ವಿಜಯ್ ದೇವರಕೊಂಡ ಕೂಲ್ ಮ್ಯಾನ್, ರೌಡಿ ಅಲ್ಲ; ವೈರಲ್ ಆಯ್ತು ಮೃಣಾಲ್ ಠಾಕೂರ್ ಮಾತು!

Published : May 13, 2024, 12:42 PM ISTUpdated : May 13, 2024, 12:47 PM IST
ವಿಜಯ್ ದೇವರಕೊಂಡ ಕೂಲ್ ಮ್ಯಾನ್, ರೌಡಿ ಅಲ್ಲ; ವೈರಲ್ ಆಯ್ತು ಮೃಣಾಲ್ ಠಾಕೂರ್ ಮಾತು!

ಸಾರಾಂಶ

 'ನನಗೆ ಅವರೊಬ್ಬರು ರೌಡಿ ಎಂದು ಅನ್ನಿಸುವುದೇ ಇಲ್ಲ. ಅದೊಂದು ಕ್ಯಾರೆಕ್ಟರ್ ಅಷ್ಟೇ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಅವರು ರೌಡಿ ಪಾತ್ರ ಮಾಡಿದ್ದಾರೆ.

ನಟಿ ಮೃಣಾಲ್ ಠಾಕೂರ್ ಅವರು ತೆಲುಗು ಸ್ಟಾರ ನಟ ವಿಜಯ್ ದೇವರಕೊಂಡ (Vijay Deverakonda) ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಮೃಣಾಲ್ (Mrunal Thakur) 'ನನಗೆ ಅವರೊಬ್ಬರು ರೌಡಿ ಎಂದು ಅನ್ನಿಸುವುದೇ ಇಲ್ಲ. ಅದೊಂದು ಕ್ಯಾರೆಕ್ಟರ್ ಅಷ್ಟೇ. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಅವರು ರೌಡಿ ಪಾತ್ರ ಮಾಡಿದ್ದಾರೆ. ಅದನ್ನು ರಿಯಲ್ ಎಂಬಂಷ್ಟು ನೈಜವಾಗಿ ಅಭಿನಯಿಸಿದ್ದಾರೆ ಅಷ್ಟೇ. ವಿಜಯ್ ದೇವರಕೊಂಡ ಅವರು ರಿಯಲ್ ಲೈಫ್‌ನಲ್ಲಿ ತುಂಬಾ ಜಂಟಲ್‌ಮ್ಯಾನ್. 

ನಿಜವಾಗಿ ಹೇಳಬೇಕೆಂದರೆ, ಅವರು ರೌಡಿ ಎಂಬುದು ಹಾಗಿರಲಿ, ಅವರು ನಾರ್ಮಲ್ ಪರ್ಸನ್ ಎನ್ನುವುದಕ್ಕಿಂತಲೂ ಹೆಚ್ಚು ಫ್ಯಾಮಿಲಿ ಪರ್ಸನ್ ಎನ್ನಬಹುದು. ಅವರು ಅಮ್ಮನ ಜತೆ, ತಮ್ಮನ ಜತೆ ಹಾಯಾಗಿ ಕಾಲ ಕಳೆಯುತ್ತಾರೆ. ಅವರನ್ನು ನಾನು ಫ್ಯಾಮಿಲಿ ಮ್ಯಾನ್ ಎಂದೇ ಕರೆಯಲು ಇಷ್ಟಪಡುತ್ತೇನೆ. ವಿಜಯ್ ದೇವರಕೊಂಡ ಅವರು ತುಂಬಾ ಕೋಲ್ ಪರ್ಸನ್, ಯಾವಾಗಲೂ ಕಾಮ್ ಆಗಿಯೇ ಇರುತ್ತಾರೆ. ಶೂಟಿಂಗ್ ಸ್ಥಳದಲ್ಲಿ ಎಲ್ಲರೊಂದಿಗೂ ನಗುನಗುತ್ತ ಮಾತನಾಡುತ್ತ ಕಾಲಕಳೆಯುತ್ತಾರೆ. ವಿಜಯ್ ಈಸ್ ಎ ಕೂಲ್ ಗಾಯ್' ಎಂದಿದ್ದಾರೆ ಮೃಣಾಲ್ ಠಾಕೂರ್.

ನಟ ಚೇತನ ಚಂದ್ರ ಮೇಲೆ ಕಗ್ಗಲಿಪುರದಲ್ಲಿ ಭಾರೀ ಹಲ್ಲೆ; ರಕ್ತಸಿಕ್ತ ಫೇಸ್ ವೀಡಿಯೋ ವೈರಲ್!

ಅಂದಹಾಗೆ, ನಟಿ ಮೃಣಾಲ್ ಠಾಕೂರ್ ಅವರು ತಮ್ಮ 'ಕಲ್ಯಾಣಿ ವಚ್ಚಾ ವಚ್ಚಾ' ಸಿನಿಮಾದ ಪಾತ್ರದ ಬಗ್ಗೆ ಕೂಡ ತುಂಬಾ ಎಕ್ಸೈಟ್ ಆಗಿ ಮಾತನಾಡಿದ್ದಾರೆ. 'ನನಗೆ ತೆಲುಗು ಸಿನಿಮಾಗಳೆಂದರೆ ಅಚ್ಚುಮೆಚ್ಚು. ಬಾಲಿವುಡ್ ಸಿನಿಮಾಗಳು ಕೂಡ ಇಷ್ಟ. ಸೌತ್ ಸಿನಿಮಾಗಳಲ್ಲಿ, ಅದರಲ್ಲೂ ನಾನು ನಟಿಸಿರುವ ತೆಲುಗು ಸಿನಿಮಾಗಳಲ್ಲಿ ಸಂಬಂಧಗಳ ಬಗ್ಗೆ, ಸಾಮಾಜಿಕ ಜವಾಬ್ದಾರಿ ಬಗ್ಗೆ ತುಂಬಾ ಚೆನ್ನಾಗಿ ಕಥೆಯಲ್ಲಿ ನಿರೂಪಿಸಿದ್ದಾರೆ. ನನಗದು ಇಷ್ಟವಾಗುತ್ತದೆ. ಏಕೆಂದರೆ, ನಮ್ಮ ಬದುಕು ಜನರ ಸುತ್ತಲೂ ಜನರಿಗಾಗಿಯೇ ನಡೆಯುತ್ತಾ ಇರುತ್ತದೆ. 

ಕಿಯಾರಾ ಹಾಡಿ ಹೊಗಳಿದ ಮೃಣಾಲ್ ಠಾಕೂರ್, ಸೂರ್ಯ ಪಶ್ಚಿಮದಲ್ಲಿ ಹುಟ್ಟಿದ್ನಾ ಕೇಳ್ಬೇಡಿ!

ಸೀತಾ ರಾಮಂ, ಹಾಯ್ ನನ್ನಾ, ದಿ ಫ್ಯಾಮಿಲಿ ಸ್ಟಾರ್, ಜೆರ್ಸಿ, ಕುಂಕಮ ಭಾಗ್ಯ,, ಲಸ್ಟ್ ಸ್ಟೋರೀಸ್, ಲವ್ ಸೋನಿಯಾ, ಸೂಪರ್ 30, ಗುಮ್ರಾಹ್, ಪಿಪ್ಪಾ ಹೀಗೆ ಲಿಸ್ಟ್‌ನಲ್ಲಿ ಸಾಕಷ್ಟಿವೆ. ತೆಲುಗು ಸಿನಿಮಾಗಳಿರಲಿ ಅಥವಾ ಹಿಂದಿ ಚಿತ್ರಗಳಿರಲಿ, ಅವುಗಳಲ್ಲಿ ನಟಿ ಮೃಣಾಲ್ ಠಾಕೂರ್ ಪಾತ್ರಗಳು ಮತ್ತೆ ಮತ್ತೆ ಸಿನಿಮಾ ನೋಡಬೇಕು ಎನ್ನುವಂತೆ ಮಾಡುತ್ತವೆ ಎನ್ನಬಹುದು. 

ವಿಷ್ಣುವರ್ಧನ್‌ ಕಾರುಗಳು ಈಗೆಲ್ಲಿವೆ? ಯಾರು ಬೇಕಾದ್ರೂ ನೋಡ್ಬಹುದಂತೆ ಹೌದಾ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?