
ಸೂಪರ್ ಹಾಟ್ ನಟಿ ಮೌನಿ ರಾಯ್ ಇತ್ತೀಚೆಗೆ ಹಸಿರು ಹೂವಿನ ಬ್ಯಾಕ್‌ಲೆಸ್, ಸ್ಲಿಟ್ ಇರೋ ಮ್ಯಾಕ್ಸಿ ಉಡುಪಿನಲ್ಲಿ ಕಾಣಿಸಿಕೊಂಡರು. ನಗರದಲ್ಲಿ ಹಾಟ್ ಲುಕ್‌ನಲ್ಲಿ ಹೊರಬಂದಿದ್ದಾರೆ ನಟಿ. ಆದರೆ, ದುರದೃಷ್ಟವಶಾತ್ ನಟಿಯ ಅಯ್ಯೋ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಲವರು ಅವಳು ರಿಸ್ಕಿ ಉಡುಪನ್ನು ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೌನಿಯು ಅತ್ಯಾಕರ್ಷಕವಾಗಿ ಕಾಣುತ್ತಿದ್ದರೂ, ನಟಿ ಅವಸರದಲ್ಲಿದ್ದರು. ತನ್ನ ಕಾರನ್ನು ಹುಡುಕಲು ಹೊರಟು ರಸ್ತೆ ದಾಟುವಾಗ, ಅವರು ವಾರ್ಡ್ರೋಬ್ ಮಾಲ್‌ಫಂಕ್ಷಕ್‌ನಿಂದಾಗಿ ಭಯಬಿದ್ಧಿದ್ದು ಗೊತ್ತಾಗಿದೆ. ನಟಿಯ ಕೆಲವು ಅಭಿಮಾನಿಗಳು ಪ್ಯಾಪ್ ಎಕೌಂಟ್‌ನಲ್ಲಿ ಕಮೆಂಟ್ ಮಾಡಿದ್ದಾರೆ. ನಿಮಗೆ ಕಂಫರ್ಟ್ ಅಲ್ಲದಿದ್ದರೆ ಅಂತಹ ಉಡುಪುಗಳನ್ನು ಏಕೆ ಧರಿಸಬೇಕು? ಎಂದು ಪ್ರಶ್ನಿಸಿದ್ದಾರೆ.
'ಮೀಡಿಯಾ ಫೊಟೋ ಕ್ಲಿಕ್ಕಿಸಿದ್ರೆ ಜಂಭ ಪಡ್ಬೇಡಿ': ಮಕ್ಕಳಿಗೆ ರಿತೇಶ್ ಹೇಳೋದಿಷ್ಟು
ಮೌನಿ ರಾಯ್ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಟ್ರೈಲಾಜಿಯ ಮೊದಲ ಭಾಗವಾಗಿದೆ. ಇದನ್ನು ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದೆ. ಅಯನ್ ಮುಖರ್ಜಿಯವರ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ನಾಗಿನ್ ಪಾತ್ರದಲ್ಲಿ ಮಿಲಿಯನ್ ಹೃದಯಗಳನ್ನು ಗೆದ್ದ ಮೌನಿ ನೆಗೆಟಿವ್ ಪಾತ್ರ ಮಾಡಲಿರುವುದು ವಿಶೇಷ.
ಅಮಿತಾಬ್ ಬಚ್ಚನ್, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿರುವ ಅವರ ಮುಂದಿನ ದೊಡ್ಡ ಚಿತ್ರ 'ಬ್ರಹ್ಮಾಸ್ತ್ರ' ಗಾಗಿ ಅಭಿಮಾನಿಗಳು ಈಗ ಕಾತುರದಿಂದ ಕಾಯುತ್ತಿದ್ದಾರೆ. ಮೌನಿ ರೋಮಿಯೋ ಅಕ್ಬರ್ ವಾಲ್ಟರ್ ಮತ್ತು ಮೇಡ್ ಇನ್ ಚೀನಾದಲ್ಲಿ ಜಾನ್ ಅಬ್ರಹಾಂ ಮತ್ತು ರಾಜ್‌ಕುಮ್ಮರ್ ರಾವ್ ಅವರೊಂದಿಗೆ ಕಾಣಿಸಿಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.