
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲೂ ಖ್ಯಾತಿಗಳಿಸಿದ್ದಾರೆ. ಸೀತಾರಾಮಂ ಸಿನಿಮಾ ಮೃಣಾಲ್ ಅವರಿದೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಸೌತ್ ಸಿನಿಮಾರಂಗದಲ್ಲಿ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಈ ಸಿನಿಮಾದಲ್ಲಿ ಮೃಣಾಲ್ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ಜೊತೆ ತೆರೆ ಹಂಚಿಕೊಂಡಿದ್ದರು. ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಕೊಳ್ಳುವ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಬ್ರಜರಿ ಕಮಾಯಿ ಮಾಡಿತ್ತು ಈ ಸಿನಿಮಾ. ಈ ಸಿನಿಮಾದ ಸಕ್ಸಸ್ ಬಳಿಕ ಮೃಣಾಲ್ ಅವರಿಗೆ ಸಿನಿಮಾಗಳು ಆಫರ್‌ಗಳು ಹೆಚ್ಚಾಗಿವೆ. ಆದರೀಗ ಕಣ್ಣೀರಿಡುತ್ತಿರುವ ಫೋಟೋ ಶೇರ್ ಮಾಡಿ ಭಾವುಕ ಸಾಲು ಹಂಚಿಕೊಂಡಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಲಿದೆ. ಫೋಟೋ ಜೊತೆಗೆ ನಿನ್ನೆ ಕಠಿಣವಾಗಿತ್ತು ಆದರೆ ಇಂದು ಬಲಶಾಲಿಯಾಗಿದ್ದೇನೆ ಮೃಣಾಲ್ ಬರೆದುಕೊಂಡಿದ್ದಾರೆ.
ಕಣ್ಣೀರಾಕುತ್ತಿರುವ ಫೋಟೋ ಯಾಕೆ ಶೇರ್ ಮಾಡಿದ್ದು ಎಂದು ಮೃಣಾಲ್ ಬಹಿರಂಗ ಪಡಿಸಿದ್ದಾರೆ. ಎಲ್ಲರ ಬದುಕಲ್ಲೂ ಒಂದು ಕಹಿ ಘಟನೆ ಇರುತ್ತದೆ. ಸೆಲೆಬ್ರಿಟಿಗಳ ಬದುಕು ಏನು ವಿಭಿನ್ನವಾಗಿ ಇರುವುದಿಲ್ಲ. ಅವರು ಕೂಡ ಸಾಕಷ್ಟು ನೋವು ತಿಂದಿರುತ್ತಾರೆ. ಕಷ್ಟಗಳನ್ನು ಎದುರಿಸಿರುತ್ತಾರೆ, ಕೆಲವರು ಹೇಳಿಕೊಳ್ಳುತ್ತಾರೆ, ಆದರೆ ಇನ್ನು ಕೆಲವರು ಹೇಳಿಕೊಳ್ಳುವುದಿಲ್ಲ. ಆದರೆ ಮೃಣಾಲ್ ಹಾಗಲ್ಲ ತಾನು ತನ್ನ ನೋವವನ್ನು ಶೇರ್ ಮಾಡಿಕೊಂಡಿದ್ದಾರೆ.
ಬಹಿರಂಗವಾಗಿ 'ಸೀತಾ ರಾಮಂ' ನಟಿಗೆ ಪ್ರಪೋಸ್ ಮಾಡಿದ ಅಂಕಲ್; ಸರಿಯಾಗಿ ತಿರುಗೇಟು ನೀಡಿದ ಮೃಣಾಲ್
ಅಳುತ್ತಿರುವ ಫೋಟೋ ಹಾಕಿ ದೀರ್ಘವಾಗಿ ಬರೆದುಕೊಂಡಿದ್ದಾರೆ. 'ನಿನ್ನೆ ಕಠಿಣವಾಗಿತ್ತು. ಆದರೆ ಇಂದು ನಾನು ಬಲಶಾಲಿ, ಬುದ್ಧಿವಂತೆ ಮತ್ತು ಸಂತೋಷವಾಗಿದ್ದೇನೆ. ಪ್ರತಿಯೊಬ್ಬರ ಕಥೆಗಳಲ್ಲೂ ಜೋರಾಗಿ ಓದಲಾಗದ ಒಂದಷ್ಟು ಪುಟಗಳು ಇವೆ. ಆದರೆ ನಾನು ಆ ಪುಟಗಳನ್ನು ಏರು ಧ್ವನಿಯಲ್ಲಿ ಓದಲು ಬಯಸುತ್ತೇನೆ. ಏಕೆಂದರೆ ನಾನು ಕಲಿತ ಪಾಠವನ್ನು ಯಾರಾದರೂ ಕಲಿಯಬೇಕಾಗಿ ಬರಬಹುದು' ಎಂದು ಹೇಳಿದ್ದಾರೆ. ಮೃಣಾಲ್ ಅವರ ಈ ಪೋಸ್ಟ್ ಅಭಿಮಾನಿಗಳಲ್ಲಿ ಆತಂಕದ ಜೊತೆಗೆ ಅಚ್ಚರಿ ಮೂಡಿಸಿತು.
ಬಳಿಕ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಮೃಣಾಲ್, ಕಣ್ಣೀರು ಹಾಕುತ್ತಿರುವುದು ಹಳೆಯ ಫೋಟೋ ಎಂದು ಹೇಳಿದ್ದಾರೆ. ತುಂಬಾನೇ ಕಷ್ಟದ ದಿನಗಳಲ್ಲಿ ತೆಗೆದ ಫೋಟೋ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಇಂದು ಖುಷಿಯಲ್ಲಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಟಾಪ್ ಲೆಸ್ ಪೋಸ್: ಸೀತಾ ಹಾಟ್ ಲುಕ್ ನೋಡಿ ದಂಗಾದ ಫ್ಯಾನ್ಸ್
ಮೃಣಾಲ್ ಸದ್ಯ ಸಂತೋಷವಾಗಿದ್ದಾರೆ. ಸಿನಿಮಾಗಳು ಅವಕಾಶಗಳು ಹೆಚ್ಚಾಗಿ ಸಿಗುತ್ತಿವೆ. ಅದರಲ್ಲೂ ಸೀತಾರಾಮಂ ಸಕ್ಸಸ್ ಬಳಿಕ ಮೃಣಾಲ್ ಸೌತ್‌ನಲ್ಲೂ ಸ್ಟಾರ್ ಆಗಿದ್ದಾರೆ. ಬೇಡಿಕೆಯ ನಟಿಯಾಗಿದ್ದಾರೆ. ಅನೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ತೆಲುಗು ಸಿನಿಮಾಗೆ ಸಹಿ ಮಾಡಿದ್ದಾರೆ. ತೆಲುಗು ಸ್ಟಾರ್ ನಾನಿ ಜೊತೆ ನಟಿಸುತ್ತಿದ್ದಾರೆ. ಹಿಂದಿಯಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.