ಸೆಕ್ಸ್​ ಪ್ರಶ್ನೆಗಳಿಂದ ಬೇಸತ್ತು ಹೋದ್ರಾ ಕರಣ್​ ಜೋಹರ್​? ಈ ಬಾರಿ ಬರಲಿದ್ದಾರೆ ಅಮ್ಮ-ಮಗ!

Published : Nov 08, 2023, 05:25 PM IST
ಸೆಕ್ಸ್​ ಪ್ರಶ್ನೆಗಳಿಂದ ಬೇಸತ್ತು ಹೋದ್ರಾ ಕರಣ್​ ಜೋಹರ್​? ಈ ಬಾರಿ ಬರಲಿದ್ದಾರೆ ಅಮ್ಮ-ಮಗ!

ಸಾರಾಂಶ

ಕಾಫಿ ವಿತ್​ ಕರಣ್​ ಷೋನಲ್ಲಿ ಸೆಕ್ಸ್​ ಪ್ರಶ್ನೆಗಳಿಂದ ಬೇಸತ್ತು ಹೋದ್ರಾ ಕರಣ್​ ಜೋಹರ್​? ಈ ಬಾರಿ ಬರಲಿದ್ದಾರೆ ಅಮ್ಮ-ಮಗ!  

ಹಿಂದಿ ಚಾನೆಲ್​ ವೀಕ್ಷಿಸುವ ಪ್ರೇಕ್ಷಕರಿಗೆ ಕಾಫಿ ವಿತ್​ ಕರಣ್​ ಬಗ್ಗೆ ತಿಳಿದೇ ಇದೆ. ಈ ಕಾರ್ಯಕ್ರಮ ನಡೆಸಿಕೊಡುತ್ತಿರುವವರು ಇನ್ನೂ ಅವಿವಾಹಿತರಾಗಿಯೇ ಇರೋ ನಿರ್ದೇಶಕ ಕರಣ್​ ಜೋಹರ್​. ಆದರೆ ಈ ಕಾರ್ಯಕ್ರಮ ಸದಾ ವಿವಾದಗಳಿಂದಲೇ ಫೇಮಸ್ಸು. ಅದರಲ್ಲಿಯೂ ಸೆಕ್ಸ್​ ಪ್ರಶ್ನೆಗಳಿಗೇ ಇಲ್ಲಿ ಪ್ರಾಧಾನ್ಯ. ಅಶ್ಲೀಲ ಪ್ರಶ್ನೆಗಳನ್ನು ಗೆಸ್ಟ್​ಗಳಿಗೆ ಕೇಳುವ ಮೂಲಕ ತಮ್ಮ ಷೋನ ಟಿಆರ್​ಪಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವುದೂ ಸುಳ್ಳಲ್ಲ. ಜನರೂ ಬೈಯುತ್ತಲೇ ಇಂಥ ಷೋಗಳನ್ನು ನೋಡುವುದು ಈ ರೀತಿಯ ರಿಯಾಲಿಟಿ ಷೋಗಳ ಟಿಆರ್​ಪಿ ರೇಟ್​ ನೋಡಿದರೆ ತಿಳಿಯುತ್ತದೆ.  ಆದರೆ ಟ್ರೋಲ್​ಗಳಿಂದ ಬೇಸತ್ತೋ ಅಥವಾ ತಮ್ಮ ಷೋ ಸ್ವಲ್ಪ ಡಿಫರೆಂಟ್​ ಆಗಿರಲಿ ಎನ್ನುವ ಕಾರಣಕ್ಕೋ ಏನೋ ಒಟ್ಟಿನಲ್ಲಿ ಮುಂದಿನ ಬಾರಿ ಕರಣ್​ ಅವರು ಅಮ್ಮ-ಮಗನನ್ನು ಕರೆಸುವ ಪ್ಲ್ಯಾನ್​ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.  

ಅಂದಹಾಗೆ ಈ ಅಮ್ಮ-ಮಗ ಅಂದರೆ  ಶರ್ಮಿಳಾ ಟ್ಯಾಗೋರ್​ ಹಾಗೂ ಅವರ ಪುತ್ರ ನಟ ಸೈಫ್​ ಅಲಿ ಖಾನ್. ಅಂದಹಾಗೆ, ಶರ್ಮಿಳಾ ಟ್ಯಾಗೋರ್​ (Sharmila Tagore) ಬಾಲಿವುಡ್​ ಸಿನಿಮಾ ಕಂಡ ಅಪರೂಪದ ನಟಿ. 1960ರಿಂದ 80ರ ದಶಕದವರೆಗೂ ಬಹುಬೇಡಿಕೆಯುಳ್ಳ ನಟಿ ಈಕೆ. ಬಣ್ಣದ ಲೋಕಕ್ಕೆ ಹೆಣ್ಣೊಬ್ಬಳು ಎಂಟ್ರಿ ಕೊಡುತ್ತಾಳೆಂದರೆ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಕಾಲವದು. ಆಗ ಮೈಕೈ ತೋರಿಸುವುದಕ್ಕಾಗಿಯೇ ಸೈಡ್​ ಆ್ಯಕ್ಟ್ರೆಸ್​ಗಳನ್ನು ಸಿನಿಮಾಗಳಲ್ಲಿ ತೆಗೆದುಕೊಳ್ಳಲಾಗುತ್ತಿತ್ತು.  ಆದರೆ ನಟನೆಗೆ ಬರುವುದೇ ಸವಾಲು ಎಂಬಂತಿದ್ದ 60-70ರ ದಶಕದಲ್ಲಿಯೇ ಬಿಕಿನಿ ಬಟ್ಟೆ ತೊಟ್ಟು ಸುದ್ದಿಯಾಗಿದ್ದ ನಟಿ ಶರ್ಮಿಳಾ ಟ್ಯಾಗೋರ್​.  ಹೌದು. ಶರ್ಮಿಳಾ ಟ್ಯಾಗೋರ್​ 1966ರಲ್ಲಿ ಬಿಕಿನಿ (Bikini) ಡ್ರೆಸ್​ ಹಾಕಿಕೊಂಡು ಮ್ಯಾಗ್‌ಝೀನ್‌ ಒಂದಕ್ಕೆ ಫೋಟೋಶೂಟ್​ ಮಾಡಿಸಿಕೊಂಡಿದ್ದರು.  ಆಗ 22 ವರ್ಷ ವಯಸ್ಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಏನಾದರೂ ಸಾಧನೆ ಮಾಡುವ ಹುಚ್ಚು ಮನಸ್ಸು ಇತ್ತು. ಅದಕ್ಕಾಗಿಯೇ ಹೀಗೆ ಮಾಡಿದೆನೋ ಗೊತ್ತಿಲ್ಲ ಎಂದಿರುವ ಶರ್ಮಿಳಾ ಟ್ಯಾಗೋರ್​, ಬಿಕಿನಿ ಡ್ರೆಸ್​ ತೋರಿಸಿ ನಿಜಕ್ಕೂ ನೀನು ಇದನ್ನು ಹಾಕಿಕೊಳ್ಳುತ್ತಿಯಾ ಎಂದು ಫೋಟೋಗ್ರಾಫರೇ ಪ್ರಶ್ನೆ ಕೇಳಿದ್ದನ್ನು ಕೆಲ ದಿನಗಳ ಹಿಂದೆ ನೆನಪಿಸಿಕೊಂಡಿದ್ದರು. 

ಗುಂಡೇಟಿಗೆ ಬಲಿಯಾಗುವ ಭಯದಿಂದ್ಲೇ ಮನ್ಸೂರ್​ ಖಾನ್​ರನ್ನು ಮದ್ವೆಯಾದೆ: ಆ ಕರಾಳ ದಿನ ನೆನೆದ ಶರ್ಮಿಳಾ

 ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆಯಾಗಿರುವ ಶರ್ಮಿಳಾ ಟ್ಯಾಗೋರ್ ಅವರು ತಮ್ಮ ಅಸಾಧಾರಣ ಅಭಿನಯದಿಂದ ಸತತವಾಗಿ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಆದರೆ ಇಂದಿನ ಕೆಲವು ಚಿತ್ರತಾರೆಯರಂತೆಯೇ ಅಂದಿನ ಕಾಲದಲ್ಲಿಯೇ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದ್ದವರು ಶರ್ಮಿಳಾ. ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದಾಗ ಸಿನಿ ರಂಗದಲ್ಲಿ ತಲ್ಲಣ ಸೃಷ್ಟಿಯಾಗಿತ್ತು.  ಅಂದು ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ಒಂದು ವೇಳೆ  ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರೆ ನಾವಲ್ಲ, ಬುಲೆಟ್​ ಮಾತನಾಡಬೇಕಾಗುತ್ತದೆ ಎಂಬ ಜೀವ ಬೆದರಿಕೆ ಬಂದಿತ್ತು. ಸಾವಿನ ಭಯದಲ್ಲಿಯೇ ಮದುವೆಯಾದೆವು ಎಂಬುದನ್ನು ನಟಿ ನೆನಪಿಸಿಕೊಂಡಿದ್ದರು.  ಅಪ್ಪನ ಹಾದಿಯನ್ನೇ ಹಿಡಿದ ಸೈಫ್​ ಅಲಿ ಖಾನ್​, ಇಬ್ಬರು ಹಿಂದೂ ನಟಿಯರನ್ನು ಮದುವೆಯಾಗಿರುವುದು ಎಲ್ಲರಿಗೂ ತಿಳಿದದ್ದೇ. ಒಂದೊಮ್ಮೆ ಮಗಳೇ ಎಂದು ಸಂಬೋಧಿಸಿದ್ದ ನಟಿ ಕರೀನಾ ಕಪೂರ್​ ಅವರನ್ನೇ ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. 

 ಈ ಅಮ್ಮ-ಮಗನ ಜೋಡಿ ಈಗ ಕಾಫಿ ವಿತ್​ ಕರಣ್​ ಸೀಸನ್​ 8ರಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.   ಈ ಹಿಂದೆ ಸಂದರ್ಶನವೊಂದರಲ್ಲಿ ನಟಿ,  ಶರ್ಮಿಳಾ ಟ್ಯಾಗೋರ್ ಅವರು ತಮ್ಮ ಯಶಸ್ವಿ ಚಲನಚಿತ್ರ ವೃತ್ತಿಜೀವನದ ಬಗ್ಗೆ ಹೇಳಿಕೊಂಡಿದ್ದರು. ಆಗ ಅವರು, ತಮ್ಮ ತೀವ್ರವಾದ ಕೆಲಸದ ಬದ್ಧತೆಗಳಿಂದಾಗಿ,  ಮಗ ಸೈಫ್ ಅಲಿ ಖಾನ್ ಅವರೊಂದಿಗೆ ಹೆಚ್ಚು ಸಮಯ ಮೀಸಲು ಇಡಲು ಆಗಲಿಲ್ಲ ಎಂದಿದ್ದರು.  ಇದಲ್ಲದೆ, ಅವರು ತಮ್ಮ ನೆರೆಹೊರೆಯವರಲ್ಲಿ ಒಬ್ಬರು ಸೈಫ್‌ಗೆ ಎರಡನೇ ತಾಯಿಯಂತಿದ್ದಾರೆ ಮತ್ತು ಅವರ ಪಾಲನೆಯಲ್ಲಿ ಗಣನೀಯವಾಗಿ ಕೊಡುಗೆ ನೀಡಿದ್ದಾರೆ ಎಂದಿದ್ದರು. ಆತ ಚಿಕ್ಕವನಿರುವಾಗ ನಾನು ಎರಡು ಶಿಫ್ಟ್‌ಗಳನ್ನು ಮಾಡುತ್ತಿದ್ದೆ, ಆದರೆ ನನ್ನ ಪತಿ ಮತ್ತು ನನ್ನ ನೆರೆಹೊರೆಯವರಾದ ಸುನೀತಾ ಗೋಸ್ವಾಮಿ ಅವರ ಬೆಂಬಲವನ್ನು ಹೊಂದಿದ್ದೆ. ಆದ್ದರಿಂದ ನಾನು ಅವನ ಬಗ್ಗೆ ಹೆಚ್ಚು ಕಾಳಜಿ ತೋರಿಸಲು ಸಾಧ್ಯವಾಗಿರಲಿಲ್ಲ ಎಂದಿದ್ದರು.  ಇದೀಗ ಈ ಸಂಚಿಕೆ ಕುತೂಹಲಕ್ಕೆ ಕಾರಣವಾಗಿದೆ. 

ಮದುವೆಯಾಗ್ತಿದ್ದಂತೆಯೇ ವರುಣ್ ತೇಜ್- ಲಾವಣ್ಯ ಎಲ್ಲಾ ಸುಳ್ಳು ಎಂದು ಹೇಳಿದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!