಟೇಲ್ ಇದೆ. ಇದರಲ್ಲಿ 49 ಅದ್ದೂರಿ ಬೆಡ್‌ರೂಮ್ ಗಳಿವೆ. ಅಲ್ಲಿ ಅತಿಥಿಗಳಿಗೆ ಓಕ್ ಪ್ಯಾನೆಲ್‌ಗಳ ಕೊಠಡಿಗಳು ಮತ್ತು ಉನ್ನತ ದರ್ಜೆಯ ಸೌಕರ್ಯ ಒದಗಿಸುತ್ತದೆ.
ಐಷಾರಾಮಿಗೆ ಸೂಕ್ತವಾದ ಸೌಲಭ್ಯಗಳು
1) ಸ್ಟೋಕ್ ಪಾರ್ಕ್ ಎಸ್ಟೇಟ್ ಒಳಗೆ ರೆಸ್ಟೋರೆಂಟ್‌ಗಳು ಮತ್ತು ಲಾಂಜ್ ಗಳಿವೆ.
2) ಇಲ್ಲಿಯೇ ಸ್ಪಾ ಮತ್ತು ಜಿಮ್ ಇದೆ
3) 13 ಟೆನಿಸ್ ಕೋರ್ಟ್‌ಗಳು ಮತ್ತು 27 ಹೋಲ್ ಚಾಂಪಿಯನ್‌ಶಿಪ್ ಗಾಲ್ಫ್ ಕೋರ್ಸನ್ನು ಇದು ಒಳಗೊಂಡಿದೆ.
4) 14 ಎಕರೆ ಖಾಸಗಿ ಉದ್ಯಾನ
5) ವಿಂಬಲ್ಡನ್ ಪ್ರಮಾಣಿತ ಟೆನಿಸ್ ಅಂಗಳ ಇಲ್ಲಿದೆ.
ಐತಿಹಾಸಿಕ ಮೋಡಿ ಮತ್ತು ಆಧುನಿಕ ಐಷಾರಾಮಿ ಸೌಲಭ್ಯಗಳ ಮಿಶ್ರಣವಾದ ಸ್ಟೋಕ್ ಪಾರ್ಕ್ ಪ್ರಪಂಚದಾದ್ಯಂತದ ತನ್ನದೇ ಆದ ಘನತೆ ಹೊಂದಿದೆ. ಅದರ ಪ್ರಶಾಂತ ಭೂದೃಶ್ಯ ಮತ್ತು ವಿಶ್ವದರ್ಜೆಯ ಸೌಲಭ್ಯಗಳ ಆಕರ್ಷಣೆಯು ಅತ್ಯಂತ ಶ್ರೀಮಂತ ಪ್ರವಾಸಿಗರನ್ನು ಮರೆಯಲಾಗದ ವಿಹಾರಕ್ಕಾಗಿ ಆಕರ್ಷಿಸುತ್ತದೆ.
ಸ್ಟೋಕ್ ಪಾರ್ಕ್ ಇತಿಹಾಸ : ಮುಖೇಶ್ ಅಂಬಾನಿ ಇದನ್ನು ಸ್ಟೋಕ್ ಪಾರ್ಕ್ ಇಂಟರ್ನ್ಯಾಷನಲ್ ಗ್ರೂಪ್‌ನಿಂದ ಖರೀದಿಸಿದ್ದಾರೆ. ಈ ಗುಂಪಿನ ಮಾಲೀಕರು ಯುಕೆ ರಾಜ ಕುಟುಂಬ. ಕಿಂಗ್ ರೋಜರ್ 1908 ರಲ್ಲಿ ಇಂಟರ್ನ್ಯಾಷನಲ್ ಗ್ರೂಪ್ ಅನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ಕಂಟ್ರಿ ಕ್ಲಬ್‌ನ ಮಾಲೀಕರಾಗಿದ್ದಾರೆ. ಆದರೆ 2018 ರಲ್ಲಿ ಅವರು ಈ ಮಹಲನ್ನು ಮಾರಾಟಕ್ಕೆ ಪಟ್ಟಿ ಮಾಡಿದರು. 1908 ರಲ್ಲಿ ಕಂಟ್ರಿ ಕ್ಲಬ್ ಆಗುವ ಮೊದಲು, ಸ್ಟೋಕ್ ಪಾರ್ಕ್ ಖಾಸಗಿ ನಿವಾಸವಾಗಿತ್ತು.
ಭಾರತೀಯರ ಬಳಿ ಹಣವಿಲ್ವಾ? ಖರ್ಚು ನೋಡಿದ್ರೆ ಹಾಗನ್ನಿಸಲ್ವಲ್ಲ!
ಮುಖೇಶ್ ಅಂಬಾನಿ ಬಳಿ ಇರುವ ಇತರ ಪ್ರಾಪರ್ಟಿ : ಮುಖೇಶ್ ಅಂಬಾನಿ ವಿಶ್ವದ ಅನೇಕ ಭಾಗಗಳಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ದುಬೈನ ಪಾಮ್ ಜುಮೇರಾವು ಬೀಚ್ ಬಳಿ ಅವರು ಐಷಾರಾಮಿ ಹಾಗೂ ದುಬಾರಿ ಬೆಲೆಯ ಬಂಗಲೆ ಹೊಂದಿದ್ದಾರೆ. ಇದರ ಮೌಲ್ಯ ಸುಮಾರು 640 ಕೋಟಿ ಎಂದು ಅಂದಾಜಿಸಲಾಗಿದೆ.