
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೆಶಕ ವಿಘ್ನೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಅವಳ ಗಂಡು ಮಕ್ಕಳನ್ನು ಸರೋಗೆಸಿ ಮೂಲಕ ಕುಟುಂಬಕ್ಕೆ ಬರ ಮಾಡಿಕೊಂಡರು. ಮದರ್‌ಹುಡ್ ಎಂಜಾಯ್ ಮಾಡುತ್ತಾರೆ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ನಯನತಾರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿತ್ತು ಆದರೆ ಅದೆಲ್ಲಾ ರೂಲ್ಸ್‌ನ ಬ್ರೇಕ್ ಮಾಡಿ ಸಾಲು ಸಾಲು ಸಿನಿಮಾಗಳನ್ನು ಸಹಿ ಮಾಡಿದ್ದಾರೆ. ಜೊತೆ ಮೊದಲ ಸಲ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿರುವುದು ಅಭಿಮಾನಿಗಳಿಗೆ ಶಾಕಿಂಗ್ ವಿಚಾರ...
ಸುಮಾರು 7 ವರ್ಷಗಳ ಕಾಲ ನಯನತಾರಾ ಮತ್ತು ವಿಘ್ನೇಶ್ ಪ್ರೀತಿಸಿ 2022ರ ಜೂನ್ 9ರಂದು ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಕುಟುಂಬಸ್ಥರು ಮತ್ತು ಆಪ್ತರು ಭಾಗಿಯಾಗಿದ್ದ ಮದುವೆಯಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದರು. ಅವರಲ್ಲಿ ಶಾರುಖ್ ಖಾನ್. ರೆಹೆಮಾನ್, ಸೂರ್ಯ ಮತ್ತು ರಜನಿಕಾಂತ್ ಭಾಗಿಯಾಗಿದ್ದು.
ನಯನ ಹೇಳಿಕೆ:
ಟಿವಿ ನಿರೂಪಕಿ ದಿವ್ಯಾದರ್ಶಿನಿ ಜೊತೆ ಮಾತನಾಡಿದ ನಯನತಾರಾ 'ಮಹಿಳೆಯರಿಗೆ ಮಾತ್ರ ಯಾಕೆ ರೂಲ್ಸ್ ಹಾಕುತ್ತಾರೆ? ನನ್ನ ಪ್ರಕಾರ ಇದೆಲ್ಲಾ ತಪ್ಪು. ಮದುವೆ ನಂತರ ಮಹಿಳೆಯರು ಕೆಲಸ ಮಾಡಬೇಕು ಬೇಡ ಅನ್ನೋದೆ ಚರ್ಚೆ ಮಾಡುವ ವಿಚಾರ ಆಗಿರುವುದು ಯಾಕೆ? ಮದುವೆ ಮರು ದಿನವೇ ಗಂಡಸರು ಕೆಲಸಕ್ಕೆ ಹೋಗುತ್ತಾರೆ. ಮದುವೆ ನಮ್ಮ ಜೀವನದಲ್ಲಿ ಇಂಟರ್ವಲ್ ಪಾಯಿಂಟ್ ಅಲ್ಲ. ಮದುವೆ ನಂತರ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಹಾಗೂ ಜೀವನದಲ್ಲಿ ನಾವು ಬೇಗ ಸೆಟಲ್ ಆಗುತ್ತೀವಿ. ಜೀವನದಲ್ಲಿ ಸಾಧನೆ ಮಾಡಬೇಕು ಅನ್ನೋ ಹಂಬಲವಿದ್ದರೆ ಮಾತ್ರ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ. ಇಷ್ಟು ವರ್ಷಗಳಲ್ಲಿ ನಾನು ಭೇಟಿ ಮಾಡಿರುವ ಪ್ರತಿಯೊಂದು ಹೆಣ್ಣಿಗೂ ಇದೇ ಮೈಂಡ್ ಸೆಟ್ ಇರುವುದು' ಎಂದು ನಯನತಾರಾ ಮಾತನಾಡಿದ್ದಾರೆ.
'ಮದುವೆ ನಂತರ ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ. ನನ್ನ ಜೀವನ ಹೊಸ ಅಧ್ಯಾಯಕ್ಕೆ ಅದ್ಭುತ ಆರಂಭ ಸಿಕ್ಕಿದೆ. ನನಗಿರುವ ಸಪೋರ್ಟ್ ಸಿಸ್ಟಮ್‌ನಿಂದ ನನ್ನ ಲೈಫ್ ಇನ್ನೂ ಅದ್ಭುತವಾಗಿದೆ. ಈಗ ಹೆಚ್ಚಿನ ಸಾಧನೆ ಮಾಡಬಹುದು...ಸಿನಿಮಾ ಕಥೆಗಳನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಸಮಯ ನೀಡಬಹುದು. ಮದುವೆ ನಂತರ ಯಾವ ರೂಲ್ಸ್ ಇರ್ಬಾರದು. ಯಾರೂ ರೂಲ್ಸ್ ಮಾಡಬಾರದು. ಮದುವೆ ಅನ್ನೋದೇ ಒಂದು ಬ್ಯೂಟಿಫುಲ್ ಜರ್ನಿ. ಹೀಗಿರುವಾಗ ಇದನ್ನು ಯಾಕೆ ಸೆಲೆಬ್ರೇಟ್ ಮಾಡಬಾರದು?'ಎಂದು ಮದುವೆ ಬಗ್ಗೆ ನಯನತಾರಾ ಹೇಳಿದ್ದಾರೆ.
ನಯನತಾರಾ ತ್ವಚೆ ಮತ್ತು ಕೂದಲ ಆರೈಕೆಗೆ ಈ ಎಣ್ಣೆಯೇ ಬಳಸುವುದಂತೆ!
ನಯನತಾರಾ ಆರೋಗ್ಯ ಸಮಸ್ಯೆ?
ಲೇಡಿ ಸೂಪರ್ ಸ್ಟಾರ್ ನಯನತಾರಾ ದಕ್ಷಿಣ ಭಾರತದ ಚಿತ್ರರಂಗದ ನೆಚ್ಚಿನ ನಟಿಯರಲ್ಲಿ ಒಬ್ಬರು. ಅವರು ಶೀಘ್ರದಲ್ಲೇ ಶಾರುಖ್ ಖಾನ್ ಅವರ ಜವಾನ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ನಟಿ ಫ್ಲಾಲೆಸ್ ಚರ್ಮವನ್ನು ಹೊಂದಿದ್ದಾರೆ. ನಟಿ ವಿಚಿತ್ರ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದರೆ ಆಶ್ಚರ್ಯವಾಗಬಹುದು.
ಮಾಧ್ಯಮ ವರದಿಗಳ ಪ್ರಕಾರ, ಮಾಂಸ ತಿಂದ ನಂತರ ಅವರ ದೇಹದ ಮೇಲೆ ಗುಳ್ಳೆ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಅವರಿಗೆ ಸೌಂದರ್ಯವರ್ಧಕಗಳನ್ನು ಬಳಸುವುದು ಕಷ್ಟ. ನಟಿ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.