ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ನಡುವಿನ ಡಿವೋರ್ಸ್ ವದಂತಿಗೆ ಸದ್ಯ ಬ್ರೇಕ್ ಬಿದ್ದಿದೆ. ಆದರೆ ಇವರಿಬ್ಬರ ಜಗಳದ ವಿಷಯವೊಂದು ಇದೀಗ ವೈರಲ್ ಆಗ್ತಿದೆ.
ವಿಶ್ವಸುಂದರಿ ಐಶ್ವರ್ಯಾ ರೈ ಹಾಗೂ ಬಚ್ಚನ್ ಖಾನ್‌ದಾನ್‌ನ ಕುಡಿ ಅಭಿಷೇಕ್ ಬಚ್ಚನ್ ನಡುವೆ ಪ್ರೇಮವಾಗಿ ದಶಕ ಕಳೆದಿದೆ. 'ಗುರು' ಸಿನಿಮಾದಲ್ಲಿ ಇಬ್ಬರೂ ಜೊತೆಗೇ ನಟಿಸುವಾಗ ಮೂಡಿದ ಪ್ರೇಮ ಈ ದಂಪತಿಯನ್ನು ಇಷ್ಟು ವರ್ಷ ಕಾಲ ಜೊತೆಯಾಗಿರಿಸಿದೆ. ಜೊತೆಗೆ ಈ ದಂಪತಿಗೆ ಮುದ್ದಾದ ಮಗಳೂ ಇದ್ದು, ಅವಳೀಗ ಹದಿಹರೆಯ ಆಸುಪಾಸಿನಲ್ಲಿದ್ದಾಳೆ. ಈ ನಡುವೆ ಈ ದಂಪತಿ ನಡುವೆ ಎಲ್ಲವೂ ಸರಿಯಿಲ್ಲ ಅನ್ನುವ ವದಂತಿ ಇತ್ತೀಚೆಗೆ ಹಬ್ಬಿತ್ತು. ಜೊತೆಗೆ ಐಶ್ ಹಾಗೂ ಅಭಿ ಡಿವೋರ್ಸ್ ಮಾಡುತ್ತಿದ್ದಾರೆ ಎಂಬುದನ್ನು ಅನೇಕ ಮಾಧ್ಯಮಗಳು ನಿಜವೆಂದೇ ಬಣ್ಣಿಸಿದವು. ಆದರೆ ತಮ್ಮ ನಡುವಿನ ಬಂಧ ಕಳಚಿಲ್ಲ ಅನ್ನೋದನ್ನು ಐಶ್ವರ್ಯಾ ಇತ್ತೀಚೆಗೆ ಕನ್ಫರ್ಮ್ ಮಾಡಿದ್ದಾರೆ. ಅಭಿಷೇಕ್ ಜನ್ಮದಿನದಂದು ಅವರಿಗೆ ನಲ್ಮೆಯಿಂದ ವಿಶ್ ಮಾಡೋ ಮೂಲಕ ಪ್ಯಾಚ್ ಅಪ್ ಮಾಡೋ ಪ್ರಯತ್ನ ಮಾಡಿದ್ದಾರೆ. ಈ ನಡುವೆ ಐಶ್ ಹಾಗೂ ಅಭಿ ನಡುವಿನ ಜಗಳ ಕುರಿತಾದ ವೀಡಿಯೋವೊಂದು ವೈರಲ್ ಆಗುತ್ತಿದೆ.
ದಾಂಪತ್ಯ ಜೀವನ (Married Life) ಎಂದಮೇಲೆ ಅಲ್ಲಿ ಪ್ರೀತಿಯೂ (Love) ಇರಬೇಕು, ಜಗಳವೂ ಇರಬೇಕು. ಇವೆರಡರ ಸಮ್ಮಿಲನ ಸಮತೋಲನದಲ್ಲಿ ಇದ್ದಾಗಲೇ ಆ ದಾಂಪತ್ಯ ಚಂದ ಎನಿಸುತ್ತದೆ. ಆದರೆ ಈ ಸೆಲೆಬ್ರಿಟಿ ದಂಪತಿ ಯಾವ ವಿಷಯಕ್ಕೆ ಕಿತ್ತಾಡಬಹುದು ಎಂಬ ಸಾಮಾನ್ಯ ಕುತೂಹಲ ಎಂದಾದರೂ ಒಮ್ಮೆ ನಿಮ್ಮ ಮನಸಲ್ಲೂ ಮೂಡಿದ್ದಿರಬಹುದು. ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಛನ್ ಹಾಗೂ ಅಭಿಷೇಕ್ ಬಚ್ಛನ್ ಎಂದಾದರೂ ಕಿತ್ತಾಡಿಕೊಂಡಿರಬಹುದೇ ಎಂಬ ಪ್ರಶ್ನೆ ಎಂದಾದರೂ ನಿಮ್ಮ ತಲೆಯಲ್ಲಿ ಕೊರೆದಿದ್ದರೆ ಇದಕ್ಕೆ ಉತ್ತರವನ್ನು ಸಂದರ್ಶನವೊಂದರಲ್ಲಿ ಸ್ವತಃ ಐಶ್ವರ್ಯಾ ಹಾಗೂ ಅಭಿಷೇಕ್ ದಂಪತಿ ನೀಡಿದ್ದಾರೆ.
ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಜೊತೆ ಜಪಾನ್ನಲ್ಲಿ ಆಮೀರ್ ಪುತ್ರ ಜುನೈದ್! ಏನಿದು ಹೊಸ ವಿಷ್ಯ?
ಸಂದರ್ಶನವೊಂದರಲ್ಲಿ ನಟಿ ಐಶ್ವರ್ಯಾ ರೈ ಬಚ್ಛನ್ ಹಾಗೂ ಅಭಿಷೇಕ್ ಬಚ್ಛನ್ ಈ ವಿಷಯವಾಗಿ ಮಾತನಾಡಿದ್ದಾರೆ. ಏಪ್ರಿಲ್ 2007ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಸ್ವಲ್ಪ ಸಮಯಗಳ ಕಾಲ ಈ ಜೋಡಿ ಡೇಟಿಂಗ್ (Dating) ನಡೆಸಿತ್ತು. ಈ ದಂಪತಿಗೆ 2011ರಲ್ಲಿ ಆರಾಧ್ಯ ಬಚ್ಛನ್ ಎಂಬ ಮಗಳು ಜನಿಸಿದ್ದಾಳೆ. ಐಶ್ವರ್ಯಾ ಹಾಗೂ ಅಭಿಷೇಕ್ ದಂಪತಿ ಧೂಮ್ 2, ಗುರು ಹಾಗೂ ರಾವನ್ ಸಿನಿಮಾಗಳ ಮೂಲಕ ಒಟ್ಟಾಗಿ ತೆರೆ ಕೂಡ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ನಿರೂಪಕರು ನೀವಿಬ್ಬರೂ ಪ್ರತಿನಿತ್ಯ ಜಗಳ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಟಿ ಐಶ್ವರ್ಯಾ ರೈ, ಖಂಡಿತವಾಗಿ ನಾವು ಪ್ರತಿದಿನ ಜಗಳವಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಅಭಿಷೇಕ್ ಬಚ್ಛನ್ ಇವು ಜಗಳಗಳು ಅಲ್ಲ ಬದಲಾಗಿ ಕೆಲವು ಭಿನ್ನಾಭಿಪ್ರಾಯಗಳು (Difference of Opinions) ಮಾತ್ರ. ಅಲ್ಲದೇ ಅದ್ಯಾವುದೂ ಗಂಭೀರ ವಿಷಯಗಳಲ್ಲ. ನಾವು ಆರೋಗ್ಯಕರವಾಗಿ ಜಗಳ (Healthy Clash) ಮಾಡಿಕೊಳ್ಳುತ್ತೇವೆ. ಅದು ಇಲ್ಲ ಎಂದಿದ್ದರೆ ನನಗೆ ಬೋರಾಗುತ್ತಿತ್ತು ಎಂದು ಸ್ಪಷ್ಟನೆ ನೀಡಿದ್ದರು .
ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?
ಅಲ್ಲದೇ ಇಬ್ಬರ ನಡುವೆ ಜಗಳವಾದಾಗ (clash) ಮೊದಲು ಕ್ಷಮೆಯಾಚಿಸುವುದು ತಾನೇ ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ. ಮಹಿಳೆಯರು ಎಂದಿಗೂ ಸೋಲೊಪ್ಪಿಕೊಂಡು ಬರುವುದಿಲ್ಲ. ಆದರೆ ನಮ್ಮಿಬ್ಬರ ನಡುವೆ ಒಂದು ಒಪ್ಪಂದವಿದೆ (agreement) . ನಾವು ಜಗಳವನ್ನು ಬಗೆಹರಿಸಿಕೊಳ್ಳದೇ ಮಲಗುವುದಿಲ್ಲ. ಹೀಗಾಗಿ ಎಷ್ಟೋ ಬಾರಿ ನಾನು ಕ್ಷಮಿಸಿ ಎಂದು ಹೇಳಿದ್ದೇನೆ. ನಾನು ಮಲಗಬೇಕು ಎಂಬ ಒಂದೇ ಕಾರಣಕ್ಕೆ ಕ್ಷಮೆ (sorry) ಕೇಳಿದ್ದೇನೆ ಎಂದು ನಟ ಅಭಿಷೇಕ್ ಬಚ್ಛನ್ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಮಹಿಳೆಯರಿಗೆ (women) ಎಂದಿಗೂ ತಮ್ಮದು ತಪ್ಪಿದೆ ಎಂದು ಎನಿಸುವುದೇ ಇಲ್ಲ. ನಿಮ್ಮ ಬಳಿ ನೀವು ಸರಿಯೆಂದು ಸಾಬೀತುಪಡಿಸಲು ಎಷ್ಟೇ ಬಲವಾದ ಸಾಕ್ಷ್ಯಗಳಿದ್ದರೂ ಸಹ ಪತ್ನಿಯ ಎದುರು ಆ ಸಾಕ್ಷ್ಯಗಳು ನಿಷ್ಪ್ರಯೋಜಕ ಎಂದೇ ಸಾಬೀತಾಗುತ್ತದೆ. ಹೀಗಾಗಿ ನಾವು ವಾದ ಮಾಡುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ.
ಈ ಜೋಡಿ ದಾಂಪತ್ಯ ಎಲ್ಲೋ ಹಳಿತಪ್ಪಿದ ಸೂಚನೆ ಸಿಕ್ಕ ಮೇಲೆ ಈ ಹಳೇ ವೀಡಿಯೋ ಈಗ ವೈರಲ್ (viral) ಆಗುತ್ತಿದೆ. ಆದರೆ ಜೋಡಿ ಸಪರೇಟ್ ಆಗದಿರಲಿ. ಇವರ ಜೀವನ ಚೆನ್ನಾಗಿರಲಿ ಅಂತ ಒಳ್ಳೆ ಮನಸ್ಸಿನ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.