Cannes 2023: ಬಾಲಿವುಡ್​ನ ಈ ಸುಂದರಿ ಈಗ NATIONAL CRUSH! ರಶ್ಮಿಕಾ ಫ್ಯಾನ್ಸ್​ ಶಾಕ್

Published : May 18, 2023, 05:27 PM ISTUpdated : May 19, 2023, 10:31 AM IST
Cannes 2023: ಬಾಲಿವುಡ್​ನ ಈ ಸುಂದರಿ ಈಗ NATIONAL CRUSH!  ರಶ್ಮಿಕಾ ಫ್ಯಾನ್ಸ್​ ಶಾಕ್

ಸಾರಾಂಶ

ನ್ಯಾಷನಲ್​ ಕ್ರಷ್​ ಎಂದಾಕ್ಷಣ ನೆನಪಿಗೆ ಬರುವುದು ನಟಿ ರಶ್ಮಿಕಾ ಮಂದಣ್ಣ. ಆದರೆ ಈಗ ಈ ಪಟ್ಟ ಬೇರೆ ನಟಿಗೆ ಸಿಕ್ಕಿದೆ. ಯಾರೀಕೆ?   

ನ್ಯಾಷನಲ್​ ಕ್ರಷ್​ ಎಂದಾಕ್ಷಣ ನೆನಪಿಗೆ ಬರುವುದು ನಟಿ ರಶ್ಮಿಕಾ ಮಂದಣ್ಣ. ​ಸಾಕಷ್ಟು ವಿವಾದದ ನಂತರವೂ ರಶ್ಮಿಕಾ ಇಂದಿಗೂ ನ್ಯಾಷನಲ್​ಕ್ರಷ್​ ಎಂದೇ ಹೆಸರು ಉಳಿಸಿಕೊಂಡಿದ್ದಾರೆ. ಆದರೆ ಅವರ ಫ್ಯಾನ್ಸ್​ಗೆ ಈಗ ದೊಡ್ಡ ಶಾಕ್​ ಎದುರಾಗಿದೆ. ಏಕೆಂದರೆ ಈ ಪಟ್ಟವನ್ನು ಈಗ ಮತ್ತೋರ್ವ ನಟಿ ಪಡೆದುಕೊಂಡಿದ್ದಾರೆ!  ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರಿಗೆ ಬಿರುದು ಕೊಡುತ್ತಾರೆ. ಅದೇ ಬಿರುದಿನಿಂದಲೇ ಕೆಲ ನಟ-ನಟಿಯರು ಫೇಮಸ್​ ಆಗಿ ಬಿಡುತ್ತಾರೆ. ಅದೇ ರೀತಿ ರಶ್ಮಿಕಾ ಮಂದಣ್ಣ ನ್ಯಾಷನಲ್​ ಕ್ರಷ್​ ಎನಿಸಿಕೊಂಡಿದ್ದರು. ಅದರೆ ಈ ಬಿರುದನ್ನು ಈಗ    ನಟಿ ಮೃಣಾಲ್ ಠಾಕೂಲ್ (Mrunal Thakur) ಪಡೆದುಕೊಂಡಿದ್ದಾರೆ. ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಪಡೆದಿರುವ ನಟಿ ಮೃಣಾಲ್​, 'ಸೀತಾ ರಾಮಂ’ ಸಿನಿಮಾ ಬಿಡುಗಡೆಯ ನಂತರ  ಖ್ಯಾತಿ ಹೆಚ್ಚಿಸಿಕೊಂಡವರು.  ಇದೀಗ ಅವರನ್ನು ಫ್ಯಾನ್ಸ್​  ನ್ಯಾಷನಲ್ ಕ್ರಶ್ ಎನ್ನಲು ಆರಂಭಿಸಿದ್ದಾರೆ. 

ಅಷ್ಟಕ್ಕೂ ನಟಿ ಮೃಣಾಲ್ ಹುಚ್ಚು ಅಭಿಮಾನಿಗಳಲ್ಲಿ ಇನ್ನಷ್ಟು ಹೆಚ್ಚಾಗಿದ್ದು, ಈಕೆ, ಕೇನ್ಸ್​ ಫೆಸ್ಟಿವಲ್​ನಲ್ಲಿ ಕಾಣಿಸಿಕೊಂಡ ಬಳಿಕ. ಈ ಚಿತ್ರೋತ್ಸವದಲ್ಲಿ ಮೃಣಾಲ್​ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ.  ಈ ವೇಳೆ ಅವರು ಧರಿಸಿದ್ದ ಕಾಸ್ಟ್ಯೂಮ್​ ಗಮನ ಸೆಳೆದಿದೆ.  ಹಿಂದೆ ಎಂದು ನನಗೆ ದೊರೆಯದ ಅವಕಾಶ ಈಗ ದೊರೆತಿದೆ. ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ ಅನುಭವವನ್ನು ಆಸ್ವಾದಿಸಲು ಸಿದ್ಧಳಾಗುತ್ತಿದ್ದೇನೆ ಎಂದು ಫೋಟೋ ಶೇರ್​ ಮಾಡಿಕೊಂಡು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಕೇನ್​ ಚಿತ್ರೋತ್ಸವದಲ್ಲಿ  ಬ್ಲಾಕ್‌ ನೆಟೆಡ್‌ ಔಟ್‌ಫಿಟ್‌ನಲ್ಲಿ ತೆಗೆಸಿದ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.  ಈಗ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ನ್ಯಾಷನಲ್​ ಕ್ರಶ್​ ಎನ್ನಲು ಆರಂಭಿಸಿದ್ದಾರೆ. ಇದು ವೈರಲ್​ ಆಗುತ್ತಲೇ ರಶ್ಮಿಕಾ ಮಂದಣ್ಣ (Rashmika Mandanna) ಫ್ಯಾನ್ಸ್​ ಶಾಕ್​ ಆಗಿದ್ದು, ನಮ್ಮ ಗತಿಏನು ಎಂದು ಪ್ರಶ್ನಿಸುತ್ತಿದ್ದಾರೆ.

Cannes 2023: ಕಿಸ್​ ಮಾಡುವಲ್ಲೂ ಐಶ್ವರ್ಯಾ ರೈ ಕಾಪಿ ಮಾಡಿದ್ರಾ ನಟಿ ಊರ್ವಶಿ ರೌಟೇಲಾ?

ಅಷ್ಟಕ್ಕೂ ಮೃಣಾಲ್​ ಅವರನ್ನು ಈ ಹಿಂದೆಯೇ ಅವರ ಅಭಿಮಾನಿಗಳು ನ್ಯಾಷನಲ್​ ಕ್ರಶ್​ ಎನ್ನುತ್ತಿದ್ದರು. ಅದನ್ನು ಕನ್ನಡದ ಬಹುತೇಕ ಸಿನಿಪ್ರಿಯರು ಒಪ್ಪಿ ಇರಲಿಲ್ಲ.  ಈಗ ಈಕೆಯೇ ನ್ಯಾಷನಲ್​  ಕ್ರಷ್​ ಎನ್ನುತ್ತಿದ್ದಾರೆ. ಕೇನ್ಸ್‌ ಫಿಲ್ಮ್‌ ಫೆಸ್ಟಿವಲ್‌ 2023ರಲ್ಲಿ ಅನೇಕ ಭಾರತೀಯ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಸೀತಾರಾಮಂ ನಟಿ ಮೃಣಾಲ್‌ ಠಾಕೂರ್‌ ಕೂಡಾ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು.  ಕೇನ್​ ಚಿತ್ರೋತ್ಸವದ  ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ (Viral) ಆಗಿದೆ.  

ಅಂದ ಹಾಗೆ  ‘ಸೀತಾ ರಾಮಂ’ (Seeta Ram) ಸಿನಿಮಾದಲ್ಲಿ ಸೀತಾ ಮಹಾಲಕ್ಷ್ಮಿ ಅಲಿಯಾಸ್​ ಪ್ರಿನ್ಸೆಸ್​ ನೂರ್​ ಜಹಾನ್​ ಪಾತ್ರವನ್ನು ಮೃಣಾಲ್​ ಠಾಕೂರ್​ ಮಾಡಿದ್ದರು. ಆ ಬಳಿಕ ಅವರನ್ನು ಗ್ಲಾಮರಸ್​ ಗೆಟಪ್​ನಲ್ಲಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಿಲ್ಲ. ಕೆಲವು ದಿನಗಳ ಹಿಂದೆ ಮೃಣಾಲ್‌ ಠಾಕೂರ್‌ ಬಿಕಿನಿ ಧರಿಸಿ ಸುದ್ದಿಯಾಗಿದ್ದರು. ಕೆಲವರು ಮೃಣಾಲ್‌ ಹಾಟ್‌ ಫೋಟೋಗಳನ್ನು ಇಷ್ಟಪಟ್ಟರೆ ಇನ್ನೂ ಕೆಲವರು ಈ ರೀತಿಯ ಬಟ್ಟೆಗಳನ್ನು ಹಾಕಬೇಡಿ ಎಂದಿದ್ದರು. ಸೀತಾರಾಮಂ ಚಿತ್ರದ ಸಾಂಪ್ರದಾಯಿಕ ಹುಡುಗಿ ಸೀತಾಲಕ್ಷ್ಮಿ ನೀವೇನಾ ಎಂದು ಆಶ್ಚರ್ಯದಿಂದ ಕೇಳಿದ್ದರು. ಇದೀಗ ನಮ್ಮ ನ್ಯಾಷನಲ್​ ಕ್ರಷ್​ ನೀವೇ ಎಂದಿದ್ದರೆ, ರಶ್ಮಿಕಾ ಪಟ್ಟ ನಿಮಗೇ ಕೊಡುತ್ತೇವೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಮಗೆ ರಶ್ಮಿಕಾ ಬೇಕು, ಇವರು ಬೇಕೆಂದರೆ ಎರಡನೆಯ ಸ್ಥಾನದಲ್ಲಿ ಇರಲಿ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ನ್ಯಾಷನಲ್​ ಕ್ರಷ್​ ಪಟ್ಟಕ್ಕೆ ಫ್ಯಾನ್ಸ್​ ಕಾದಾಡುತ್ತಿದ್ದಾರೆ. ಅಂದಹಾಗೆ, ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದ ಮೃಣಾಲ್‌ ಈಗ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Cannes 2023ಯಲ್ಲಿ ಇಶಾ ಗುಪ್ತಾ: ಮೇಲಂತೂ ಓಪನ್ನು, ಚಡ್ಡಿಯಾದ್ರೂ ಹಾಕ್ಬಾರ್ದಾ ಎಂದ ಟ್ರೋಲಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?