Latest Videos

'ಕಾಶ್ಮೀರ್ ಫೈಲ್ಸ್' ನಟನ 538ನೇ ಸಿನಿಮಾ ಅನೌನ್ಸ್: ರವೀಂದ್ರನಾಥ​ ಟ್ಯಾಗೋರ್​ ಆಗಿ ಎಂಟ್ರಿ ಕೊಟ್ಟ ಅನುಪಮ್ ಖೇರ್

By Shruthi KrishnaFirst Published Jul 8, 2023, 6:06 PM IST
Highlights

'ಕಾಶ್ಮೀರ್ ಫೈಲ್ಸ್' ಸಿನಿಮಾದ ಸ್ಟಾರ್ ಅನುಪಮ್ ಖೇರ್ 538ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ರವೀಂದ್ರನಾಥ​ ಟ್ಯಾಗೋರ್​ ಆಗಿ ಅನುಪಮ್ ಖೇರ್  ಎಂಟ್ರಿ ಕೊಟ್ಟಿದ್ದಾರೆ. 

ಬಾಲಿವುಡ್‌ನ ಖ್ಯಾತ ನಟರಲ್ಲಿ ಅನುಪಮ್ ಖೇರ್ ಕೂಡ ಒಬ್ಬರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಮತ್ತಷ್ಟು ಖ್ಯಾತಿ ಹೆಚ್ಚಿಸಿಕೊಂಡಿದ್ದ ಅನುಪಮ್ ಖೇರ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕಾಶ್ಮೀರಿ ಪಂಡಿತರಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದ ಅನುಪಮ್ ಖೇರ್ ಇದೀಗ  ರವೀಂದ್ರನಾಥ್​ ಟ್ಯಾಗೋರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. 68 ವರ್ಷದ ನಟ ಅನುಪಮ್ ಖೇರ್, ರವೀಂದ್ರನಾಥ್​ ಟ್ಯಾಗೋರ್ ಲುಕ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಅಂದಹಾಗೆ ಇದು ಅವರು ನಟಿಸುತ್ತಿರುವ 583ನೇ ಸಿನಿಮಾ ಆಗಿದೆ.

ಖ್ಯಾತ ಕವಿ, ಲೇಖಕ, ತತ್ವಜಾನಿ ರವೀಂದ್ರನಾಥ್​ ಟ್ಯಾಗೋರ್​ ಪಾತ್ರವನ್ನು ತೆರೆಮೇಲೆ ತರುವುದು ದೊಡ್ಡ ಸಾಹಸದ ಕೆಲಸ. ಅಂಥ ಪಾತ್ರವನ್ನು ತೆರೆಮೇಲೆ ಜೀವಿಸಲು ಅನುಪಮ್​ ಖೇರ್​ ರೆಡಿಯಾಗಿದ್ದಾರೆ. ರವೀಂದ್ರನಾಥ್​ ಟ್ಯಾಗೋರ್​ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಅನುಪಮ್ ಖೇರ್ ಸಖತ್​ ಖುಷಿಯಾಗಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಫಸ್ಟ್​ ಲುಕ್​ ಪೋಸ್ಟರ್​ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟರ್‌ಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.  ಗರುತೇ ಸಿಗದಷ್ಟು ಬದಲಾಗಿದ್ದೀರಾ ಎಂದು ಹೇಳುತ್ತಿದ್ದಾರೆ. 

ಅಂದಹಾಗೆ, ಈ ಸಿನಿಮಾದ ಶೀರ್ಷಿಕೆ ಏನು? ಪಾತ್ರವರ್ಗದಲ್ಲಿ ಬೇರೆ ಯಾರೆಲ್ಲ ಇರಲಿದ್ದಾರೆ? ನಿರ್ದೇಶನ ಮಾಡೋದು ಯಾರು? ಯಾವ ಬ್ಯಾನರ್​ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆ? ಎನ್ನುವ ಯಾವ ಮಾಹಿತಿ ಕೂಡ ರಿವೀಲ್ ಆಗಿಲ್ಲ. ಕೇವಲ ಪೋಸ್ಟರ್​ ಹಂಚಿಕೊಳ್ಳುವ ಮೂಲಕ ಅನುಪಮ್​ ಖೇರ್​ ಕುತೂಹಲ ಮೂಡಿಸಿದ್ದಾರೆ. 2019ರಲ್ಲಿ ಬಿಡುಗಡೆಯಾದ ‘ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಪಾತ್ರಕ್ಕೆ ಅನುಪಮ್​ ಖೇರ್​ ಬಣ್ಣ ಹಚ್ಚಿದ್ದರು. ಈಗ ಮತ್ತೊಂದು ರಿಯಲ್​ ಲೈಫ್​ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿರುವುಕ್ಕೆ ಅಭಿಮಾನಿಗಳಿಗೆ ಖುಷಿ ಆಗಿದೆ.

ಇದೇ ಜನರು 'ಕಾಶ್ಮೀರ್ ಫೈಲ್ಸ್' ಅನ್ನೂ ವಿರೋಧಿಸಿದ್ರು: ಕೇರಳ ಸ್ಟೋರಿ ವಿವಾದಕ್ಕೆ ಅನುಪಮ್ ಖೇರ್ ರಿಯಾಕ್ಷನ್

ಪೋಸ್ಟರ್ ಶೇರ್ ಮಾಡಿ ಅನುಪಮ್ ಖೇರ್ ಸಂತಸ ಹಂಚಿಕೊಂಡಿದ್ದಾರೆ. ‘ನನ್ನ 538ನೇ ಸಿನಿಮಾದಲ್ಲಿ ಗುರುದೇವ ರವೀಂದ್ರನಾಥ್​ ಟ್ಯಾಗೋರ್​ ಅವರ ಪಾತ್ರ ಮಾಡಲು ಖುಷಿ ಆಗುತ್ತಿದೆ. ಸಮಯ ಬಂದಾಗ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ. ತೆರೆಮೇಲೆ ಇಂಥ ಪಾತ್ರ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ’ ಎಂದು ಅನುಪಮ್​ ಖೇರ್​ ಅವರು ಪೋಸ್ಟ್​ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 

A post shared by Anupam Kher (@anupampkher)

ಹಸುಗೂಸು ನೋಡಿ ಮದ್ಯಪಾನ ತ್ಯಜಿಸಿದ್ದೆ: ಕುತೂಹಲದ ಘಟನೆ ನೆನಪಿಸಿಕೊಂಡ ನಿರ್ಮಾಪಕ ಮಹೇಶ್​ ಭಟ್​

ಕಾಶ್ಮೀರ್ ಫೈಲ್ಸ್ ಬಳಿಕ ಅನುಪಮ್ ಖೇರ್ ಮತ್ತೆ ವಿವೇಕ್ ಅಗ್ನಿಹೋತ್ರಿ ಜೊತೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್ ನಟನೆಯ ಎಮರ್ಜನ್ಸಿಯಲ್ಲಿ ಅನುಪಮೇ ಖೇರ್ ನಟಿಸುತ್ತಿದ್ದಾರೆ.   

click me!