ಮಗು ಬೇಕು, ಮದ್ವೆ-ಹೆರಿಗೆ ಸಾಕಪ್ಪಾ ಸಾಕು! ಅಂಡಾಣು ಫ್ರೀಜ್​ಗೆ ಮುಂದಾದ ಮತ್ತೋರ್ವ ಬಾಲಿವುಡ್​ ನಟಿ

By Suvarna News  |  First Published Apr 27, 2024, 2:28 PM IST

ಮದುವೆ, ಮಕ್ಕಳನ್ನು ಹೆರುವುದನ್ನು ಒಲ್ಲದ ಕೆಲವು ಮಹಿಳೆಯರ ಸಾಲಿಗೆ ನಟಿ ಮೃಣಾಲ್​ ಠಾಕೂರ್​ ಸೇರಿದ್ದು, ಇದೀಗ ಎಗ್​ ಫ್ರೀಜ್​ ಮಾಡಲು ಮುಂದಾಗಿದ್ದಾರೆ. ಏನಿದು ತಂತ್ರಜ್ಞಾನ?
 


ಎಗ್​ ಫ್ರೀಜಿಂಗ್​ ಅಂದರೆ ಮಹಿಳೆಯರ ಅಂಡಾಣುವಿನ ಘನೀಕರಣ ಭಾರಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಚಿತ್ರ ನಟಿಯರು. ಕೆಲವರಿಗೆ ಮಗು ಬೇಕು ಆದರೆ ಸೌಂದರ್ಯ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಹೆರುವುದು ಬೇಡ. ಇನ್ನು ಕೆಲವರಿಗೆ ಮದುವೆನೂ ಬೇಡ, ಹೆರುವುದಂತೂ ಬೇಡವೇ ಬೇಡ. ಇದೇ ಕಾರಣಕ್ಕೆ ಇದಾಗಲೇ ಹಲವಾರು ನಟಿಯರು ಎಗ್​ ಫ್ರೀಜಿಂಗ್​ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ವೃತ್ತಿ, ಜೀವನದಲ್ಲಿ ಏನಾದರು ಸಾಧಿಸಬೇಕು ಅಥವಾ ಇನ್ನೇನಾದರು ಮಾಡಬೇಕು ಎಂಬ ಕನಸುಗಳನ್ನು ಕಟ್ಟಿಕೊಂಡು ಆ ಗುರಿ ತಲುಪಲು ಹೋರಾಡುವವರಿಗೆ ಈ ತಂತ್ರಜ್ಞಾನ ವರದಾನವಾಗಿದೆ. ಹೆಚ್ಚಾಗಿ ಸಿನಿ ತಾರೆಯರು, ಮಾಡೆಲ್​ಗಳು ಹಾಗೂ ಉನ್ನತ ಹುದ್ದೆಯಲ್ಲಿ ಇದ್ದು, ಇನ್ನೂ ಮೇಲಕ್ಕೆ ಏರುವ ಆಸೆ ಹೊಂದಿರುವ ಮಹಿಳೆಯರು ಇದರ ಮೊರೆ ಹೋಗುತ್ತಿದ್ದಾರೆ. 

ಇದಾಗಲೇ ಪ್ರಿಯಾಂಕಾ ಚೋಪ್ರಾ, ರಾಖಿ ಸಾವಂತ್​, ಏಕ್ತಾ  ಕಪೂರ್​, ಉಪಾಸನಾ ಕಾಮನೇನಿ, ಸಾನಿಯಾ ಮಿರ್ಜಾ ಸೇರಿದಂತೆ ಹಲವರು ಈ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇದೀಗ ಅವರ ಸಾಲಿಗೆ ಇನ್ನೋರ್ವ ನಟಿ ಮೃಣಾಲ್​ ಠಾಕೂರ್​ ಸೇರಿದ್ದಾರೆ. ಇನ್ನೂ ಮದುವೆಯಾಗದ ಮೃಣಾಲ್​ ಅವರು ತಮ್ಮ ಅಂಡಾಣು ಫ್ರೀಜ್​ ಮಾಡಿ ಇರುವ ಪ್ಲ್ಯಾನ್​ ಮಾಡಿದ್ದಾರೆ. ‘ಸೀತಾ ರಾಮಂ’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಮೃಣಾಲ್​ ತಮ್ಮ ಆಸೆಯನ್ನು ಇದೀಗ ಬಹಿರಂಗಪಡಿಸಿದ್ದಾರೆ. 

Tap to resize

Latest Videos

ರಾಖಿ ಸಾವಂತ್‌ಳಿಂದ ಸಾನಿಯಾ ಮಿರ್ಜಾವರೆಗೆ.. ಈ ಸೆಲೆಬ್ರಿಟಿಗಳು ತಮ್ಮ ಅಂಡಾಣು ಫ್ರೀಜ್ ಮಾಡಿಕೊಂಡಿದ್ದಾರೆ!

  ಈ ತಂತ್ರಜ್ಞಾನದ ಕುರಿತು ಹೇಳುವುದಾದರೆ, ಮಹಿಳೆಯರ ಅಂಡಾಣುವನ್ನು ಬೇರ್ಪಡಿಸಿ ಅದನ್ನು ಫ್ರೀಜ್ ಮಾಡಿ ಶೇಖರಿಸಿ ಇಡಲಾಗುತ್ತದೆ.   ಮಗುವನ್ನು ಪಡೆಯಬಯಸಿದಾಗ ಅದನ್ನು  ದ್ರವೀಕರಿಸಿ ಫಲಭರಿತವನ್ನಾಗಿ ಮಾಡಲಾಗುತ್ತದೆ ಮತ್ತು ಗರ್ಭಾಶಯದೊಳಗೆ ಭ್ರೂಣವನ್ನು ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆ ತನ್ನ ಗರ್ಭದಲ್ಲಿಯೇ ಮಗುವನ್ನು ಇಟ್ಟುಕೊಳ್ಳಬಹುದು ಇಲ್ಲವೇ ಬಾಡಿಗೆ ತಾಯ್ತನದಂತೆ ಬೇರೊಂದು ಮಹಿಳೆಯ ಗರ್ಭದಲ್ಲಿ ಅದನ್ನು ಇರಿಸಿ ಮಗುವನ್ನು ಹೆರಬಹುದು. ಇದೊಂದು ವಿಧಾನವಾಗಿದ್ದು, ಅಂಡೋತ್ಪತ್ತಿಯನ್ನು ಉತ್ತೇಜಿಸಲು ಹಾರ್ಮೋನ್‌ಗೆ ಇಂಜೆಕ್ಷನ್ ನೀಡಲಾಗುತ್ತದೆ, ಅಂಡಾಣುವನ್ನು ಭವಿಷ್ಯದಲ್ಲಿ ಬಳಸುವುದಕ್ಕಾಗಿ ಮೈನಸ್ 196 ಡಿಗ್ರಿ ಸೆಲ್ಷಿಯಸ್‌ನಲ್ಲಿ ಇರಿಸಲಾಗುತ್ತದೆ. ಸುಮಾರು 10 ವರ್ಷಗಳ ಹಿಂದೆ ಈ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಫಾಸ್ಟ್ ಫ್ರೀಸಿಂಗ್ ಟೆಕ್ನಾಲಜಿ ದೇಶಕ್ಕೆ ಕೂಡ ಕಾಲಿಟ್ಟಿದೆ. ಆದರೆ ಇದನ್ನು ನಿರ್ವಹಣೆ ಮಾಡುವುದು ಮಾತ್ರ ದುಬಾರಿ.
   

ಈಗ ಈ ಕುರಿತು ಮಾತನಾಡಿರುವ ಮೃಣಾಲ್​, ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್​ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದಿದ್ದಾರೆ.  ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂದೂ ಹೇಳಿದ್ದಾರೆ.  ಮೃಣಾಲ್ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಅವರ ನಟನೆಯ ‘ದಿ ಫ್ಯಾಮಿಲಿ ಸ್ಟಾರ್’ ರಿಲೀಸ್ ಆಯಿತು. ಈ ಚಿತ್ರ ಹೇಳಿಕೊಳ್ಳುವಂಥ ಗೆಲುವು ಕಾಣಲಿಲ್ಲ.

ಮದ್ವೆ ಬೇಡ, ಇವ್ನ ಜೊತೆ ಎಂಜಾಯ್​ ಮಾಡ್ತಿದ್ದೇನೆಂದ ಶ್ರುತಿ ಹಾಸನ್ 2ನೇ ಬಾಯ್​ಫ್ರೆಂಡ್​ಗೂ ಗುಡ್​ಬೈ ಹೇಳಿದ್ರಾ?
 

click me!