ಹಿಂದಿ ಹಾಡುಗಳು ಹೆಚ್ಚು ರೊಮ್ಯಾಂಟಿಕ್, ಸೌತ್‌ ಸಾಂಗ್ಸ್ ಮಸಾಲ ಜಾಸ್ತಿ; ನಟಿ ರಶ್ಮಿಕಾ ಮಂದಣ್ಣ

Published : Dec 28, 2022, 11:16 AM ISTUpdated : Dec 28, 2022, 11:19 AM IST
ಹಿಂದಿ ಹಾಡುಗಳು ಹೆಚ್ಚು ರೊಮ್ಯಾಂಟಿಕ್, ಸೌತ್‌ ಸಾಂಗ್ಸ್ ಮಸಾಲ ಜಾಸ್ತಿ; ನಟಿ ರಶ್ಮಿಕಾ ಮಂದಣ್ಣ

ಸಾರಾಂಶ

ಹಿಂದಿ ಹಾಡುಗಳು ಹೆಚ್ಚು ರೊಮ್ಯಾಂಟಿಕ್ ಆಗಿವೆ, ಸೌತ್ ಸಾಂಗ್ಸ್ ಮಸಾಲ ಜಾಸ್ತಿ ಎಂದು ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡು ಕಡೆ ಸಿನಿಮಾಗಳನ್ನು ಮಾಡುತ್ತಿರುವ ರಶ್ಮಿಕಾ ಸದ್ಯ ಹಿಂದಿ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ರಶ್ಮಿಕಾ ಮೊದಲು ಸಹಿ ಮಾಡಿದ ಬಾಲಿವುಡ್ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಮಿಷನ್ ಮಜ್ನು ಸಿನಿಮಾ ಮೂಲಕ  ಪುಷ್ಪ ನಟಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಸಿನಿಮಾಗೂ ಮೊದಲು ರಶ್ಮಿಕಾ ನಟನೆಯ ಮತ್ತೊಂದು ಸಿನಿಮಾ ಗುಡ್‌ಬೈ ರಿಲೀಸ್ ಆಗಿದ್ದು ಆ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಆದರೀಗ ಮಿಷನ್ ಮಜ್ನು ಸಿನಿಮಾದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ರಶ್ಮಿಕಾ. 

ಮಿಷನ್ ಮಜ್ನು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರ ನಾಯಕನಾಗಿ ನಟಿಸಿದ್ದಾರೆ. ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಮಿಷನ್ ಮಜ್ನು ಸಿನಿಮಾದ ಹಾಡು ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೊಮ್ಯಾಂಟಿಕ್ ಹಾಡು ಇದಾಗಿದ್ದು ರಶ್ಮಿಕಾ ಮತ್ತು ಸಿದ್ಧಾರ್ಥ್ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಮೊದಲ ಬಾರಿಗೆ ರಶ್ಮಿಕಾ ಸಿದ್ಧಾರ್ಥ್ ಜೊತೆ ನಟಿಸಿದ್ದು ಫ್ರೆಶ್ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಇತ್ತೀಚಿಗಷೆ ನಡೆದ ಈವೆಂಟ್ ನಲ್ಲಿ ಸೌತ್ ಮತ್ತು ಬಾಲಿವುಡ್ ನಡುವಿನ ವ್ಯತ್ಯಾಸದ ಬಗ್ಗೆ ರಶ್ಮಿಕಾ ಮಾತನಾಡಿದರು. ಆಗ ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಹಾಡು ಹೆಚ್ಚಾಗಿದೆ ಎಂದು ಹೇಳಿದರು. 'ಬಾಲಿವುಡ್ ಹಾಡುಗಳು ಹೆಚ್ಚು ರೊಮ್ಯಾಂಟಿಕ್ ಆಗಿ ಇರುತ್ತವೆ. ಸೌತ್‌ನಲ್ಲಿ ಹೆಚ್ಚು ಮಾಸ್, ಮಸಾಲ ಹಾಗೂ ಐಟಂ ಹಾಡುಗಳು ಇರುತ್ತವೆ' ಎಂದು ಹೇಳಿದರು. ಮೊದಲ ರೊಮ್ಯಾಂಟಿಕ್ ಹಾಡು ರಿಲೀಸ್ ಆಗಿರುವ ಖುಷಿಯಲ್ಲಿರುವ ರಶ್ಮಿಕಾ ಸಿನಿಮಾಗಾಗಿ ಕಾಯುತ್ತಿದ್ದಾರೆ. 

ಬೇರೆ ಭಾಷೆ ಕಲಿಯೋದು ಕಷ್ಟ, ಫ್ಯಾನ್ಸ್‌ ಅರ್ಥ ಮಾಡಿಕೊಳ್ಳಬೇಕು; ರಶ್ಮಿಕಾ ಮಂದಣ್ಣ ಪರ ನಿಂತ ಆಶಿಕಾ

ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ರಶ್ಮಿಕಾ ಮೊದಲ ಹಿಂದಿ ಸಿನಿಮಾ 'ಗುಡ್‌ಬೈ' ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಬಿಗ್ ಬಿ ಅಮಿತಾಬ್ ಜೊತೆ ನಟಿಸಿದ್ದರು. ಅಮಿತಾಬ್ ಮಗಳಾಗಿ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತು. ಇದೀಗ ಮಿಷನ್ ಮಜ್ನು ಸಿನಿಮಾ ಮೂಲಕ ಮತ್ತೆ ಹಿಂದಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮುಂದಿನ ವರ್ಷಾರಂಭದಲ್ಲಿ ಮಿಷನ್ ಮಜ್ನು ರಿಲೀಸ್ ಆಗುತ್ತಿದೆ.

'ನಿಮ್ಮೊಂದಿಗೆ ಸಮಯ ಕಳೆಯುವುದು ತುಂಬಾ ಖುಷಿ' ಎಂದು ಹಾಟ್ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ರಶ್ಮಿಕಾ ಸಿನಿಮಾ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಸೌತ್‌ನಲ್ಲಿ ರಶ್ಮಿಕಾ ಬಹುನಿರೀಕ್ಷೆಯ ಪುಷ್ಪ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಪ್ರಾರಂಭವಾಗಿದೆ. ಸೌತ್ ಮತ್ತು ನಾರ್ತ್ ಎರಡು ಕಡೆ ರಶ್ಮಿಕಾ ಬ್ಯುಸಿಯಾಗಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!