
ಬಾಲಿವುಡ್‌ನಲ್ಲಿ ಮೆರೆದು ಹಾಲಿವುಡ್‌ನಲ್ಲೂ ಮಿಂಚುತ್ತಿರುವ ನಟ ಪ್ರಿಯಾಂಕಾ ಚೋಪ್ರಾ (Priyanka Chopra) ಸಂದರ್ಶನಗಳಲ್ಲಿ ಮಾತನಾಡುವುದು ಗೊತ್ತೇ ಇದೆ. ಅವರು ಅದೆಷ್ಟು ಸಂದರ್ಶನಗಳಲ್ಲಿ ಅದೆಷ್ಟು ಮಾತನಾಡುತ್ತಾರೋ ಏನೋ ಎನ್ನುವಂತೆ ಆಗಾಗ ಅವರಾಡಿರುವ ಮಾತಗಳು ವೈರಲ್ ಆಗುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾಗಳ ಮೂಲಕ ಜಗತ್ತಿನ ಮೂಲೆಮೂಲೆಗೆ ಪ್ರಿಯಾಂಕಾ ಚೋಪ್ರಾ ಮಾತುಗಳು ಹರಿದಾಡುತ್ತಲೇ ಇರುತ್ತವೆ. ಹಲವರಿಗೆ ಅದು ಕಚಗುಳಿ ಕೊಟ್ಟರೆ ಕೆಲವರಿಗೆ ಅದು ಇನ್‌ಸ್ಪಿರೇಶನ್ ಕೂಡ ಆಗಬಹುದು.
ನಟಿ ಪ್ರಿಯಾಂಕಾ ಚೋಪ್ರಾ ಅವರು ಒಮ್ಮೆ ಮಾತನಾಡುತ್ತ 'ಈ ಸಿನಿಮಾಗಳು, ನಾಟಕಗಳು ಹಾಗೂ ಕ್ರೀಡೆಗಳು ಯಾವುದೇ ಇರಲಿ, ಇಲ್ಲಿ ನಿರಂತರತೆ ಎಂಬುದಿಲ್ಲ. ಹಲವರಿಗೆ ಇಲ್ಲಿ ಯಾವಾಗಲೋ ಒಮ್ಮೆ ಒಂದು ಪ್ರಾಜೆಕ್ಟ್ ಸಿಕ್ಕರೆ ಅದು ಮುಗಿದ ಮೇಲೆ ಏನಂತ ಗೊತ್ತಾಗಲು ಅಸಾಧ್ಯ. ಅದೇ ಸಂಪಾದನೆಯನ್ನು ನಂಬಿಕೊಂಡು ಮುಂದಿನ ಪ್ರಾಜೆಕ್ಟ್ ಸಿಗುವವರೆಗೂ ಜೀವನ ನಿರ್ವಹಣೆ ಕಷ್ಟವಾದರು ಮಾಡಲೇಬೇಕು.
ಮತ್ತೆ ವಿವಾದಕ್ಕೆ ಗುರಿಯಾಗ್ತಾರಾ ನ್ಯಾಷನಲ್ ಕ್ರಶ್..; ಕನ್ನಡತಿ ರಶ್ಮಿಕಾ ಮಂದಣ್ಣಗೆ ಮರಾಠಿ ಪ್ರೀತಿ..!
ನಾನೂ ಕೂಡ ನನ್ನ ವೃತ್ತಿಜೀವನದ ಶುರುವಿನಲ್ಲಿ ಇವೆಲ್ಲವನ್ನೂ ಅನುಭವಿಸಿದ್ದೇನೆ. ಆದರೆ ಈಗ ನನಗೆ ಅಂತಹ ಸಮಸ್ಯೆ ಕಾಡುವುದಿಲ್ಲ. ಆದರೆ ಅದೆಷ್ಟೋ ಜನರಿಗೆ ಎರಡು ಪ್ರಾಜೆಕ್ಟ್‌ಗಳ ಮಧ್ಯೆ 5 ವರ್ಷವೋ ಹತ್ತು ವರ್ಷವೋ ಗ್ಯಾಪ್ ಕೂಡ ಆಗಿಬಿಡುತ್ತೆ. ಅಂಥವರ ಜೀವನ ಅದೆಷ್ಟು ಕಷ್ಟಕರವಾಗಿರುತ್ತದೆ ಎಂಬುದನ್ನು ಊಹಿಸಿದರೂ ಕಣ್ಣಿರು ಬರುತ್ತದೆ. ಹಾಗಂತ ಅವರು ತಮ್ಮ ಕ್ಷೇತ್ರ ಬಿಟ್ಟು ಬೇರೆ ಏನೋ ಸಿಕ್ಕ ಕೆಲಸ ಮಾಡಲೂ ಸಾಧ್ಯವಿಲ್ಲ. ಏಕೆಂದರೆ ಪ್ರತಿ ಕೆಲಸಕ್ಕೂ ತನ್ನದೇ ಆದ ಪ್ರಾವಿಣ್ಯತೆ ಬೇಕಾಗುತ್ತದೆ.
ಆ ವಿಷಯದಲ್ಲಿ ನಾನು ಅದೃಷ್ಟವಂತೆ ಎಂದೇ ಹೇಳಬೇಕು. ಏಕೆಂದರೆ, ನನ್ನ ಕೆರಿಯರ್ ಪ್ರಾರಂಭದ ದಿನಗಳಲ್ಲಿ ನನಗೆ ಅಪ್ಪ-ಅಮ್ಮನ ಸಪೋರ್ಟ್ ಚೆನ್ನಾಗಿತ್ತು. ಬಳಿಕ ನನಗೆ ವೃತ್ತಿಜೀವನದಲ್ಲಿ ಸಾಕಷ್ಟು ಏರಿಕೆಯಾಗುತ್ತ ಹೋಯ್ತು. ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಈಗಲೂ ಅಷ್ಟೇ, ನನಗೆ ಹಾಲಿವುಡ್‌ನಲ್ಲಿ ಅವಕಾಶ ಸಿಕ್ಕಿದೆ. ಕೆಲಸ ಸಿಗುವವರೆಗೂ ನನ್ನ ಪತಿ ನಿಕ್ ಜೊನಾಸ್ ಬೆಂಬಲ ನನಗೆ ಇದ್ಧೇ ಇತ್ತು. ಆದರೆ, ಕೆಲವರು ಯಾವುದೇ ಬೆಂಬಲ ಇಲ್ಲದೇ ತುಂಬಾ ಕಷ್ಟದಲ್ಲಿ ಇರುತ್ತಾರೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.
ಟಾಂ ಟಾಂ ಮಾಡದೇ ಘನತೆವೆತ್ತ ಕಾರ್ಯ ಮಾಡಿ ದೇಶದ ಜನತೆ ಮೆಚ್ಚುಗೆ ಪಡೆದ ಡಾರ್ಲಿಂಗ್ ಪ್ರಭಾಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.