
ಮಿಲ್ಕಿ ಬ್ಯೂಟಿ ಅಂತಲೇ ಪ್ರಸಿದ್ಧಿ ಪಡೆದಿರೋ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ತಮನ್ನಾ ಭಾಟಿಯಾ. ತೆಲುಗು ಸಿನಿಮಾದಲ್ಲಿ ಇವರಿದ್ದಾರೆ ಅಂದರೆ ಜನ ಇವ್ರನ್ನ ನೋಡೋದಕ್ಕೆ ಅಂತಲೇ ಥಿಯೇಟರ್‌ಗೆ ಬರೋದೂ ಇದೆ. ತಮಿಳು ಸಿನಿಮಾಗಳಲ್ಲೂ ಈಕೆಗೆ ಬಹಳ ಬೇಡಿಕೆ ಇದೆ. ಅಷ್ಟೇ ಯಾಕೆ ನಮ್ ನಿಖಿಲ್ ಕುಮಾರಸ್ವಾಮಿ ನಟಿಸಿರೋ ಜಾಗ್ವಾರ್ ಸಿನಿಮಾದಲ್ಲಿ ಒಂದು ಹಾಡಲ್ಲಿ ಮಿಂಚಿನ ಹಾಗೆ ಬಂದು ಸೊಂಟ ಬಳುಕಿಸಿ ಹೋಗಿದ್ದಾರೆ ಈ ಬ್ಯೂಟಿ. ತಮನ್ನಾ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ತಮನ್ನಾ ಒಬ್ಬ ಬ್ಯುಸಿನೆಸ್‌ಮ್ಯಾನ್ ಕೈ ಹಿಡಿಯುತ್ತಿದ್ದಾರೆ ಅಂತ ಚರ್ಚೆ ಮಾಡಿದರು. ಹುಡುಗರಿಗೆ ತಳಮಳ ಶುರುವಾಯ್ತು. ಇಂಥಾ ಟೈಮಲ್ಲೇ ತಮನ್ನಾ ಇದೆಲ್ಲ ಸುಳ್ಳು, ಮದುವೆ ಗಿದುವೆ ಎಲ್ಲ ಸದ್ಯಕ್ಕಿಲ್ಲ ಅಂದಮೇಲೆ ನಿರಾಳರಾಗಿದ್ದಾರೆ. ಇಷ್ಟೆಲ್ಲ ಹವಾ ಸೃಷ್ಟಿಸಿರೋ ತಮನ್ನಾ ತನ್ನ ಈ ಬ್ಯೂಟಿಫುಲ್ ಸ್ಕಿನ್‌ನ ರಹಸ್ಯ ಏನು ಅಂತ ಹೇಳಿದ್ದಾರೆ. ಅದನ್ನು ನೀವೂ ಟ್ರೈ ಮಾಡಬಹುದು. ಮಿಲ್ಕಿ ಬ್ಯೂಟಿ ಲೆವೆಲ್‌ನ ಸ್ಕಿನ್ ಬರದಿದ್ರೂ ಈಗಿರೋದಕ್ಕಿಂತ ಸ್ಕಿನ್ ಉತ್ತಮವಾಗಬಹುದು.
ಬಹಳ ಸುಲಭದ ಸ್ಕ್ರಬ್ (Scrub)
ತಮನ್ನಾ ಶೂಟಿಂಗ್ ಮುಗಿಸಿ ಮನೆಗೆ ಬಂದ ಕೂಡಲೇ ಸಣ್ಣ ಕಳವಳ ಆಗ್ತಿತ್ತಂತೆ. ಮುಖಕ್ಕೆ ಅಷ್ಟೆಲ್ಲ ಕೆಮಿಕಲ್ ಇರೋ ಮೇಕಪ್ ಹಚ್ಕೊಂಡು ಇಡೀ ದಿನ ಇದ್ದೆ. ಪ್ರತೀದಿನ ಹೀಗೇ ರಾಸಾಯನಿಕಗಳಿರೋ ಮೇಕಪ್ ಹಾಕ್ಕೊಂಡ್ರೆ ತನ್ನ ಸ್ಕಿನ್ ಬರು ಬರುತ್ತಾ ಹೇಗಾಗಬಹುದು ಅಂತ ಅವರಿಗೆ ಆತಂಕ ಆಗುತ್ತೆ. ಅವರ ಆತಂಕ ನಿವಾರಿಸೋದು ಬಹಳ ಸಿಂಪಲ್ ಆಗಿರೋ ಸ್ಕ್ರಬ್. ಕಾಫಿ ಪೌಡರ್ ಒಂದು ಸ್ಪೂನ್, ಒಂದು ಸ್ಪೂನ್ ಚಂದನ, ಇನ್ನೊಂದು ಸ್ಪೂನ್ ರಾಸಾಯನಿಕ ಬೆರೆಸದ ಶುದ್ಧ ಜೇನುತುಪ್ಪ, ಈ ಮೂರನ್ನೂ ಒಂದೊಂದು ಸ್ಪೂನ್ ತಗೊಂಡು ಬೌಲ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಮುಖಕ್ಕೆ ಹಚ್ಕೊಳ್ಳೋದು, ಮೃದುವಾಗಿ ಮಸಾಜ್ ಮಾಡೋದು. ಹತ್ತು ನಿಮಿಷ ಬಿಟ್ಟು ತೆಗೆಯೋದು. ಅರೆ, ಇದು ನನ್ನದೇ ಸ್ಕಿನ್ನಾ ಅನ್ನೋ ಲೆವೆಲ್‌ಗೆ ಚರ್ಮದ ಹೊಳಪು ಹೆಚ್ಚಾಗುತ್ತೆ. ಡ್ರೈ ಸ್ಕಿನ್ ಸಮಸ್ಯೆಗೆ ಇದು ಬೆಸ್ಟ್ ಪರಿಹಾರ ಅಂತಾರೆ ತಮನ್ನಾ. ಚರ್ಮದಲ್ಲಿ ತೇವಾಂಶ ಹೆಚ್ಚಿ ನೋಡೋದಕ್ಕೆ ಸುಂದರವಾಗಿ ಕಾಣೋದು ಇದರಿಂದ ಸಾಧ್ಯವಂತೆ. ಇದರಿಂದ ಡ್ರೈ ಸ್ಕಿನ್ ಸಹ ಹೊರಟು ಹೋಗತ್ತೆ ಅಂತಾರೆ ತಮನ್ನಾ.
ಬೇರೆ ಚಿತ್ರರಂಗವನ್ನು ತೆಗಳಬೇಡಿ, ಬಾಲಿವುಡ್‌ಅನ್ನು ಗೌರವಿಸಿ; ಕನ್ನಡ ಅಭಿಮಾನಿಗಳಿಗೆ ಯಶ್ ಮನವಿ
ಸಿಂಪಲ್ ಫೇಸ್ ಮಾಸ್ಕ್ (Simple Face Mask)
ಮೇಲೆ ಹೇಳಿದ ಹಾಗೆ ಸ್ಕ್ರಬ್ ಮಾಡಿದ ಮೇಲೆ ತಮನ್ನಾ ಮಾಡೋ ಎರಡನೇ ಕೆಲಸ ಸಿಂಪಲ್ ಫೇಸ್ ಮಾಸ್ಕ್ ಬಳಸೋದು. ಕಡ್ಲೆ ಹಿಟ್ಟು, ಮೊಸರು ಮತ್ತು ಸ್ವಲ್ಪ ರೋಸ್ ವಾಟರ್(Rose water) ಹಾಕಿದ್ರೆ ಆಯ್ತು. ಕಡ್ಲೆಹಿಟ್ಟಿಗೆ ರೋಸ್ ವಾಟರ್ ಹಾಕಿದಾಗ ಅದು ಸ್ವಲ್ಪ ನೀರು ನೀರು ಅನಿಸುತ್ತೆ. ಅದಕ್ಕೆ ಫ್ರಿಡ್ಜ್ ನಲ್ಲಿಟ್ಟಿರೋ ಗಟ್ಟಿ ಮೊಸರನ್ನು ಸ್ವಲ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದ್ರೆ ಮುಗೀತು. ಬೆಟ್ಟ ಹತ್ತಿ ಚರ್ಮದ ಬಣ್ಣ ಡಲ್ ಆದಾಗ, ಬಹಳ ಆಯಾಸವಾಗಿ ಚರ್ಮದ ಹೊಳಪು ಕಡಿಮೆ ಆದಾಗಲೆಲ್ಲ ತಮನ್ನಾ ಈ ಟ್ರಿಕ್ ಯೂಸ್ ಮಾಡ್ತಾರೆ. ನನ್ನ ಚರ್ಮ(Skin) ಮತ್ತೆ ಹೂವಿನಂತೆ ಆಗುತ್ತೆ ಅಂತ ಖುಷಿಯಲ್ಲಿ ಹೇಳ್ತಾರೆ.
Tamannaah Bhatia ಮಿಲ್ಕ್ ಬ್ಯೂಟಿಗೆ ಕಂಕಣ ಭಾಗ್ಯ; ಕೈ ಹಿಡಿಯುತ್ತಿರುವ ಬ್ಯುಸಿನೆಸ್ ಮ್ಯಾನ್ ಯಾರು?
ಕೆಲವೇ ನಿಮಿಷಗಳಲ್ಲಿ ಮುಗಿದುಹೋಗೋ ಸಿಂಪಲ್ ಬ್ಯೂಟಿ ಟ್ರಿಕ್ಸ್(Beauty tricks) ಇದು. ರಿಸಲ್ಟ್ ಮಾತ್ರ ನೀವು ಊಹಿಸೋದಕ್ಕೂ ಸಾಧ್ಯವಾಗದಂಥದ್ದು. ಸೋ, ಮನೆಯಲ್ಲೊಮ್ಮೆ ಟ್ರೈ ಮಾಡಿ. ಸುಂದರವಾಗಿರಿ. ಲೈಫು ಚಂದಕ್ಕಿರಲಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.