
ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಅವರಿಗೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ (Money Laundering Case) ಪ್ರಕರಣದಲ್ಲಿ ಮೋಹನ್ ಲಾಲ್ ಹೆಸರು ತಳುಕು ಹಾಕಿಡೊಂಡಿದ್ದು ಕೊಚ್ಚಿಯ ಜಾರಿ ನಿರ್ದೇಶನಾಲಯ(ED)ನೋಟಿಸ್ ನೀಡಿದೆ. ಮೊಹನ್ ಲಾಲ್ ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಪುರಾತನ ವಸ್ತುಗಳ ಹೆಸರಿನಲ್ಲಿ ಕೇರಳದ ವ್ಯಾಪಾರಿ ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚಿಸಿದ್ದಾನೆ. ಅಕ್ರಮ ಹಣ ವರ್ಗವಣೆ ಪ್ರಕರಣದಲ್ಲಿ ಆತನ ವಿರುದ್ಧ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಹನ್ ಲಾಲ್ ಅವರಿಗೂ ನೋಟಿಸ್ ನೀಡಲಾಗಿದೆ ಎನ್ನಲಾಗುತ್ತಿದೆ. ಅವರು ಮುಂದಿನ ವಾರ ಕೊಚ್ಚಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಲಿದ್ದಾರೆ ಎಂದು ವರದಿ ಆಗಿದೆ.
ಅಪರೂಪದ ಮತ್ತು ಪುರಾತನ ವಸ್ತುಗಳನ್ನು ಹೊಂದಿದ್ದೇನೆಂದು ಮಾನ್ಸನ್ ಮಾವುಂಕಲ್ ಅನೇಕರಿಗೆ ವಂಚನೆ ಎಸಗಿದ್ದ. ಈತನ ವಿರುದ್ಧ ಹಲವು ದೂರುಗಳು ಬಂದಿದ್ದವು. ಈ ದೂರನ್ನು ಆಧರಿಸಿ ಮಾವುಂಕಲ್‌ನನ್ನು ಕೇರಳ ಕ್ರೈಂ ಬ್ರ್ಯಾಂಚ್ ಪೊಲೀಸರು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಂಧಿಸಿದ್ದರು. ವಂಚಿತರು ತಮಗೆ 10 ಕೋಟಿ ರೂ. ವಂಚಿಸಲಾಗಿದೆ ಎಂದು ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಂಪರ್ಕ ಮಾಡಿದ್ದರು. ಬಳಿಕ ಅಪರಾಧ ವಿಭಾಗದ ಪೊಲೀಸರು ಆತನ ಮನೆ ಕಮ್ ಮ್ಯೂಸಿಯಮ್ ನಿಂದ ಬಂಧಿಸಿದ್ದರು.
James ಸಿನಿಮಾಗೆ ನಮ್ಮ ಮನಸ್ಸಲ್ಲಿ ವಿಶೇಷ ಸ್ಥಾನ: ಮಲಯಾಳಂ ನಟ ಮೋಹನ್ ಲಾಲ್
ಮೋಹನ್ ಲಾಲ್‌ಗೆ ಏನ್ ಸಂಬಂಧ?
ಮೋಹನ್ ಲಾಲ್ ಹಲವು ಬಾರಿ ಮಾನ್ಸನ್ ಮಾವುಂಕಲ್ ನ ಮ್ಯೂಸಿಯಂಗೆ ಭೇಟಿ ನೀಡಿದ್ದರು. ಅಲ್ಲಿ ಪುರಾತನ ವಸ್ತು ಸಂಗ್ರಹ ಎಂದು ಹೇಳಿಕೊಂಡಿದ್ದ ವಸ್ತುಗಳನ್ನು ಪ್ರದರ್ಶಿಸಿದ್ದ ಎನ್ನಲಾಗಿದೆ. ಇಬ್ಬರ ನಡುವೆ ಗೆಳೆತನವಿದೆ ಎನ್ನುವ ಅನುಮಾನ ಇಡಿ ಅಧಿಕಾರಿಗಳಿಗೆ ಮೂಡಿದೆ. ಹಾಗಾಗಿ ನೋಟಿಸ್ ಹೋಗಿದೆ ಎನ್ನಲಾಗುತ್ತಿದೆ. ವಿ
ಮೋಹನ್ ಲಾಲ್ ಅವರ ಸಿನಿಮಾ ವಿಚಾರಗಳ ಬಗ್ಗೆ ಹೇಳುವುದಾದರೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಈ ವಯಸ್ಸಿನಲ್ಲೂ ಮೋಹನ್ ಲಾಲ್ ಬಹುಬೇಡಿಕೆಯ ನಟರಾಗಿದ್ದಾರೆ. ಬ್ಯಾಕು ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಮೋಹನ್ ಲಾಲ್ ದೃಶ್ಯಂ-2, ಮರಕ್ಕರ್, ಬ್ರೋ ಡ್ಯಾಡಿ, ಆರಾಟ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಮೋಹನ್ ಲಾಲ್ ಸದ್ಯ 12 ಮೈನ್, ಅಲೋನ್, ಮಾನ್ಸ್ಟಾರ್, ರಾಮ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಿರತರಾಗಿದ್ದಾರೆ.
Vikrant Rona: ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ರೆಡಿಯಾದ ಕಿಚ್ಚ ಸುದೀಪ್
ಮೋಹನ್ ಲಾಲ್ ನಟನೆಯ ‘ಲೂಸಿಫರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದಲ್ಲಿ ಮಲಯಾಳಂನ ಮತ್ತೋರ್ವ ಖ್ಯಾತ ನಟ ಪೃಥ್ವಿರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಗೆ ಸಹಾಯ ಮಾಡುವ ಡಾನ್ ಪಾತ್ರ ಇದಾಗಿತ್ತು. ಈ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ನಟಿಸಿದ್ದಾರೆ. ಪೃಥ್ವಿರಾಜ್ ಪಾತ್ರವನ್ನು ಸಲ್ಮಾನ್ ಖಾನ್ ಮಾಡುತ್ತಿದ್ದಾರೆ. ಈಗಾಗಲೇ ಸಲ್ಮಾನ್ ಖಾನ್ ಪಾತ್ರದ ಚಿತ್ರೀಕರಣ ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.