ನಾಯಿಯನ್ನು ಥಳಿಸಿದ ಮಹಿಳೆ: ವಿಡಿಯೋ ಶೇರ್​ ಮಾಡಿದ ನಟಿ ಆಲಿಯಾ ಭಟ್​ ಹೇಳಿದ್ದೇನು?

Published : Apr 20, 2024, 04:21 PM IST
ನಾಯಿಯನ್ನು ಥಳಿಸಿದ ಮಹಿಳೆ: ವಿಡಿಯೋ ಶೇರ್​ ಮಾಡಿದ ನಟಿ ಆಲಿಯಾ ಭಟ್​ ಹೇಳಿದ್ದೇನು?

ಸಾರಾಂಶ

ನಾಯಿಯನ್ನು ಮಹಿಳೆಯೊಬ್ಬಳು ಕ್ರೂರವಾಗಿ ಥಳಿಸಿದ ವಿಡಿಯೋ ಶೇರ್​ ಮಾಡಿದ ನಟಿ  ಆಲಿಯಾ ಭಟ್​ ಹೇಳಿದ್ದೇನು?  

ಇತ್ತೀಚೆಗೆ ಗೂಳಿಯೊಂದು ಬೀದಿನಾಯಿಗಳ ಮೇಲೆ ದಾಳಿ ಮಾಡುತ್ತಿದ್ದಾಗ ಬಾಲಕನೊಬ್ಬ ಆ ನಾಯಿಗಳನ್ನು ರಕ್ಷಣೆ ಮಾಡುವ ವಿಡಿಯೋವನ್ನು ನಟಿ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಇದೀಗ ಬಾಲಿವುಡ್​ ನಟಿ ಆಲಿಯಾ ಭಟ್‌ ಇನ್ನೊಂದು ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಕೆಲಸದಾಕೆಯೊಬ್ಬಳು ನಾಯಿಯನ್ನು ಹೊಡೆಯುತ್ತಿರುವುದದನ್ನು ನೋಡಬಹುದು. ಸೋಫಿ ಚೌಧರಿ ಎಂಬ ಗಾಯಕಿಯು ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಅದೇ ವಿಡಿಯೋ ಅನ್ನು ಆಲಿಯಾ ಶೇರ್ ಮಾಡಿಕೊಂಡಿದ್ದಾರೆ.

ಅಷ್ಟಕ್ಕೂ ಇದು ನಡೆದಿರುವುದು ಮುಂಬೈನಲ್ಲಿ. ಫುಟ್​ಪಾತ್​ನಲ್ಲಿದ್ದ  ನಾಯಿಯೊಂದಕ್ಕೆ ಮಹಿಳೆ ಹೊಡೆಯುವುದನ್ನು ನೋಡಬಹುದು.  ಈ ರಾಕ್ಷಸಿಯಿಂದ ಕ್ರೂರವಾಗಿ ಥಳಿಸಲ್ಪಟ್ಟ ಸುಂದರವಾದ ಬೀಗಲ್‌ ಬೀರಾನ ಮಾಲೀಕರ ಮಾಹಿತಿ ದೊರಕಿದೆ. ಪಾರ್ಥ್‌ ಮತ್ತು ಶ್ವೇತಾ ಅವರನ್ನು ಸಂಪರ್ಕಿಸಲು ಯಶಸ್ವಿಯಾಗಿದ್ದೇನೆ. ಅವರು ಈ ವಿಡಿಯೋ ನೋಡಿರಲಿಲ್ಲ. ಇದನ್ನು ನೋಡಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ನಾಯಿಗೆ ಆರು ತಿಂಗಳ ಪ್ರಾಯವೆಂದು ನನಗೆ ಪಾರ್ಥ್‌ ಹೇಳಿದ್ದಾರೆ. ಈ ದಂಪತಿ ದುಬೈ ವಾಸಿಗಳು, ಅವರು ದುಬೈನಿಂದ ಬರಲಿದ್ದಾರೆ. ಈಗಲೂ ಆ ಕೆಲಸದಾಕೆ ಅವರ ಉದ್ಯೋಗಿ ಎಂಬ ಮಾಹಿತಿ ದೊರಕಿದೆ ಎಂದು ಸೋಫಿಯಾ ಚೌಧರಿ ಪೋಸ್ಟ್‌ ಮಾಡಿದ್ದರು. ಅದನ್ನು ಇದೀಗ ನಟಿ ಆಲಿಯಾ ಭಟ್‌ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಐದು ವರ್ಷಗಳಲ್ಲಿ ಹಲವು ಗರ್ಭಪಾತ: ಆಮೀರ್​ ​ಖಾನ್​ ಮಾಜಿ ಪತ್ನಿ ಕಿರಣ್​ ರಾವ್​ ಓಪನ್​ ಮಾತು!
 
 ಇದೀಗ ಈ ವಿಡಿಯೋಗೆ ಆಲಿಯಾ ರಿಯಾಕ್ಟ್​ ಮಾಡಿದ್ದಾರೆ.  ಇನ್ನು ಮುಂದೆ  ಈ ರೀತಿ ಯಾರಾದರೂ ಸಾಕು ಪ್ರಾಣಿಗಳನ್ನು  ಅಥವಾ ಯಾವುದೇ ಪ್ರಾಣಿಗೆ ಹೊಡೆಯುವುದನ್ನು ಕಂಡರೆ ತಕ್ಷಣ ವಿಡಿಯೋ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಹಂಚಿಕೊಳ್ಳಿ. ಇಂತಹ ಜನರಿಗೆ ಕಠಿಣ ಶಿಕ್ಷೆ ದೊರಕುವಂತೆ ಮಾಡಬೇಕು. ನಾವು ಮನುಷ್ಯತ್ವ ಕಳೆದುಕೊಳ್ಳಬಾರದು ಎಂದಿದ್ದಾರೆ. 

ಅಂದಹಾಗೆ, ನಟಿ ಆಲಿಯಾ ಕೂಡ ಪ್ರಾಣಿ ಪ್ರೇಮಿ.  ಹಿಂದೆಯೂ ಇವರು ಹಲವು ಬಾರಿ ಇಂಥ ಕಾಳಜಿ ತೋರಿದ್ದರು.  ಈ ವರ್ಷ ಫೆಬ್ರವರಿಯಲ್ಲಿ ಥಾಣೆಯಲ್ಲಿ ಪಶುಚಿಕಿತ್ಸೆ ಕೇಂದ್ರದ ಉದ್ಯೋಗಿಯೊಬ್ಬರು ನಾಯಿಗೆ ಹೊಡೆಯುವ ವಿಡಿಯೋ ವೈರಲ್‌ ಆಗಿತ್ತು. ಟೋಫೂ ಹೆಸರಿನ ನಾಯಿಗೆ ಇಬ್ಬರು ಉದ್ಯೋಗಿಗಳು ಮನಬಂದಂತೆ ಹೊಡೆಯುತ್ತಿದ್ದರು. ಹೃದಯಹೀನರು ಎಂದು ಈ ವಿಡಿಯೋವನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದರು.

ಪುಟ್ಟಕ್ಕನ ಮಕ್ಕಳು ನಂಜವ್ವನಿಗೆ ಹುಟ್ಟುಹಬ್ಬ: 400 ಸೀರಿಯಲ್​ಗಳ ನಟಿಯ ರೋಚಕ ಪಯಣ ಇಲ್ಲಿದೆ...
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್