ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣು

Published : May 15, 2022, 06:14 PM IST
ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣು

ಸಾರಾಂಶ

ಬಂಗಾಳಿಯ ಖ್ಯಾತ ನಟಿ ಕಿರುತೆರೆ ನಟಿ ಪಲ್ಲವಿ ಡೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಂಗಾಳಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಬಳಗ ಸಂಪಾದಿಸಿದ್ದ ನಟಿ ಪಲ್ಲವಿ ಡೇ ಸಾವು ಕಿರುತೆರೆ ಲೋಕಕ್ಕೆ ಆಘಾತ ತಂದಿದೆ. ಕೋಲ್ಕತ್ತಾದ ಗರ್ಫಾದ ತಮ್ಮ ಫ್ಲಾಟ್ ನಲ್ಲಿ ನಟಿ ಪಲ್ಲವಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಹೇಳಿರುವ ಮಾಹಿತಿ ಪ್ರಕಾರ ಪಲ್ಲವಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಾರಣ ತಿಳಿದುಬಂದಿಲ್ಲ.  

ಬಂಗಾಳಿಯ ಖ್ಯಾತ ನಟಿ ಕಿರುತೆರೆ ನಟಿ ಪಲ್ಲವಿ ಡೇ(Pallavi Dey) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಂಗಾಳಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಬಳಗ ಸಂಪಾದಿಸಿದ್ದ ನಟಿ ಪಲ್ಲವಿ ಡೇ ಸಾವು ಕಿರುತೆರೆ ಲೋಕಕ್ಕೆ ಆಘಾತ ತಂದಿದೆ. ಕೋಲ್ಕತ್ತಾದ ಗರ್ಫಾದ ತಮ್ಮ ಫ್ಲಾಟ್ ನಲ್ಲಿ ನಟಿ ಪಲ್ಲವಿ ಶವವಾಗಿ ಪತ್ತೆಯಾಗಿದ್ದಾರೆ(Pallavi Dey found dead in her flat). ಪೊಲೀಸರು ಹೇಳಿರುವ ಮಾಹಿತಿ ಪ್ರಕಾರ ಪಲ್ಲವಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಾರಣ ತಿಳಿದುಬಂದಿಲ್ಲ.

ಪಲ್ಲವಿ ಅವರನ್ನು ಬಳಿಕ ಕೋಲ್ಕತ್ತಾದ ಎಸ್ ಬಂಗೂರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪಲ್ಲವಿ ಸಾವನ್ನಪ್ಪಿರುವ ಬಗ್ಗೆ ಅಧಕೃತ ಘೋಷಣೆ ಮಾಡಲಾಯಿತು. ಪಲ್ಲವಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಪಲ್ಲವಿ ಸಾವು ಆಕೆಯ ಸ್ನೇಹಿತರು, ಅಭಿಮಾನಿಗಳಿಗೆ ಭಾರಿ ನೋವು ತಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಆಕೆಯ ಕುಟುಂಬದವರು ಫೌಲ್ ಪ್ಲೇ ಎಂದು ಆರೋಪಿಸುತ್ತಿದ್ದಾರೆ. ನಟಿ ಪಲ್ಲವಿ ಸಾಗ್ನಿಕ್ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದರು ಎನ್ನಲಾಗಿದೆ. ಸದ್ಯ ಸಾಗ್ನಿಕ್ ವಿಚಾರಣೆ ಮಾಡುತ್ತಿದ್ದಾರೆ. ಸಾಗ್ನಿಕ್ ಪೋಷಕರು ಇಬ್ಬರ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಸಾಗ್ನಿಕ್ ಅವರ ತಾಯಿ, 'ಅವರು ಒಟ್ಟಿಗೆ ವಾಸಿಸುತ್ತಿದ್ದರು. ನಾವು ಸಂಪೂರ್ಣವಾಗಿ ಬೆಂಬಲ ನೀಡಿದ್ದೆವು. ಕೆಲವು ಸಮಯ ನಾನು ಬೇರೆ ಬೇರೆ ಇರಿ, ಮದುವೆ ಬಳಿಕ ಒಟ್ಟಿಗೆ ಇರುವಂತೆ ಹೇಳಿದ್ದೆ. ಆದರೆ ಇಬ್ಬರು ಚೆನ್ನಾಗಿ ಇದ್ದರು. ಏನಾಯಿತು ಎನ್ನುವುದು ತಿಳಿದಿಲ್ಲ' ಎಂದು ಹೇಳಿದ್ದಾರೆ.

ಹುಟ್ಟುಹಬ್ಬದ ದಿನವೇ ಶವವಾಗಿ ಪತ್ತೆಯಾದ ನಟಿ, ಮಾಡೆಲ್ ಶಹಾನಾ; ಪತಿ ಅರೆಸ್ಟ್

ನಟಿ ಪಲ್ಲವಿ ಡೇ ಮೊನ್ ಮನೆ ನಾ ಸೀರಿಯಲ್‌ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಲ್ಲವಿ ಸಹ ನಟ 'ನಾನು ಸಂಪೂರ್ಣ ಆಘಾತಗೊಂಡಿದ್ದೇನೆ. ನಾವು ಮೇ 12ರಂದು ದೂರದರ್ಶನ ಕಾರ್ಯಕ್ರಮಕ್ಕಾಗಿ ಶೂಟಿಂಗ್ ಮಾಡಿದ್ದೇವೆ. ಮತ್ತು ನಂತರ ಅವಳ ಜೊತೆ ಚಾಟ್ ಮಾಡಿದ್ದೆ. ಇನ್ನು ನನಗೆ ಈ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಹೇಳಿದ್ದಾರೆ.

ಪಲ್ಲವಿ ಎರಡು ದಿನಗಳ ಹಿಂದೆ ಶೂಟಿಂಗ್ ಹಾಜರಾಗಿದ್ದರು. ಯಾವುದರ ಬಗ್ಗೆಯೂ ಖಿನ್ನತೆಗೆ ಒಳಗಾಗಿದ್ದರು ಅಥವಾ ತೊಂದರೆಗೀಡಾಗಿದ್ದಾರೆ ಎನ್ನುವುದು ತಿಳಿದಿರಲಿಲ್ಲ. ಪಲ್ಲವಿ ಇನ್ನಿಲ್ಲ ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೋರ್ವ ಸಹ ನಟ ಹೇಳಿದ್ದಾರೆ.

ನಟಿ ಪಲ್ಲವಿ ರೇಶಂ ಜಾನ್ಪಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು. ಆಮಿ ಸಿರಾಜೆರ್ ಬೇಗಮ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಪಲ್ಲವಿ ಸಾವು ಇನ್ನು ನೆನಪು ಮಾತ್ರ.

ಮಲಯಾಳಂ ನಟಿ ಶಹಾನಾ ಸಾವು

ಇತ್ತೀಚಿಗಷ್ಟೆ ಮಲಯಾಳಂನ ನಟಿ ಮತ್ತು ಮಾಡೆಲ್ ಶಹಾನಾ ನಿಗೂಢವಾಗಿ ಸವನ್ನಪ್ಪಿದ್ದರು. ಕಾಸರಗೋಡು ಮೂಲದ 20 ವರ್ಷದ ನಟಿ ಶಹಾನಾ ಕೋಯಿಕ್ಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ. ರಾತ್ರಿ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

Koppal: ಗುಂಡಿಯಲ್ಲಿ ಬಿದ್ದು 15 ವರ್ಷದ ಬಾಲಕಿ ಸಾವು: ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ!

ಸದ್ಯ ಶಹಾನಾ ಪತಿ ಪರಂಬಿಲ್ ಬಜಾರ್ ಮೂಲದ ಸಜಾದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಜಾದ್ ಮತ್ತು ಶಹಾನಾ ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ನಡೆಯುತ್ತಿತ್ತು ಎನ್ನಲಾಗಿದ್ದು ಕೌಂಟುಬಿಕ ದೌರ್ಜನ್ಯ ಹಗೂ ಕೊಲೆಯ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Ileana Ban: ಇಲಿಯಾನಾರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದೇಕೆ? ನಟಿ ಮಾಡಿದ ತಪ್ಪೇನು?
Anasuya Bharadwaj: ಮತ್ತೆ ಶುರುವಾಯ್ತು ಪುಷ್ಪ ನಟಿ-ಶಿವಾಜಿ ವಾರ್: ನಟನ ಕಾಮೆಂಟ್‌ಗೆ ಅನಸೂಯಾ ತಿರುಗೇಟು