ಆಸ್ಕರ್ ಗೆದ್ದ ಬಳಿಕ ನಿರ್ಮಾಪಕಿ ಗುನೀತ್ ಮೊಂಗಾ ಆಸ್ಪತ್ರೆಗೆ ದಾಖಲಾಗಿದ್ರು; ಶಾಕಿಂಗ್ ವಿಚಾರ ಬಿಚ್ಚಿಟ್ಟ ಕೀರವಾಣಿ

By Shruthi KrishnaFirst Published Mar 26, 2023, 1:07 PM IST
Highlights

ಆಸ್ಕರ್ ಗೆದ್ದ ಬಳಿಕ ನಿರ್ಮಾಪಕಿ ಗುನೀತ್ ಮೊಂಗಾ ಆಸ್ಪತ್ರೆಗೆ ದಾಖಲಾಗಿದ್ರು ಎನ್ನುವ ಶಾಕಿಂಗ್ ವಿಚಾರವನ್ನು ಎಂ ಎಂ ಕಾರವಾಣಿ ಬಿಚ್ಚಿಟ್ಟಿದ್ದಾರೆ. 

ಪ್ರತಿಷ್ಠತ ಆಸ್ಕರ್ ಪ್ರಶಸ್ತಿ ಸಮಾರಂಭ ಈ ಬಾರಿ ಭಾರತಕ್ಕೆ ತುಂಬಾ ವಿಶೇಷವಾಗಿತ್ತು. ಭಾರತ ಈ ಬಾರಿ ಬಾರಿಯ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಎಲಿಫೆಂಟ್ ವಿಸ್ಪರ್ಸ್ ಪ್ರಶಸ್ತಿ ಗೆದ್ದರೆ, ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್ ಆರ್ ಆರ್ ಸಿನಿಮಾದ ನಾಟು ನಾಟು.. ಹಾಡು ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಭಾರತಕ್ಕೆ ಹೆಮ್ಮೆ ತಂದಿದೆ ಈ ತಂಡ. ಆಸ್ಕರ್ ಪ್ರಶಸ್ತಿ ಗೆದ್ದ ಬಳಿಕ ಎಲಿಫೆಂಟ್ ವಿಸ್ಪರ್ಸ್ ನಿರ್ಮಾಪಕಿ ಗುನೀತ್ ಮೊಂಗಾ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ರು ಎಂದು ಖ್ಯಾತ ಸಂಗೀತ ನಿರ್ದೇಶಕ ಆಸ್ಕರ್ ವಿಜೇತ ಎಂ ಎಂ ಕೀರವಾಣಿ ಬಹಿರಂಗ ಪಡಿಸಿದ್ದಾರೆ. 

95ನೇ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಗೀತರಚನೆಕಾರ ಚಂದ್ರಬೋಷ್ ಮತ್ತು ಎಂಎಂ ಕೀರವಾಣಿ ಆರ್ ಆರ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಪಡೆದು ವೇದಿಕೆಯಲ್ಲಿ ಉತ್ತಮ ಭಾಷಣ ಮಾಡಿದರು. ಇಬ್ಬರ ಮಾತುಗಳು ಎಲ್ಲರ ಹೃದಯ ಗೆದ್ದಿತ್ತು. ಆದರೆ ಅದೇ ಸಮಾರಂಭದಲ್ಲಿ ಎಲಿಫೆಂಟ್ ವಿಸ್ಪರ್ಸ್‌ಗೆ ಪ್ರಶಸ್ತಿ ಗೆದ್ದ ಗುನೀತ್ ಮೊಂಗಾ ಅವರ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಬಳಿಕ ನಿರ್ಮಾಪಕಿ ಮೊಂಗಾ ಆಸ್ಪತ್ರೆ ದಾಖಲಾಗಿದ್ರು ಎಂದು ಕೀರವಾಣಿ ಬಹಿರಂಗ ಪಡಿಸಿದರು. 

'ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ; ವಿಡಿಯೋ ವೈರಲ್

ಇತ್ತೀಚೆಗಷ್ಟೆ ಗಲಟ್ಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಂಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದ ನಂತರ ಗುನೀತ್ ಮೋಂಗಾ ಅವರು ಹೇಗೆ ಆಸ್ಪತ್ರೆಗೆ ದಾಖಲಾಗಿದ್ದರು ಎಂಬುದನ್ನು ಬಹಿರಂಗ ಪಡಿಸಿದರು. ಉಸಿರಾಟ ತೊಂದರೆಯಿಂದ ಮೊಂಗಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಕೀರವಾಣಿ ಬಹಿರಂಗ ಪಡಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಗ್ಗೆ ಮಾತನಾಡಿದ ಕೀರವಾಣಿ, 'ವಿಶ್ವವೇ ನನ್ನ ಪ್ರಾರ್ಥನೆ ಕೇಳುತ್ತಿತ್ತು. ಕೊನೆಗೂ ಅದು ಸಂಭವಿಸಿತು. ಆದರೆ ಇದು ದೊಡ್ಡ ಉತ್ಸಹ ಉಂಟುಮಾಡಿಲ್ಲ. ಆದರೆ ರೋಮಾಂಚನಕಾರಿಯಾಗಿತ್ತು. ಹಾಗಂತ ಪ್ರಶಸ್ತಿ ವಿಜೇತೆ ಗುನೀತ್ ಮೊಂಗಾ ಅವರಷ್ಟು ಉಸಿರುಗಟ್ಟುವಷ್ಟು ಮಟ್ಟಕ್ಕೆ ಅಲ್ಲ. ಅವರಿಗೆ ಮಾತನಾಡಲು ಸಮಯ ನೀಡಿಲ್ಲ ಹಾಗಾಗಿ ಉಸಿರಾಟ ಸಮಸ್ಯೆಯಾಗಿತ್ತು ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು' ಎಂದು ಹೇಳಿದ್ದಾರೆ.  

ಆಸ್ಕರ್‌ ಹಿಡಿದು ಪೋಸ್‌ ಕೊಟ್ಟ The Elephant Whisperers ಬೊಮ್ಮನ್‌, ಬೆಳ್ಳಿ: ಕಾರ್ತಿಕಿಗೆ ಭೇಷ್‌ ಎಂದ ನೆಟ್ಟಿಗರು

 ಗುನೀತ್ ಮೊಂಗಾ ಪ್ರತಿಕ್ರಿಯೆ 

ಪ್ರಶಸ್ತಿ ಗೆದ್ದ ಬಳಿಕ ವೇದಿಕೆ ಮೇಲೆ ಮಾತನಾಲು ಅವಕಾಶ ನೀಡದೆ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. 'ನನ್ನ ಮುಖದಲ್ಲಿ ಆಘಾತವಿತ್ತು. ಇದು ಭಾರತದ ಮೊದಲ ನಿರ್ಮಾಣ ಸಂಸ್ಥೆ ಆಸ್ಕರ್ ಗೆದ್ದಿದ್ದು ಎಂದು ನಾನು ಹೇಳಲು ಬಯಸುತ್ತೇನೆ. ಇದು ತುಂಬಾ ದೊಡ್ಡ ವಿಷಯವಾಗಿದೆ. ಇಷ್ಟು ದೂರ ಬಂದರೂ ಕೇಳಿಸಿಕೊಳ್ಳಲಾಗಲಿಲ್ಲ ಎಂದು ನನ್ನ ಹೃದಯ ಬಡಿತ ಹೆಚ್ಚಾಯಿತು. ಪಾಶ್ಚಾತ್ಯ ಮಾಧ್ಯಮಗಳು ನನಗೆ ಮಾತನಾಡಲು ಬರಲಿಲ್ಲ ಎಂದು ಹೇಳುತ್ತಿವೆ. ನನಗೆ ಭಾಷಣ ಮಾಡುವ ಅವಕಾಶ ಕೊಟ್ಟಿಲ್ಲ ಎಂದು ಜನ ಬೇಸರಗೊಂಡಿದ್ದರು. ಆನ್‌ಲೈನ್‌ನಲ್ಲಿ ವೀಡಿಯೊಗಳು ಮತ್ತು ಟ್ವೀಟ್‌ಗಳ ಮೂಲಕ ನನಗೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿವೆ. ಇದು ಭಾರತ ಕ್ಷಣವಾಗಿತ್ತು ಆದರೆ ನನ್ನನ್ನು ದೂರಮಾಡಿದರು' ಎಂದು ಹೇಳಿದ್ದರು. 

click me!