
ತಮಿಳು ನಟ ವಿಜಯ್ ಅಭಿನಯದ ಮಾಸ್ಟರ್ ರಿಲೀಸ್ ಆಗಿ ಬರೀ ಮೂರು ದಿನಗಳಲ್ಲಿ 100 ಕೋಟಿ ಕೊಳ್ಳೆ ಹೊಡೆದಿದೆ. ಸೂಪರ್‌ಹಿಟ್ ಆರಂಭ ಕೊಟ್ಟ ಮೂವಿ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. 50% ಆಸನದ ವ್ಯವಸ್ಥೆ ನಿರ್ಬಂಧನೆ ಮೇಲೆಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಸಿನಿಮಾ.
"
ಕೇವಲ 3 ದಿನಗಳಲ್ಲಿ 100 ಸಿಆರ್ ಡಬ್ಲ್ಯುಡಬ್ಲ್ಯೂ ಕಲೆಕ್ಷನ್,ದಳಪತಿ ವಿಜಯ್, 50% ಆಸನದ ವ್ಯವಸ್ಥೆ ಇದ್ದರೂ ಮೂರು ದಿನದಲ್ಲಿ 100 ಕೋಟಿ ಗಳಿಸಿದೆ ಎಂದು ಚಲನಚಿತ್ರ ಉದ್ಯಮ ವಿಶ್ಲೇಷಕ ಕೌಶಿಕ್ ಎಲ್ಎಂ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ವಿಜಯ್ 'ಮಾಸ್ಟರ್' ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ಹಾಗೆಯೇ ದಳಪತಿ ವಿಜಯ್ ಅವರ 100 ಕೋಟಿ ದಾಟಿದ ಸಿನಿಮಾಗಳ ಲಿಸ್ಟ್‌ನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ. ಬಾಲಾಪರಾಧಿ ಶಾಲಾ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸುವ ಪ್ರಾಧ್ಯಾಪಕನ ಸುತ್ತ ಈ ಸಿನಿಮಾ ಇದೆ. ಇದರಲ್ಲಿ ವಿಜಯ್ ವಿಲನ್ ಪಾತ್ರ ಮಾಡೋ ವಿಜಯ್ ಸೇತುಪತಿಗೆ ಮುಖಾಮುಖಿಯಾಗುತ್ತಾರೆ.
ತಮಿಳ್ನಾಡಲ್ಲಿ ಥಿಯೇಟರ್ ಹೌಸ್‌ಫುಲ್: ‘ಮಾಸ್ಟರ್’ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ
ಕೊರೋನಾ ಮಧ್ಯೆಯೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಕಂಡ ನಂತರ, ಎಂಡೆಮೊಲ್ ಶೈನ್ ಇಂಡಿಯಾ, ಸಿನಿ 1 ಸ್ಟುಡಿಯೋಸ್ ಮತ್ತು 7 ಸ್ಕ್ರೀನ್‌ಗಳು ಈ ಚಿತ್ರವನ್ನು ಹಿಂದಿಯಲ್ಲಿ ಮಾಡುವ ಹಕ್ಕುಗಳನ್ನು ಪಡೆದುಕೊಂಡಿರುವುದಾಗಿ ಘೋಷಿಸಿವೆ.
ಚಿತ್ರಮಂದಿರದಲ್ಲಿ ಮಾಸ್ಟರ್ ಬ್ಲಾಕ್ ಬಸ್ಟರ್; ಹೇಗಿದೆ ಸಿನಿಮಾ?
ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ಅರ್ಜುನ್ ದಾಸ್, ಆಂಡ್ರಿಯಾ ಜೆರೆಮಿಯ ಮತ್ತು ಶಾಂತನು ಭಾಗ್ಯರಾಜ್ ನಟಿಸಿದ್ದಾರೆ, ಇದನ್ನು ಎಕ್ಸ್‌ಬಿ ಫಿಲ್ಮ್ ಕ್ರಿಯೇಟರ್ಸ್ ಮತ್ತು ಸೆವೆನ್ ಸ್ಕ್ರೀನ್ ಸ್ಟುಡಿಯೋ ನಿರ್ಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.