ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮದ್ವೆ ಪ್ರಸ್ತಾವ ಇಟ್ಟ ನಟಿ ಪಾಯಲ್ ಘೋಷ್ ಒಂದೇ ಒಂದು ಷರತ್ತು ವಿಧಿಸಿದ್ದಾರೆ. ಏನದು?
ಹಿಂದಿ, ಇಂಗ್ಲಿಷ್, ತೆಲುಗು ಮತ್ತು ಕನ್ನಡದ ವಿವಿಧ ರೀತಿಯ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪಾಯಲ್ ಘೋಷ್ (Payal Ghosh) ಮಾಡಿರುವ ಚಿತ್ರ ಬೆರಳೆಣಿಕೆಯದ್ದಾದರೂ ಮೀ ಟೂ ಅಭಿಯಾನದ ಮೂಲಕ ಸಾಕಷ್ಟು ಸದ್ದು ಮಾಡಿದವರು. ಲೈಂಗಿಕ ಕಿರುಕುಳದ ಕುರಿತಾಗಿ ಶುರುವಾದ ಮೀ ಟೂ ಅಭಿಯಾನದಲ್ಲಿ ಹಲವಾರು ನಟಿಯರು ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಹೇಳಿಕೆ ನೀಡಿದ್ದ ಸಮಯದಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಆರೋಪ ಮಾಡಿದ್ದರು ಪಾಯಲ್ ಘೋಷ್. 2014 15ರಲ್ಲಿ ತಾವು ಅನುರಾಗ್ ಭೇಟಿ ಮಡಿದ್ದೆ. ಈ ವೇಳೆ ಮದ್ಯದ ಅಮಲಿನಲ್ಲಿ ಅನುರಾಗ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಾಯಲ್ ಆರೋಪ ಮಾಡಿದ್ದರು. ತಮ್ಮ ಮನೆಗೆ ಕರೆಸಿಕೊಂಡಿದ್ದ ವೇಳೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದರು ಎಂದು ಆರೋಪಿಸಿದ್ದರು.
ಇದಾದ ಬಳಿಕ ಕೆಲ ತಿಂಗಳ ಹಿಂದೆ ನಟಿ ಮತ್ತೆ ಹಲ್ಚಲ್ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆಯ ಪತ್ರ (suicide note) ಶೇರ್ ಮಾಡಿಕೊಳ್ಳುವ ಮೂಲಕ. ಅರ್ಧಂಬರ್ಧ ಡೆತ್ನೋಟ್ ಬರೆದು ಎಲ್ಲರನ್ನೂ ಭಯಕ್ಕೆ ತಳ್ಳಿದ್ದರು. ಇದಕ್ಕೂ ಮೊದಲು ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡಿ, ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದರು ಎಂದು ನಟಿ ಹೇಳಿಕೊಂಡಿದ್ದರು. ಔಷಧಿ ತರುವ ಸಲುವಾಗಿ ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಔಷಧಿ ಕೊಂಡುಕೊಂಡು ಕಾರಿನ ಬಳಿ ಬರುವಾಗ ಮುಸುಕುಧಾರಿ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿದ್ದು, ಅವರ ಕೈಯಲ್ಲಿ ಬಾಟಲ್ ಇತ್ತು, ಅದು ಆಸಿಡ್ ಇರಬಹುದು ಎಂದು ಹೇಳಿದ್ದರು.
ಸೆಕ್ಸ್ ಪ್ರಶ್ನೆಗಳಿಂದ ಬೇಸತ್ತು ಹೋದ್ರಾ ಕರಣ್ ಜೋಹರ್? ಈ ಬಾರಿ ಬರಲಿದ್ದಾರೆ ಅಮ್ಮ-ಮಗ!
ಹೀಗೆ ಹೇಳಿಕೆಗಳ ಮೂಲಕವೇ ಸದ್ದು ಮಾಡುತ್ತಿರುವ ನಟಿ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಬಾರಿ ಇವರ ಹೇಳಿಕೆ ಸ್ವಲ್ಪ ವಿಭಿನ್ನವಾಗಿದೆ. ಅದೇನೆಂದರೆ, ಈಕೆ ಟೀಂ ಇಂಡಿಯಾದ ಪ್ರಬಲ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರನ್ನು ಮದುವೆಯಾಗಲು ರೆಡಿ ಎಂದಿದ್ದಾರೆ. ಅಷ್ಟಕ್ಕೂ ಶಮಿ ಅವರು, ಬೌಲಿಂಗ್‌ನಿಂದ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ವಿಶ್ವಕಪ್‌ನಲ್ಲಿಯೂ ಬೆಸ್ಟ್ ಪ್ರದರ್ಶನ ತೋರಿರುವ ಅವರು, ಹಲವು ವಿಕೆಟ್ ಪಡೆದಿದ್ದಾರೆ. ಇದರ ಜೊತೆಗೆನೇ ಪತ್ನಿಗೆ ಡಿವೋರ್ಸ್ ಕೊಟ್ಟೂ ಸುದ್ದಿಯಲ್ಲಿರುವ ಇವರನ್ನು ಮದುವೆಯಾಗಲು ಈಗ ತಾವು ರೆಡಿ ಎಂದಿದ್ದಾರೆ ಪಾಯಲ್ ಘೋಷ್. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿಯೂ ಶೇರ್ ಮಾಡಿಕೊಂಡಿದ್ದಾರೆ. ಆದರೆ ಹೀಗೆ ಮದ್ವೆಯಾಗಲು ಒಂದೇ ಒಂದು ಷರತ್ತು ವಿಧಿಸಿದ್ದಾರೆ.
ಹೌದು. ನಟಿ ಪಾಯಲ್ ಘೋಷ್, ಮೊಹಮ್ಮದ್ ಶಮಿಯ ಬಗ್ಗೆ ಅವರು ಮೆಚ್ಚುಗೆ ಸೂಚಿಸುತ್ತಲೇ ಮದುವೆಯ ಪ್ರಸ್ತಾವ ಇಟ್ಟಿದ್ದಾರೆ. ‘ಶಮಿ ನೀವು ಇಂಗ್ಲಿಷ್ ಕಲಿತರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧ’ ಎಂದು ಪಾಯಲ್ ಘೋಷ್ ಟ್ವೀಟ್ ಮಾಡಿದ್ದು, ಇದು ಸಕತ್ ವೈರಲ್ ಆಗುತ್ತಿದೆ. ಇದರ ಜೊತೆಗೆನೇ ಇನ್ನೊಂದು ಟ್ವೀಟ್ನಲ್ಲಿ, ‘ಶಮಿ ಅವರೇ ಸೆಮಿಫೈನಲ್‌ನಲ್ಲಿ ನೀವು ಅತ್ಯುತ್ತಮ ಪ್ರದರ್ಶನ ನೀಡಲು ನನ್ನಿಂದ ಯಾವ ರೀತಿಯ ನೈತಿಕ ಬೆಂಬಲ ಬೇಕು? ನೀವು ಹೀರೋ ಆಗುವುದನ್ನು ನೋಡಬೇಕು’ ಎಂದಿದ್ದಾರೆ. ಇವೆಲ್ಲಾ ಪ್ರಚಾರಕ್ಕಾಗಿ ಎನ್ನುತ್ತಿದ್ದಾರೆ ನೆಟ್ಟಿಗರು.
ಡೀಪ್‌ಫೇಕ್ ಫೋಟೋದ ಭಯಾನಕ ಅನುಭವ ಹಂಚಿಕೊಂಡ ನಟಿ ಸೊನ್ನಾಳ್ಳಿ ಸೇಗಲ್
Tum apna English sudharlo, I’m ready to marry you 🤣🤣
— Payal Ghoshॐ (@iampayalghosh)