ಬೆಂಗ್ಳೂರಿನ ವೀಣಾ ಸ್ಟೋರ್‌ನಲ್ಲಿ ಇಡ್ಲಿ ತಿಂದ್ರಂತೆ ಸಾಯಿ ಪಲ್ಲವಿ!

By Suvarna NewsFirst Published May 15, 2022, 4:41 PM IST
Highlights

ಸಾಯಿ ಪಲ್ಲವಿ ನಟನೆಯ 'ಗಾರ್ಗಿ' ಸಿನಿಮಾ ತಮಿಳು, ತೆಲುಗು, ಕನ್ನಡದಲ್ಲಿ ರೆಡಿ ಆಗ್ತಿದೆ. ಈ ಸಿನಿಮಾ ಡಬ್ಬಿಂಗ್ ಸಾಯಿ ಪಲ್ಲವಿಗೆ ಬೆಂಗಳೂರಿಗೆ ಬಂದಿದ್ರು. ಆ ಗಡಿಬಿಡಿಯಲ್ಲೂ ಬೆಂಗಳೂರಿನ ವೀಣಾ ಸ್ಟೋರ್ಸ್‌ಗೆ ಹೋಗಿ ಇಡ್ಲಿ ತಿಂದಿದ್ದಾರೆ!

ಸಾಯಿ ಪಲ್ಲವಿಗೆ(Sai Pallavi) ದಕ್ಷಿಣ ಭಾರತದಲ್ಲಿ ಭರ್ಜರಿ ಫ್ಯಾನ್ ಫಾಲೊವಿಂಗ್(Fan following) ಇದೆ. ಪಕ್ಕಾ ಮನೆ ಹುಡುಗಿ ರೀತಿ ಇರುವ ಇವರ ಬಗ್ಗೆ ಅನೇಕ ಹುಡುಗರು ಕನಸು ಕಾಣೋದು ಕಾಮನ್ ಆಗಿ ಬಿಟ್ಟಿದೆ. ಪಾತ್ರಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿರೋ ನಟಿ ಇವರು. ಗಾರ್ಗಿ(Gargi) ಇವರ ಮುಂದಿನ ಸಿನಿಮಾ. ತಮಿಳು ಭಾಷೆಯಲ್ಲಿ ಬರುತ್ತಿರುವ ಈ ಚಿತ್ರ ಕನ್ನಡ ಹಾಗೂ ತೆಲುಗಿಗೆ ಡಬ್ಬಿಂಗ್(Dubbing) ಆಗ್ತಿದೆ. ತಮ್ಮ ಸಿನಿಮಾಗಳಿಗೆಲ್ಲ ತಾವೇ ಡಬ್ಬಿಂಗ್ ಮಾಡೋ ಸಾಯಿ ಪಲ್ಲವಿ ಇದೀಗ ಸಿನಿಮಾ ಬೇರೆ ಭಾಷೆಯಲ್ಲಿ ಬರುತ್ತಿದ್ದರೂ ಅದಕ್ಕೂ ಡಬ್‌ ಮಾಡಲು ಹಿಂದೇಟು ಹಾಕಲ್ಲ. ಈ ಸಿನಿಮಾಕ್ಕಾಗಿ ಇವರು ಕನ್ನಡ ಕಲಿಯಲು ಪ್ರಯತ್ನಿಸಿದ್ದಾರೆ. ಶೀತಲ್ ಶೆಟ್ಟಿ(Sheethal Shetty ಅವರ 'ಶೀ ಟೇಲ್ಸ್ ಎಂಟರ್ ಟೈನ್‌ಮೆಂಟ್‌' ಸಂಸ್ಥೆ ಅವರಿಗೆ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸೋದನ್ನು ತೋರಿಸಿಕೊಟ್ಟು ಅವರು ಡಬ್ ಮಾಡೋ ಹಾಗೆ ಮಾಡಿದ್ದಾರೆ. 'ನಾನು ಹೇಳೋ ಯಾವುದನ್ನೂ ಸೀರಿಯಸ್ ಆಗಿ ತಗೊಳಲ್ಲ ಅಲ್ವಾ' ಅಂತ ಕನ್ನಡದಲ್ಲಿ ಮಾತಾಡಿರೋ ವೀಡಿಯೋವನ್ನು ಸ್ವತಃ ಸಾಯಿ ಪಲ್ಲವಿ ಹಂಚಿಕೊಂಡಿದ್ದಾರೆ. ಇದನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. 

 

ಸಾಯಿ ಪಲ್ಲವಿ ನಟಿಸುತ್ತಿರುವ 'ಗಾರ್ಗಿ' ಚಿತ್ರದ ನಿರ್ದೇಶಕ ಗೌತಮ್‌ ರಾಮಚಂದ್ರನ್ (Goutham Ramachandrean). ರಕ್ಷಿತ್ ಶೆಟ್ಟಿ(Rakshith Shetty) ಅವರ 'ಉಳಿದವರು ಕಂಡಂತೆ' ಚಿತ್ರವನ್ನು 'ರಿಚ್ಚಿ' ಅನ್ನೋ ಹೆಸರಲ್ಲಿ ತಮಿಳಿಗೆ ತಂದವರು. ಬೆಂಗಳೂರಿಗೆ ಡಬ್ಬಿಂಗ್‌ಗೆಂದು ಸಾಯಿಪಲ್ಲವಿ ಅವರನ್ನು ಕರೆತಂದವರೂ ಅವರೇ. ಬೆಂಗಳೂರಿಗೆ ಬಂದ ಅನುಭವವನ್ನು ಸಾಯಿ ಪಲ್ಲವಿ ಖುಷಿಯಿಂದ ಹಂಚಿಕೊಂಡಿದ್ದಾರೆ. ಇಲ್ಲಿನ ವಾತಾವರಣ, ಊಟ, ತಿಂಡಿ, ಕನ್ನಡ ಸಿನಿಮಾ ಎಲ್ಲವೂ ಅವರಿಗಿಷ್ಟವಾಗಿದೆ. 'ನಾನು ಮೊದಲು ನೋಡಿದ ಕನ್ನಡ ಸಿನಿಮಾ ರೂಪಾ ರಾವ್ ನಿರ್ದೇಶನದ ಗಂಟುಮೂಟೆ. ಲೂಸಿಯಾ, ಯೂ ಟರ್ನ್, ಗರುಡ ಗಮನ ವೃಷಭ ವಾಹನ, ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳನ್ನೆಲ್ಲ ನೋಡಿದ್ದೀನಿ. ಒಂದಕ್ಕಿಂತ ಒಂದು ವಿಭಿನ್ನವಾದ ಸಿನಿಮಾಗಳಿವು' ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಸಾಯಿ ಪಲ್ಲವಿ ಬಹಳ ಬೇಗ ಭಾಷೆ ಕಲಿಯುತ್ತಾರೆ. ಅವರು ಮಲಯಾಳಂ ಸಿನಿಮಾಗಳಿಗೂ ಸ್ವತಃ ತಾನೇ ಡಬ್ ಮಾಡುತ್ತಾರೆ. ತಮಿಳು, ತೆಲುಗು ಚಿತ್ರಗಳಿಗೂ ತಮ್ಮ ಪಾತ್ರಕ್ಕೆ ತಾವೇ ದನಿ ನೀಡ್ತಾರೆ. ಆದರೆ ಕನ್ನಡವನ್ನು ಕಲೀತಿರೋದು ಇದೇ ಮೊದಲು. 'ಕನ್ನಡ ಭಾಷೆ ಕಲಿತಿದ್ದು ಅವಿಸ್ಮರಣೀಯ ಅನುಭವ. ಆದರೆ ಸಖತ್ ಚಾಲೆಂಜಿಂಗ್ ಅನಿಸ್ತು. ಅದರಲ್ಲೂ ಲ, ಣ, ನ ಅಕ್ಷರ ಉಚ್ಚರಿಸೋದು ಬಹಳ ಕಷ್ಟ. ಆದರೆ ಟೀಮ್‌ನವರ ಸಹಕಾರದಿಂದ ಇಂಥಾ ಚಾಲೆಂಜಸ್‌ನ ಯಶಸ್ವಿಯಾಗಿ ಫೇಸ್ ಮಾಡೋದು ಸಾಧ್ಯ ಆಯ್ತು ಅಂತಾರೆ.

ಕೆಜಿಎಫ್ 3 ಬಗ್ಗೆ ಬಿಗ್ ನ್ಯೂಸ್ ಕೊಟ್ಟ ನಿರ್ಮಾಪಕ ವಿಜಯ ಕಿರಗಂದೂರು

ಆದರೆ ಇವೆಲ್ಲಕ್ಕಿಂತ ಮಜಾ ಆಗಿದ್ದು ಸಾಯಿ ಪಲ್ಲವಿ ಮಲ್ಲೇಶ್ವರಂನ 'ವೀಣಾ ಸ್ಟೋರ್ಸ್(Veena stores, Malleshvaram) ಗೆ ವಿಸಿಟ್‌ ಮಾಡಿದ್ದು, ಮತ್ತಲ್ಲಿ ಇಡ್ಲಿ ತಿಂದು ಆಹ್, ಏನ್ ಚೆನ್ನಾಗಿದೆ ಅಂದಿದ್ದು. 'ಪಕ್ಕಾ ಮನೆ ತಿಂಡಿ ಹಾಗೇ ಇತ್ತು ವೀಣಾ ಸ್ಟೋರ್ಸ್‌ನ ತಿಂಡಿ. ಅಷ್ಟು ಶುಚಿ, ರುಚಿ..' ಅಂತ ವೀಣಾ ಸ್ಟೋರ್‌ಅನ್ನು ಹಾಡಿ ಹೊಗಳಿದ್ದಾರೆ. ಮುಂದಿನ ಸಲ ಬೆಂಗಳೂರಿಗೆ ಭೇಟಿ ಕೊಟ್ಟಾಗ ವೀಣಾ ಸ್ಟೋರ್ಸ್ ಜೊತೆಗೆ ಇಂಥಾ ಇನ್ನೊಂದಿಷ್ಟು ಫುಲ್ ಜಾಯಿಂಟ್‌ಗಳಿಗೆ ವಿಸಿಟ್‌ ಮಾಡಿಯೇ ಹೋಗೋದಂತೆ.

Madhuri Dixit Birthday; ದೂರದರ್ಶದಿಂದ ರಿಜೆಕ್ಟ್ ಆಗಿದ್ದ ಮಾಧುರಿ ಸ್ಟಾರ್ ನಟಿಯಾಗಿ ಬೆಳೆದ ರೋಚಕ ಕಥೆ

ವೀಣಾ ಸ್ಟೋರ್ಸ್ ಬೆಂಗಳೂರಿಗರಿಗೆ ಚಿರಪರಿಚಿತ ಫುಡ್ ಜಾಯಿಂಟ್. ಬೆಂಗಳೂರಿನ ಮಾರ್ಗೋಸಾ ರೋಡ್‌(Margosa Road) ನಲ್ಲಿರುವ ಈ ಹೊಟೇಲ್‌ ಶುರುವಿಗೆ ಚಿಕ್ಕದಾಗಿತ್ತು. ಈಗ ವಿಶಾಲವಾದ ಜಾಗ ಹೊಂದಿದೆ. ಇಲ್ಲಿನ ಇಡ್ಲಿ, ವಡೆ, ಚಟ್ನಿ ಸಾಯಿ ಪಲ್ಲವಿ ಅವರು ಉದ್ಗರಿಸಿದಂತೆ 'ಆಹ್, ಏನ್ ರುಚಿ' ಅನ್ನುವಷ್ಟು ಟೇಸ್ಟಿ. 1977ರಿಂದಲೇ ಇಲ್ಲೀವರೆಗೆ 'ವೀಣಾ ಸ್ಟೋರ್ಸ್' ನ ಇಡ್ಲಿ ರುಚಿಗೆ ಮಾರು ಹೋದವರು ಅದೆಷ್ಟು ಮಂದಿಯೋ. ಇದೀಗ ಈ ಲೀಸ್ಟ್‌ಗೆ ಸಾಯಿ ಪಲ್ಲವಿ ಅವರೂ ಸೇರಿದ್ದಾರೆ.

ರಾಕಿ ಭಾಯ್ ಲೈಫ್ ನಲ್ಲಿ ಹೊಸ ನಾಯಕಿ ಎಂಟ್ರಿ!

click me!