ಅಜ್ಜಿ ಬಬಿತಾ ಕಪೂರ್ ಹುಟ್ಟುಹಬ್ಬಕ್ಕೆ‌ ಕರೀನಾ ಮಗ ತೈಮೂರ್ ಗಿಫ್ಟ್ ಇದು!

By Suvarna News  |  First Published Apr 20, 2024, 4:42 PM IST

ತಾಯಿ ಬಿಬಿತಾಗೆ ಮಗ ತೈಮೂರ್ ಕೊಟ್ಟ ಹುಟ್ಟಿದಬ್ಬದ ಉಡುಗೊರೆ ಫೋಟೋವನ್ನು ಕರೀನಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಫ್ಯಾನ್ಸ್ ಪ್ರತಿಕ್ರಿಯೆ ಹೇಗಿದೆ ನೋಡಿ. 


ಅಜ್ಜ-ಅಜ್ಜಿಯರು ಮಕ್ಕಳಿಗೆ ಎಂದಿಗೂ ಫೇವರಿಟ್‌. ಅಜ್ಜಿ-ತಾತ ಎಂದರೆ ಮಕ್ಕಳ ಪಾಲಿಗೆ ಪೀತಿಯ ಹೊಳೆಯನ್ನೇ ಹರಿಸುವ ಆಪ್ತರು. ಅವರು ಯಾರ ಮಕ್ಕಳೇ ಆಗಿರಲಿ, ದೊಡ್ಡ ದೊಡ್ಡ ಸೆಲೆಬ್ರಿಟಿ ಮಕ್ಕಳಾಗಿರಲೀ ಅತ್ಯಂತ ಶಿಕ್ಷಿತ ಕುಟುಂಬದಲ್ಲಾಗಲೀ ಅಥವಾ ಸಾಮಾನ್ಯ ಮನೆಯಲ್ಲಾಗಲೀ ಮಕ್ಕಳಿಗೆ ಹಿರಿಯ ಜೀವಗಳನ್ನು ಕಂಡರೆ ಭಾರೀ ಪ್ರೀತಿ. ಅವರಿಗೂ ಅಷ್ಟೆ, ಮೊಮ್ಮಕ್ಕಳ ಮೇಲೆ ಮಕ್ಕಳಿಗಿಂತ ಒಂದು ಕೈ ಹೆಚ್ಚೇ ಪ್ರೀತಿ-ವ್ಯಾಮೋಹ ಇರುವುದು ಕಂಡುಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಬಾಲಿವುಡ್‌ ಬೇಬೋ ಎನಿಸಿಕೊಂಡಿರುವ ಕರೀನಾ ಕಪೂರ್‌ ತಮ್ಮ ಮಗ ತೈಮೂರ್‌ ತನ್ನ ಅಜ್ಜಿಯ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿರುವ ರೀತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಶನಿವಾರ ಅವರು ತಮ್ಮ ತಾಯಿ ಬಬಿತಾ ಕಪೂರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಈ ವಿಶೇಷ ಚಿತ್ರಗಳನ್ನು ಹಂಚಿಕೊಂಡಿರುವುದು ವಿಶೇಷ.
ಕರೀನಾ ಕಪೂರ್‌ (Kareena Kapoor) ತಮ್ಮ ಮಗ ತೈಮೂರ್‌ ಅಲಿ ಖಾನ್ ಫೋಟೋವನ್ನು (Photo) ಶೇರ್‌ (Share) ಮಾಡಿಕೊಂಡಿದ್ದು, ಅದರಲ್ಲಿ ಆತ ತನ್ನ ಅಜ್ಜಿ ಬಬಿತಾ ಕಪೂರ್‌ (Babita Kapoor) ಹುಟ್ಟುಹಬ್ಬಕ್ಕೆ ವಿಶ್‌ ಮಾಡಲೆಂದು ಚಿತ್ರ ಬಿಡಿಸುತ್ತಿರುವುದು ಕಂಡುಬರುತ್ತದೆ. ಕರೀನಾ ಹಲವುಪಿಕ್ಚರ್‌ ಶೇರ್‌ ಮಾಡಿದ್ದಾರೆ. ಒಂದರಲ್ಲಿ ತೈಮೂರ್‌ (Taimur Ali Khan) ಸಿದ್ಧಪಡಿಸಿದ ಕಾರ್ಡ್‌ ಹಾಗೂ ಇನ್ನೊಂದರಲ್ಲಿ ತೈಮೂರ್‌ ಚಿತ್ರ ಬಿಡಿಸುತ್ತಿರುವ ಫೋಟೋ ಕೂಡ ಇದೆ.  

ಇಸ್ಲಾಂ ದೇಶದಲ್ಲಿದ್ದಿ ಎಂದು ಯೂಟ್ಯೂಬರ್ ತಲೆಗೆ ಬಟ್ಟೆ ಹಾಕಿದ ಪಾಕ್ ಯುವಕ; ಆಕೆಯ ಪ್ರತಿಕ್ರಿಯೆಗೆ ಶಹಬ್ಬಾಸ್ ಎಂದ ನೆಟಿಜನ್ಸ್ ..

Tap to resize

Latest Videos

ತಮ್ಮ ಇನ್‌ ಸ್ಟಾಗ್ರಾಮ್‌ ಪೋಸ್ಟ್‌ಗೆ “ಹ್ಯಾಪಿ ಬರ್ತ್‌ಡೇ (Birthday) ಟು ಅವರ್‌ ವರ್ಲ್ಡ್‌ (ಹೃದಯದ ಮತ್ತು ರೇನ್‌ಬೋ ಇಮೋಜಿಗಳಿವೆ)… ಮೇರಿ ಮಾ (ಮೈ ಮದರ್-ಮೂರು ಹೃದಯದ ಇಮೋಜಿಗಳಿವೆ)ʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಮೊದಲ ಚಿತ್ರದಲ್ಲಿ ತೈಮೂರ್‌ ಡ್ರಾಯಿಂಗ್‌ (Drawing) ಮಾಡುತ್ತಿರುವುದು ಕಂಡುಬಂದರೆ, ಎರಡನೇ ಫೋಟೋದಲ್ಲಿ ಆತ ರಚಿಸಿದ ಬರ್ತ್‌ಡೇ ಕಾರ್ಡ್‌ ಕಂಡುಬರುತ್ತದೆ. ಕಾರ್ಡಿನಲ್ಲಿ ಆಮೆ, ಪಿಗ್ಗಿಬ್ಯಾಂಕ್‌ ಮತ್ತು ಬಣ್ಣಬಣ್ಣದ ಉಡುಪು ಧರಿಸಿದ ಗೋರಿಲ್ಲಾ ಮತ್ತು ಒಂದು ಕಿರೀಟದ ಸ್ಟಿಕ್ಕರ್‌ ಕಂಡುಬರುತ್ತದೆ!

ಅಜ್ಜಿಗಾಗಿ ಕ್ಯೂಟ್‌ ಸಂದೇಶ
ಕಾರ್ಡಿನಲ್ಲಿ ತೈಮೂರ್‌ ಕ್ಯೂಟ್‌ (Cute) ಆಗಿ ಸಂದೇಶವನ್ನೂ ನೀಡಿದ್ದಾನೆ. “ಹ್ಯಾಪಿ ಬರ್ತ್‌ಡೇ, ನನಗೆ ಚಿಕನ್‌ ವಿಂಗ್ಸ್‌ ಬೇಕು, ಕ್ಯೂಟಿ ಗ್ರ್ಯಾನಿ, ನಾನು ನಿನ್ನನ್ನು ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ಪ್ರೀತಿ (Love) ಮಾಡುತ್ತೇನೆ. ನಾನು ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ. ಲವ್‌ ಅಮ್ಮಾ, ಟಿಮ್‌ ಮತ್ತು ಅಬ್ಬಾ ಮತ್ತು ಜೇʼ ಎಂದು ಬರೆದಿದ್ದಾನೆ. ಮತ್ತೊಂದು ಚಿತ್ರದಲ್ಲಿ ಜೇ ಅರ್ಥಾತ್‌ ಜಹಾಂಗೀರ್ ಕಂಡುಬರುತ್ತಿದ್ದು, ಆತ ಕೂಡ ಪೇಪರ್‌ ಮೇಲೆ ಏನೋ ಗೀಚುತ್ತಿರುವುದು ಕಂಡುಬರುತ್ತದೆ. ಮತ್ತೊಂದು ಫೋಟೋದಲ್ಲಿ ಕರೀನಾ ತಮ್ಮ ತಾಯಿ (Mother) ಬಬಿತಾ ಅವರನ್ನು ಆಪ್ತವಾಗಿ ಹಿಡಿದುಕೊಂಡಿರುವ ಫೋಟೋ ಇದೆ. 

ದುಬಾರಿ ಲ್ಯಾಂಬೋರ್ಗಿನಿ ಮೇಲೆ ಹತ್ತಿ ಡ್ಯಾನ್ಸ್, ರೀಲ್ಸ್ ಹುಚ್ಚಿಗೆ ಒಡೆದೋಯ್ತು ಕಾರಿನ ಗಾಜು!

ಕರೀನಾ ಕಪೂರ್‌ ತಮ್ಮ ತಾಯಿ ಬಬಿತಾ ಕಪೂರ್‌ ಅವರಿಂದ ಬಹಳಷ್ಟು ಪ್ರೇರಣೆ ಪಡೆದಿದ್ದು, ಅವರ ಜೀವನ (Life) ಮತ್ತು ವೃತ್ತಿ ರೂಪಿಸುವಲ್ಲಿ ಬಬಿತಾ ಪಾತ್ರ ಮಹತ್ವದ್ದಾಗಿದೆ. ರಣಧೀರ್‌ ಕಪೂರ್‌ ಮತ್ತು ಬಬಿತಾ ಪುತ್ರಿಯಾಗಿರುವ ಕರೀನಾ ಕಪೂರ್‌ ಬಾಲಿವುಡ್‌ ಬೇಬೋ ಎಂದು ಕರೆಸಿಕೊಂಡಿದ್ದಾರೆ. ನಟ ಸೈಫ್‌ ಅಲಿ ಖಾನ್‌ ಅವರನ್ನು ವಿವಾಹವಾಗಿರುವ ಕರೀನಾ, ಹಬ್ಬಗಳು ಮತ್ತು ಫ್ಯಾಮಿಲಿ ಗೆಟ್‌ ಟುಗೆದರ್‌ ಸಮಯದಲ್ಲಿ ತಮ್ಮ ಪುತ್ರರಿಬ್ಬರ ಭಾವಚಿತ್ರಗಳನ್ನು ಆಗಾಗ್ಗೆ ಪೋಸ್ಟ್‌ (Post) ಮಾಡುತ್ತಿರುತ್ತಾರೆ. 


ಒಂದು ಸಂದರ್ಶನದಲ್ಲಿ ಕರೀನಾ ಕಪೂರ್‌ ತಮ್ಮ ತಾಯಿ ಬಬಿತಾ ಬಗ್ಗೆ “ಅಮ್ಮ ಅತ್ಯಂತ ಮಧ್ಯಮ ವರ್ಗದಿಂದ ಬಂದವರು. ನನ್ನ ತಾತ (ಹರಿ ಶಿವದಾಸಾನಿ) ಅವರೂ ಸಹ ನಟರಾಗಿದ್ದರೂ ನಾವು ಚಿತ್ರರಂಗದ ಕುಟುಂಬದಿಂದ ಬಂದಿದ್ದೇವೆ ಎಂದು ಗೊತ್ತಾಗದಿರುವಷ್ಟು ಸಹಜವಾಗಿ ನಮ್ಮನ್ನು ಬೆಳೆಸಿದ್ದರುʼ ಎಂದು ಹೇಳಿಕೊಂಡಿದ್ದಾರೆ. 

click me!