ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಬಿಸ್ವಜಿತ್‌ಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ!

By Suvarna NewsFirst Published Jan 16, 2021, 9:27 PM IST
Highlights

ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಮುಖ ಪ್ರಶಸ್ತಿ ಪ್ರಕಟಿಸಲಾಗಿದೆ. ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಾರ ಬಿಸ್ವಜಿತ್ ಚಟರ್ಜಿಗೆ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಘೋಷಿಸಲಾಗಿದೆ.

ಗೋವಾ(ಜ.16); ಸಿನಿ ಪ್ರಿಯರಿಗೆ ಮಾತ್ರವಲ್ಲ, ಸಂಗೀತ, ಕಲಾ ಪ್ರಿಯರಿಗೆ ಬಿಸ್ವಜಿತ್ ಚಟರ್ಜಿ ಚಿರಪರಿಚಿತ ಹೆಸರು. ಇವರ ಅತ್ಯುನ್ನತ ಸಾಧನೆಯನ್ನು ಪರಿಗಣಿಸಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ.

ಸನ್ನಿ ಲಿಯೋನ್ ಗೌನ್‌ ಹಿಂದೆ ಬಚ್ಚಿಟ್ಟ ಬಾಲಿವುಡ್ ನಟ: ರೀಸನ್ ಏನು..?

ಗೋವಾದಲ್ಲಿ ನಡೆಯುತ್ತಿರುವ 51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವೇಜಡಕರ್, ಪ್ರಮುಖ ಪ್ರಶಸ್ತಿಗಳನ್ನು ಪ್ರಕಟಿಸಿದರು. ಮಾರ್ಚ್ 21 ರಂದು ನಡೆಯಲಿರುವ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಿಸ್ವಜಿತ್ ಚಟರ್ಜಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

 

Veteran Actor and Director Biswajit Chatterjee has been conferred with 'Indian Personality of the Year Award', at .

Award has been announced by Union Minister at the opening ceremony of .

Details: https://t.co/mLQQeveoHS pic.twitter.com/QBYFgIMEw7

— MIB India 🇮🇳 #StayHome #StaySafe (@MIB_India)

ಬೀಸ್ ಸಾಲ್ ಬಾದ್ ಚಿತ್ರದಲ್ಲಿ ಕುಮಾರ್ ವಿಜಯ್ ಸಿಂಗ್ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಬಿಸ್ವಜಿತ್ ಚಟರ್ಜಿ, ಕೊಹ್ರಾ, ಎಪ್ರಿಲ್ ಪೂಲ್, ಮೇರೆ ಸನಮ್, ನೈಟ್ ಇನ್ ಲಂಡನ್, ದೋ ಖಲಿಯಾನ್, ಕಿಸ್ಮತ್ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆಶಾ ಪರೇಕಾ, ವಹೀದಾ ರೆಹಾಮಾನ್, ಮುಮ್ತಾಝ್ ಮಲಾ ಸಿನ್ಹ, ರಾಜಶ್ರಿ ಸೇರಿದಂತೆ ಹಲವು ನಟಿಯರೊಂದಿಗೆ ನಾಯಕನಾಗಿ ನಟಿಸಿದ್ದಾರೆ.

ಬಿಸ್ವಜಿತ್ ಚಟರ್ಜಿ ನಟ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಹಾಡುಗಾರನಾಗಿಯೂ ಸೈ ಎನಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅಪಾರ ಕೂಡುಗೆ ಸಲ್ಲಿಸಿದ ಚಟರ್ಜಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟಿಸಲಾಗಿದೆ.

click me!