ಡಕಾಯತ್​ ಚಿತ್ರದಲ್ಲಿ ಸನ್ನಿ ಡಿಯೋಲ್​ಗೆ ಕಿಸ್​ ಮಾಡಿದಾಗ ಏನಾಯ್ತೆಂದು ತಿಳಿಸಿದ ನಟಿ ಮೀನಾಕ್ಷಿ ಶೇಷಾದ್ರಿ

Published : Jun 08, 2024, 03:56 PM IST
ಡಕಾಯತ್​ ಚಿತ್ರದಲ್ಲಿ ಸನ್ನಿ ಡಿಯೋಲ್​ಗೆ ಕಿಸ್​ ಮಾಡಿದಾಗ ಏನಾಯ್ತೆಂದು ತಿಳಿಸಿದ ನಟಿ ಮೀನಾಕ್ಷಿ ಶೇಷಾದ್ರಿ

ಸಾರಾಂಶ

1987ರಲ್ಲಿ ಬಿಡುಗಡೆಗೊಂಡ ಡಕಾಯತ್​ ಚಿತ್ರದಲ್ಲಿ ನಟ ಸನ್ನಿ ಡಿಯೋಲ್​ ಜೊತೆ ಕಿಸ್​ ಮಾಡಿದ ಅನುಭವ ಬಿಚ್ಚಿಟ್ಟ ನಟಿ ಮೀನಾಕ್ಷಿ ಶೇಷಾದ್ರಿ  

ಮೀನಾಕ್ಷಿ ಶೇಷಾದ್ರಿ ಅವರಿಗೆ ಈಗ 60 ವರ್ಷ ವಯಸ್ಸು. ಆದರೆ 80-90ರ ದಶಕದಲ್ಲಿ ಬಾಲಿವುಡ್​ನಲ್ಲಿ ಅವರು ತಮ್ಮ ಅಭಿನಯದ ಮೂಲಕ ಸಂಚಲನ ಮೂಡಿಸಿದ್ದರು. 'ದಾಮಿನಿ', 'ಘಾಯಲ್', 'ಘರ್ ಹೋ ತೋ ಐಸಾ', 'ಡಕಾಯತ್​, 'ಶಹಶಾನ್' ನಿಂದ 'ಗಂಗಾ ಜಮುನಾ ಸರಸ್ವತಿ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು.  ಆದರೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಅವರು ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿ ಮನೆಯಲ್ಲಿ ನೆಲೆಸಿದರು. ಬಹಳ ವರ್ಷಗಳ ಬಳಿಕ ಅವರು ಈಗ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.   ಜೂಮ್'ಗೆ ನೀಡಿದ ಸಂದರ್ಶನದಲ್ಲಿ ಅವರು ಸನ್ನಿ ಡಿಯೋಲ್ ಜೊತೆಗಿನ ಮೊದಲ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ನಟ ಸನ್ನಿ ಡಿಯೋಲ್ ಜೊತೆಗಿನ ಚುಂಬನದ ದೃಶ್ಯಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಮೀನಾಕ್ಷಿ ಶೇಷಾದ್ರಿ, 'ಸನ್ನಿ ಡಿಯೋಲ್ ಜೊತೆಗಿನ ನನ್ನ ಮೊದಲ ಚಿತ್ರ 1987ರಲ್ಲಿ ಬಿಡುಗಡೆಯಾದ  ಡಕಾಯತ್​ ಚಿತ್ರ. ಅದರಲ್ಲಿ ನಾನು ಡಾರ್ಕ್ ಮೇಕಪ್ ಇರುವ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ನಾವಿಬ್ಬರೂ ದೋಣಿಯಲ್ಲಿ ಚುಂಬನದ ದೃಶ್ಯವನ್ನು ಮಾಡಬೇಕಿತ್ತು. ಇದು ಸಕತ್​  ರೊಮ್ಯಾಂಟಿಕ್ ಸೀನ್​. ಆದರೆ ಅದೇ ಮೊದಲಾಗಿದ್ದರಿಂದ ನಾನು ತುಂಬಾ  ಟೆನ್ಶನ್ ಆಗಿತ್ತು. ಫುಲ್​ ನರ್ವಸ್​ ಕೂಡ ಆಗಿ ಹೋಗಿದ್ದೆ. ಏಕೆಂದರೆ  ನಾನು ಸ್ವಲ್ಪ ಸಂಪ್ರದಾಯವಾದಿ. ನನ್ನ ಚೊಚ್ಚಲ ಚಿತ್ರ ಪಂಟರ್ ಬಾಬುದಲ್ಲಿ ನಾನು ಸಾಕಷ್ಟು ಬೋಲ್ಡ್​ ಆಗಿಯೇ  ಬಟ್ಟೆ ಧರಿಸಿದ್ದೆ. ಆದರೆ ಆಮೇಲೆ ಮುಜುಗರವಾಗಿ ಅದನ್ನು ಮತ್ತೆ ಪುನರಾವರ್ತಿಸಬಾರದು ಎಂದುಕೊಂಡಿದ್ದೆ. ಅದಕ್ಕಾಗಿ ಸನ್ನಿ ಡಿಯೋಲ್​ ಜೊತೆ ಕಿಸ್ಸಿಂಗ್​ ದೃಶ್ಯದಲ್ಲಿ ಕಾಣಿಸಿಕೊಳ್ಳುವುದು ನನಗೆ ತುಂಬಾನೆ ಭಯವಾಗಿತ್ತು ಎಂದಿದ್ದಾರೆ.

ಕಂಗನಾ ನಂಗೆ ಇಷ್ಟ ಅಂತಲ್ಲ, ಆದ್ರೆ ಅವಳ ಕೆನ್ನೆಗೆ ಹೊಡೆದಿದ್ದು ತಪ್ಪು: ಬಾಲಿವುಡ್ ಸೆಲೆಬ್ರಿಟಿಗಳು
  
 ಆ ಚುಂಬನದ ದೃಶ್ಯವು ತುಂಬಾ ಕಷ್ಟವಾಗಿತ್ತು. ತುಂಬಾ ಭಯಪಟ್ಟುಕೊಂಡೇ ಈ ದೃಶ್ಯ ಮಾಡಿದೆ. ಸನ್ನಿ ಡಿಯೋಲ್ ಸಂಭಾವಿತ ವ್ಯಕ್ತಿಯಾಗಿರುವುದರಿಂದ ಆ ದೃಶ್ಯವನ್ನು ಮಾಡಲು ಸಾಧ್ಯವಾಯಿತು. ಅವರು ನಮ್ಮನ್ನು ತುಂಬಾ ನಿರಾಳವಾಗಿಸಿದರು ಮತ್ತು ಇಬ್ಬರೂ ದೃಶ್ಯವನ್ನು ಸಲೀಸಾಗಿ ನಿರ್ವಹಿಸಿದರು.   ಸನ್ನಿ ಡಿಯೋಲ್ ಅವರೊಂದಿಗೆ ಕೆಲಸ ಮಾಡಲು ತುಂಬಾ ಆರಾಮದಾಯಕವಾಗಿತ್ತು ಎಂದಿದ್ದಾರೆ.

ಆದರೆ ಸೆನ್ಸಾರ್​ ಮಂಡಳಿ ಈಗಿನಂತೆ ಇರಲಿಲ್ಲವೇನೋ. ಅದಕ್ಕಾಗಿ  ಸೆನ್ಸಾರ್ ಮಂಡಳಿ ಆ ದೃಶ್ಯಕ್ಕೆ ಕತ್ತರಿ ಹಾಕಿತ್ತಂತೆ!  ಈ ಬಗ್ಗೆಯೂ ನಟಿ ಹೇಳಿದ್ದಾರೆ.  ನಂತರ ನಾವಿಬ್ಬರೂ  ಒಟ್ಟಿಗೆ ಘಾಯ್, ಘಾಟಕ್ ಮತ್ತು ದಾಮಿನಿಯಂತಹ ಚಿತ್ರಗಳು ಸೂಪರ್​ಹಿಟ್​ ಆದವು ಎಂದಿದ್ದಾರೆ.  ಅಂದಹಾಗೆ, 1995 ರಲ್ಲಿ, ಮೀನಾಕ್ಷಿ ಶೇಷಾದ್ರಿ ಅವರು ಬ್ಯಾಂಕರ್ ಹರೀಶ್ ಮೈಸೂರು ಅವರನ್ನು ವಿವಾಹವಾದರು ಮತ್ತು ಇದರೊಂದಿಗೆ ಅವರು ತಮ್ಮ ನಟನಾ ವೃತ್ತಿಯನ್ನು ತೊರೆದರು. ಅಷ್ಟೇ ಅಲ್ಲ, ಮದುವೆಯ ನಂತರ   ಅಮೆರಿಕಕ್ಕೆ ಶಿಫ್ಟ್ ಆದರು.  ಅಮೆರಿಕಕ್ಕೆ ಹೋದ ಮೇಲೂ  ಸನ್ನಿ ಡಿಯೋಲ್ ಅವರೊಂದಿಗೆ ಸಂಪರ್ಕದಲ್ಲಿದ್ದೆ. ತುಂಬಾ ತಮಾಷೆಯಾಗಿ ಮಾತನಾಡುತ್ತಿದ್ದರು ಎಂದಿದ್ದಾರೆ ನಟಿ. ಅಂದಹಾಗೆ ಮೀನಾಕ್ಷಿ ಅವರು,  ಝಲಕ್ ದಿಖ್ಲಾಜಾ 11 ರಲ್ಲಿ ವಿಶೇಷ ಅತಿಥಿಯಾಗಿ ಕಳೆದ ತಿಂಗಳು ಕಾಣಿಸಿಕೊಂಡಿದ್ದರು.
 

ಡಿವೋರ್ಸ್​ ಬಳಿಕವೂ ನಿವೇದಿತಾ-ಚಂದನ್​ ಒಟ್ಟಿಗೇ ಇದ್ದಾರಾ? ಇನ್​ಸ್ಟಾಗ್ರಾಮ್​ ನೋಡಿ ಗುಸುಗುಸು ಶುರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?