ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್​: ಅಷ್ಟಕ್ಕೂ ಫಕ್ಕಡ್​ ಬಾಬಾ ಹೇಳಿದ ಗುಟ್ಟೇನು?

Published : Jul 08, 2023, 04:46 PM IST
ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡ ರಾಖಿ ಸಾವಂತ್​: ಅಷ್ಟಕ್ಕೂ ಫಕ್ಕಡ್​ ಬಾಬಾ ಹೇಳಿದ ಗುಟ್ಟೇನು?

ಸಾರಾಂಶ

ಬಾಬಾ ಹೇಳಿದಂತೆ ನಟಿ ರಾಖಿ ಸಾವಂತ್​ ತಲೆ ಮೇಲೆ ಐದು ಮೊಟ್ಟೆ ಒಡ್ಕೊಂಡಿದ್ದಾರೆ. ಅಷ್ಟಕ್ಕೂ ಆ ಬಾಬಾ ಹೇಳಿದ್ದೇನು?  

ರಾಖಿ ಸಾವಂತ್​ (Rakhi Sawant) ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್​ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

 ಇದಾದ ಬಳಿಕ ರಾಖಿ ಹಿಜಾಬ್​ ಧರಿಸಿ ಬಂದು ಇಸ್ಲಾಂ ಸ್ವೀಕರಿಸಿರುವ ಬಗ್ಗೆ ಜಗಜ್ಜಾಹೀರ ಮಾಡಿದ್ದರು. ವಿಡಿಯೋ  ಹಂಚಿಕೊಂಡಿದ್ದು,  ಅದರ ಶೀರ್ಷಿಕೆಯಲ್ಲಿ 'ನನ್ನ ಮೊದಲ ರೋಸಾ' ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಅವರು,  'ಎಲ್ಲರಿಗೂ ಸಲಾಮ್ ವಾಲೇಕುಮ್. ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ, 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ  ನನಗೆ ಹಸಿವಾಗುತ್ತಿಲ್ಲ. ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ. ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ' ಎಂದಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು.

ಮದ್ವೆನೇ ಆಗಲ್ಲ ಎಂದಿದ್ದ ರಾಖಿಗೆ ಡಿವೋರ್ಸ್​ಗೂ ಮುನ್ನವೇ ಸಿಕ್ಕನಂತೆ ಮತ್ತೊಬ್ಬ- ಯಾರೀತ?

ಅದಾದ ಬಳಿಕ  ತಮ್ಮ ಬಾಳಲ್ಲಿ ಎಂಟ್ರಿ ಕೊಟ್ಟಿರೋದಾಗಿ ನಟಿ ಹೇಳಿಕೊಂಡಿದ್ದರು.  'ನಾನೊಬ್ಬರನ್ನು ಭೇಟಿಯಾಗಿದ್ದೇನೆ, ಆದರೆ ಅವರ ಜೊತೆ ಹೊಸ ಜೀವನ ಶುರು ಮಾಡಲು ಭಯ ಆಗುತ್ತಿದೆ, ನಾನಿನ್ನೂ ರೆಡಿ ಇಲ್ಲ. ಆದರೆ ಅವರನ್ನೇ ಮದ್ವೆಯಾಗುವ ಯೋಚನೆ ಮಾಡಿದ್ದೇನೆ ಎಂದಿದ್ದರು.  ಇದೀಗ ಈ ಡ್ರಾಮಾ ಕ್ವೀನ್​ (Drama Queen) ತಲೆಯ ಮೇಲೆ ಐದು ಮೊಟ್ಟೆ ಒಡೆದುಕೊಂಡಿದ್ದಾರೆ. ಹೌದು! ಹೀಗೆ ತಲೆ ಮೇಲೆ ಮೊಟ್ಟೆ ಒಡೆದುಕೊಂಡಿರೋ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ. ಮುಂಬೈನಲ್ಲಿ (Mumbai) ಜಿಮ್ ಜೊರಗಡೆ ಕಾಣಿಸಿಕೊಂಡ ರಾಖಿ ಸಾವಂತ್ ಅವರು, ಮೊಟ್ಟೆ ಒಡೆದುಕೊಂಡು ಸುದ್ದಿಯಾಗಿದ್ದಾರೆ. ಇದರ ಬಗ್ಗೆ ಕಾರಣ ಕೇಳಿದಾಗ ಅವರು,  ಒಳ್ಳೆಯ ಪತಿ ಸಿಗಬೇಕು ಎಂದರೆ ತಲೆ ಮೇಲೆ ಐದು ಮೊಟ್ಟೆ ಒಡೆದುಕೊಳ್ಳಬೇಕು ಎಂದು ಫಕ್ಕಡ್​ ಬಾಬಾ ಹೇಳಿದ್ದಾರೆ. ಅದರಂತೆ ಮಾಡಿದ್ದೇನೆ ಎಂದಿದ್ದಾರೆ.  'ನಾನು ತಲೆ ಮೇಲೆ ಐದು ಮೊಟ್ಟೆಯನ್ನು ಒಡೆದುಕೊಂಡರೆ ನನಗೆ ಒಳ್ಳೆಯ ಪತಿ ಸಿಗುತ್ತಾನೆ, ಅವನು ಅಯಸ್ಕಾಂತದ ರೀತಿ ನನಗೆ ಜೀವನಪರ್ಯಂತ ಅಂಟಿಕೊಂಡಿರುತ್ತಾನೆ ಎಂದು ಹೇಳಿದ್ದರು. ಅದರಂತೆ ನಾನು ತಲೆ ಮೇಲೆ ಐದು ಮೊಟ್ಟೆ ಒಡೆದುಕೊಂಡಿದ್ದೇನೆ' ಎಂದು ಹೇಳಿದ್ದಾರೆ.

ತಲೆ ಮೇಲೆ ಮೊಟ್ಟೆಯನ್ನು (Egg) ಒಡೆದುಕೊಳ್ಳುವ ಸಮಯದಲ್ಲಿ ಅವರು,  'ಓ ದೇವರೇ ನನಗೆ ಒಳ್ಳೆಯ ಗಂಡನನ್ನು ದಯಪಾಲಿಸು.  ಅವನು ನನ್ನನ್ನು ಯಾವತ್ತೂ ಬಿಟ್ಟು ಹೋಗಬಾರದು' ಎಂದಿದ್ದಾರೆ. ಅಷ್ಟೊತ್ತಿಗಾಗಲೇ  ಮಳೆ ಬರಲು ಶುರುವಾಯಿತು. ಇದರಿಂದ ಖುಷಿಗೊಂಡ ರಾಖಿ ಸಾವಂತ್​, 'ನಾನು ನನ್ನ ತಲೆಯನ್ನು ತೊಳೆದುಕೊಳ್ಳಬೇಕು, ದೇವರು ನನ್ನ ಆಸೆಯನ್ನು ಈಡೇರಿಸುತ್ತಾನೆ ಎಂದು ನಂಬಿದ್ದೇನೆ' ಎಂದಿದ್ದಾರೆ.  

Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?
ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್