ಸ್ಯಾನಿಟರಿ ಪ್ಯಾಡ್ ಮೇಲೆ ದೇವರು; ವಿಕೃತಿ ಮೆರೆದ ನಿರ್ದೇಶಕನ ವಿರುದ್ಧ ತೀವ್ರ ಆಕ್ರೋಶ

By Suvarna NewsFirst Published Aug 3, 2022, 5:39 PM IST
Highlights

ಪ್ಯಾಡ್‌ ಮೇಲೆ ಭಗವಾನ್ ಕೃಷ್ಣ ಪೋಟೋ. ನಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡು ಮಾಸೂಮ್‌ ಸವಾಲ್ ಸಿನಿಮಾ....

ನಿತಾಂಶಿ ಗೋಯಲ್, ಶಿಶಿರ್ ಶರ್ಮ, ಮಧು ಸಚ್‌ದೇವ, ರೋಹಿತ್ ತಿವಾರಿ, ಬೃಂದಾ ತ್ರಿವೇದಿ ಅಭಿನಯಿಸಿರುವ ಮಾಸೂಮ್ ಸವಾಲ್ ಸಿನಿಮಾ ಆಗಸ್ಟ್‌ 5ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಸಿನಿಮಾ ಪ್ರಚಾರದಲ್ಲಿ ಇಡೀ ತಂಡ ಭಾಗಿಯಾಗಿದ್ದು ನಿರ್ದೇಶಕ ಕಮಲೇಶ್ ಕೆ ಮಿಶ್ರಾ ಚಿತ್ರದ ಪೋಸ್ಟರ್‌ ರಿಲೀಸ್ ಮಾಡಿದ್ದಾರೆ. ಪೋಸ್ಟರ್‌ ನೋಡಲು ಡಿಫರೆಂಟ್ ಆಗಿದ್ದು ಸಿನಿ ರಸಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಆದರೆ ಆ ಪೋಸ್ಟರ್‌ನಲ್ಲಿ ಭಗವಾನ್ ಕೃಷ್ಣ ಪರಮಾತ್ಮನ ಫೋಟೋ ನೋಡಿ ಗರಂ ಆಗಿದ್ದಾರೆ. ಪೋಸ್ಟರ್ ಹಿಂದಿರುವ ಉದ್ದೇಶ ಏನೆಂದು ತಿಳಿದುಕೊಳ್ಳಲೇ ಬೇಕು ಎಂದು ಆಗ್ರಹಿಸುತ್ತಿದ್ದಾರೆ. 

ಮುಟ್ಟಿನ ಬಗ್ಗೆ ಸಮಾಜಕ್ಕಿರುವ ಮುಜುಗರವನ್ನು ದೂರ ಮಾಡಲು ಮಾಡಿರುವ ಸಿನಿಮಾ ಇದಾಗಿದ್ದು ವಕೀಲೆ ಪಾತ್ರದಲ್ಲಿ ಏಕವಲ್ಲಿ ಖನ್ನಾ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರಧಾರಿ ಅಗಿರುವ ಕಾರಣ ಏಕವಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಪೋಸ್ಟರ್ ಬಗ್ಗೆ ನೆಗೆಟಿವ್ ಕಾಮೆಂಟ್ಸ್‌ ಬರುತ್ತಿರುವುದರ ಬಗ್ಗೆ ನನಗೆ ಐಡಿಯಾ ಇಲ್ಲ. ಯಾರ ಭಾವನೆಗೂ ನಾನು ದಕ್ಕೆ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ, ಸಿನಿಮಾ ತಂಡಕ್ಕೂ ಯಾವ ಕೆಟ್ಟ ಉದ್ದೇಶವಿಲ್ಲ' ಎಂದು ಹೇಳಿದ್ದಾರೆ.

ಕಾಳಿ ಪೋಸ್ಟರ್ ವಿವಾದ: ಬೇಕಂತಲೇ ಸೃಷ್ಟಿಸ್ತಿದ್ದಾರಾ ಧರ್ಮ ವೈಷಮ್ಯ..?

'ನಮ್ಮ ಜನರೇಷನ್‌ನಲ್ಲಿ ಎಷ್ಟೇ ಬದಲಾವಣೆಗಳನ್ನು ನೋಡಿದ್ದರೂ ನಾವು ಈ ಮುಟ್ಟಿನ ವಿಚಾರದಲ್ಲಿ ಬದಲಾಗಿಲ್ಲ. ಸಮಾಜ ಇದನ್ನು ನೋಡುವ ದೃಷ್ಠಿಯನ್ನು ಬದಲಾಯಿಸಬೇಕು ಅನ್ನೋದು ನಮ್ಮ ಉದ್ದೇಶ. ಈ ನೆಪದಲ್ಲಿ ಹೆಣ್ಣುಮಕ್ಕಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆಚಾರ ವಿಚಾರ ಗೊತ್ತಿಲ್ಲ ಎಂದು ನೋವಿಸುತ್ತಿದ್ದಾರೆ' ಎಂದು ಏಕವಲ್ಲಿ ಮಾತನಾಡಿದ್ದಾರೆ

ಸ್ಯಾನಿಟರಿ ಪ್ಯಾಡ್ ಮೇಲೆ ಸಿನಿಮಾ ಟೈಟಲ್‌ ಮತ್ತು ನಟಿಯ ಫೋಟೋ ಹಾಕಲಾಗಿದೆ. ಬಾಲ್ಯದಿಂದ ಹೆಣ್ಣುಮಕ್ಕಳಲ್ಲಿ ಆಗುವ ಬದಲಾವಣೆಗಳನ್ನು ತೋರಿಸಲಾಗಿದೆ. ತಾಯಿಯನ್ನು ತಬ್ಬಿಕೊಂಡಿರುತ್ತಾರೆ ಮತ್ತೊಂದರಲ್ಲಿ ಶಾಲೆ ಮುಂದೆ ನಿಂತಿರುತ್ತಾಳೆ ಹೀಗೆ ವಿಭಿನ್ನವಾಗಿದೆ ಆದರೆ ಮುಖ್ಯ ಫೋಟೋದಲ್ಲಿ ಭಗವಾನ್ ಕೃಷ್ಣನ ಹಿಂದೆ ನಿಂತುಕೊಂಡು ಸಮಾಜವನ್ನು ನೋಡುತ್ತಿದ್ದಾಳೆ. ಹೀಗಾಗಿ ಪ್ಯಾಡ್‌ ಮೇಲೆ ದೇವರ ಫೋಟೋ ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು.

ನಿರ್ದೇಶಕರ ಮಾತು:

'ನಾವು ನೋಡುವ ದೃಷ್ಠಿ ತಪ್ಪಾಗಿದ್ದರೆ ಮಾತ್ರ ಈ ರೀತಿ ಗೊಂದಲಗಳು ಸೃಷ್ಠಿಯಾಗುತ್ತದೆ. ಇಡೀ ಚಿತ್ರಕಥೆ ಮುಟ್ಟಿನ ಸುತ್ತ ಇರುವ ಕಾರಣ ನಾವು ಪೋಸ್ಟರ್‌ನಲ್ಲಿ ಪ್ಯಾಡ್ ತೋರಿಸಬೇಕಾಗುತ್ತದೆ. ಹೀಗಾಗಿ ಪೋಸ್ಟರ್‌ನಲ್ಲಿ ಪ್ಯಾಡಿದೆ ಆದರೆ ಕೃಷ್ಣ ಜೀ ಇಲ್ಲ. ಇದೊಂದು ಕಾರಣ ಇಟ್ಟುಕೊಂಡು ನಮ್ಮ ಸಿನಿಮಾಗೆ  ಬೆಂಬಲ ಕೊಡದೇ ಇರುವುದು ತಪ್ಪಾಗುತ್ತದೆ. ಕಥೆ ತಿಳಿದುಕೊಳ್ಳಿ. ಬೆಂಬಲ ಕಡಿಮೆ ಮಾಡಬೇಡಿ' ಎಂದು ಸಂತೋಷ್ ಹೇಳಿದ್ದಾರೆ.

 

ಬ್ರಾಹ್ಮಣ ದೃಷ್ಟಿಕೋನದ ಬಿಜೆಪಿ ಭಾರತದಲ್ಲಿರಲು ಬಯಸುವುದಿಲ್ಲ, ಮೊಯಿತ್ರಾ ಮತ್ತೊಂದು ವಿವಾದ!

'ನಾನು ಈ ಸಿನಿಮಾದಲ್ಲಿ ವಕೀಲೆ ಪಾತ್ರ ಮಾಡುತ್ತಿರುವೆ. ಸೋಸೈಟಿ ಹೆಣ್ಣು ಮಕ್ಕಳ ಮೇಲೆ ಹಾಕು ಏರಿಕೆಗಳನ್ನು ದೂರು ಮಾಡಿ ಜಯ ಸಾಧಿಸುವುದು ಹೇಗೆಂದು ನಾನು ಅರಿವು ಮೂಡಿಸುವೆ. ಸಮಾಜ ಮಾತ್ರವಲ್ಲ ಹೆಣ್ಣು ಮಕ್ಕಳು ಕುಟುಂಬದಲ್ಲಿ ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ, ಬದಲಾವಣೆಗಳು ಹೇಗೆ ಆಕೆಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೂಕ್ಷ್ಮವಾಗಿ ತೋರಿಸಲಾಗಿದೆ. ಇಡೀ ಸಿನಿಮಾದಲ್ಲಿ ಮಕ್ಕಳು ಮತ್ತು ವಕೀಲೆ ಸಂಬಂಧ, ವಕೀಲರು ಎಷ್ಟು ಸಪೋರ್ಟ್‌ ಮಾಡುತ್ತಾರೆ ಈ ಸಿನಿಮಾದಲ್ಲಿ ನೋಡಬಹುದು' ಎಂದಿದ್ದಾರೆ ಏಕವಲ್ಲಿ.

ನೆಟ್ಟಿಗರ ಆಕ್ರೋಶ:

ಸಿನಿಮಾಗಳಲ್ಲಿ ದೇವರಿಗೆ ಅವಮಾನ ಮಾಡುವುದು ಸರಿ ಅಲ್ಲ. ನಿರ್ದೇಶಕರು ಸಮಾಜಕ್ಕೆ ಯಾವ ಪಾಠ ಬೇಕಿದ್ದರೂ ಮಾಡಲಿ ಆದರೆ ನಮ್ಮ ದೇವರ ಪೋಟೋ ಹಾಕಿ ಧರ್ಮಕ್ಕೆ ಅವಮಾನ ಮಾಡಬೇಡಿ. ಹಿಂದು ದೇವರೇ ಯಾಕೆ ಬೇಕು ನಿಮಗೆ ಬೇರೆ ದೇವರ ಪೋಟೋ ಇಲ್ವಾ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಜನರಿಗೆ ಬುದ್ಧಿ ಕಲಿಸುವ ಬದಲು ತಪ್ಪು ವಿಚಾರಗಳು ತಿಳಿಸುತ್ತದೆ. ಈ ಚಿತ್ರಕ್ಕೆ ನಮ್ಮ ಬೆಂಬಲವಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

click me!