ತರುಣ್​-ಸೋನಲ್​ ಮದುವೆಗೆ ಕ್ಷಣಗಣನೆ... ನಟಿಯ ಭರ್ಜರಿ ಬ್ಯಾಚುಲರ್​ ಪಾರ್ಟಿ ಹೇಗಿತ್ತು ನೋಡಿ...!

By Suchethana D  |  First Published Aug 9, 2024, 10:54 AM IST

 ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್​ ಮೊಂತೆರೋ ಮದುವೆ ನಾಳೆ ಮತ್ತು ನಾಡಿದ್ದು ನಡೆಯಲಿದೆ. ಇದರ ನಡುವೆಯೇ ಸೋನಲ್​ ಭರ್ಜರಿ ಬ್ಯಾಚುಲರ್​ ಪಾರ್ಟಿ ಕೊಟ್ಟಿದ್ದಾರೆ. ಅದರ ವಿಡಿಯೋ ವೈರಲ್​ ಆಗಿವೆ...
 


ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್​ ಮೊಂತೆರೋ ಮದುವೆಗೆ ಕ್ಷಣಗಣನೆ ಶುರುವಾಗಿದೆ ನಾಳೆ ಮತ್ತು ನಾಡಿದ್ದು ಅಂದರೆ,  ಆಗಸ್ಟ್ 10 ಹಾಗೂ 11ರಂದು ವಿವಾಹ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನ ಕೆಂಗೇರಿ ಸಮೀಪ ಇರುವ ಕಲ್ಯಾಣ ಮಂಟಪದಲ್ಲಿ ಇವರು ವಿವಾಹ ಆಗುತ್ತಿದ್ದಾರೆ.  ಕಳೆದೊಂದು ತಿಂಗಳಿನಿಂದಲೂ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಹರಡಿತ್ತು. ಆದರೆ ಇಬ್ಬರೂ ಗಪ್​ಚುಪ್​ ಇದ್ದರು. ಆದರೆ ಜುಲೈ 22ರಂದು  ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನದ ಮಾದರಿಯಲ್ಲಿಯೇ ನಟಿ ಸೋನಲ್ ಮೊಂಥೆರೋ ಅವರನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. 

ಸಾಮಾನ್ಯವಾಗಿ ಹಲವರು ಮದುವೆಗೂ ಮುನ್ನ ಬ್ಯಾಚುಲರ್​ ಪಾರ್ಟಿ ಅರೇಂಜ್​ ಮಾಡುತ್ತಾರೆ. ಅದೇ ರೀತಿ  ಸೋನಲ್ ಕೂಡ  ಬ್ಯಾಚುಲರ್ ಪಾರ್ಟಿ ಮಾಡಿದ್ದು, ಅದರ ವಿಡಿಯೋಗಳು ವೈರಲ್​ ಆಗಿವೆ.  ಮೊದಲ ವಿಡಿಯೋದಲ್ಲಿ ಸೋನಲ್​ ಅವರಿಗೆ ತಾಯಿ ಮತ್ತು ತಂಗಿ ಸರ್​ಪ್ರೈಸ್​ ಪಾರ್ಟಿ ಕೊಟ್ಟಿದ್ದರೆ ಇನ್ನೊಂದರಲ್ಲಿ ಸೋನಲ್​ ಶ್ಯಾಂಪೇನ್​ ಚೆಲ್ಲಿ ಪಾರ್ಟಿ ಆಯೋಜನೆ ಮಾಡಿರುವುದನ್ನು ನೋಡಬಹುದು. ತಾಯಿ ಮತ್ತು ತಂಗಿ ಕೊಟ್ಟಿರೋ ಸರ್​ಪ್ರೈಸ್​  ಪಾರ್ಟಿಯಲ್ಲಿ, ಸೋನಲ್ ಅವರನ್ನು ಕಣ್ಣು ಮುಂಚಿಕೊಂಡು ಕರೆದುಕೊಂಡು ಬರಲಾಗಿದೆ. ಕೋಣೆಯ  ಒಳಗೆ ಕಾಲಿಡುತ್ತಿದ್ದಂತೇನೆ, ಅಲ್ಲಿ ಸೋನಲ್​ ಸ್ನೇಹಿತೆಯರು  ತರುಣ್ ಅವರ ಮುಖವಾಡ ಹಾಕಿಕೊಂಡು ಕಾಯುತ್ತಿದ್ದಾರೆ. ಇದನ್ನು ನೋಡಿ  ಸೋನಲ್ ಫುಲ್ ಥ್ರಿಲ್ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇಡೀ ಪಾರ್ಟಿಯಲ್ಲಿ ತರುಣ್ ಸುಧೀರ್ ಮುಖವಾಡ ಹೆಚ್ಚು ಗಮನ ಸೆಳೆದಿದೆ. ಅಷ್ಟೆ ಇಂಟರೆಸ್ಟಿಂಗ್​ ಕಾನ್ಸೆಪ್ಟ್​ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಸೋನಲ್​ ಅವರು ಸ್ನೇಹಿತೆಯರ ಜೊತೆ ಶ್ಯಾಂಪೇನ್​ ಚಿಮ್ಮಿಸಿ ಪಾರ್ಟಿ ಮಾಡಿದ್ದಾರೆ. ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. 

Tap to resize

Latest Videos

ಹೊರಗಿನವರಿಗೆ ಕೋಟಿ ಕೋಟಿ ಕೊಡ್ತಾರೆ... ಕನ್ನಡಿಗರಿಗೆ ಬೆಲೆನೇ ಇಲ್ವಾ: ಪೂಜಾ ಗಾಂಧಿ ಬೇಸರ

ಅಷ್ಟಕ್ಕೂ ಇವರಿಬ್ಬರ ಪ್ರೇಮಕ್ಕೆ ಕಾರಣವಾಗಿದ್ದು ಸದ್ಯ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇರುವ ದರ್ಶನ್​.  ತರುಣ್ ಸುಧೀರ್ ಅವರ ಆಪ್ತ ಸ್ನೇಹಿತರಾಗಿರುವ ದರ್ಶನ್ ಇವರ ಮದುವೆ ದಿನಾಂಕವನ್ನು ನಿಗದಿ ಮಾಡಿದ್ದರಂತೆ. ಆದರೆ ಜೈಲಿನಲ್ಲಿ ಇರುವ ಕಾರಣ, ಏನು ಮಾಡಬೇಕು ಎಂದು ಈ ಜೋಡಿಗೆ ತಿಳಿದಿರಲಿಲ್ಲ. ಕೊನೆಗೆ  ತರುಣ್ ಇತ್ತೀಚೆಗೆ ನಟ ದರ್ಶನ್ ಭೇಟಿ ಮಾಡಲು ಜೈಲಿಗೆ ಹೋಗಿ ಬಂದಿದ್ದರು. ಈ ವೇಳೆ ನಟ ದರ್ಶನ್ ನನಗಾಗಿ ನೀನು ನಿನ್ನ ಮದುವೆ ದಿನಾಂಕ ಮುಂದೂಡಿಕೆ ಮಾಡಿಕೊಳ್ಳಬೇಡ. ಅದೇ ದಿನಾಂಕದಲ್ಲಿ ನೀನು ಮದುವೆ ಮಾಡಿಕೋ, ನಾನು ಅಷ್ಟರೊಳಗೆ ಜೈನಿಂದ ಹೊರಗೆ ಬರುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ ದರ್ಶನ್​ ಮದುವೆಗೆ ಬರುವುದು ಡೌಟ್​.  
 
ಅಂದಹಾಗೆ ತರುಣ್​ ಮತ್ತು ಸೋನಲ್​  ನಡುವಿನ ವಯಸ್ಸಿನ ಅಂತರ  11 ವರ್ಷ. ತರುಣ್ ಸುಧೀರ್‌ಗೆ 41 ವರ್ಷ ವಯಸ್ಸಾಗಿದೆ. ಇನ್ನು ನಟಿ ಸೋನಲ್ ಮೊಂಥೆರೋಗೆ 29 ವರ್ಷ ವಯಸ್ಸಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆ ಆಗುತ್ತಿರುವುದರಿಂದ ವಯಸ್ಸಿನ ಅಂತರ ಲೆಕ್ಕಕ್ಕೆ ಬರುವುದಿಲ್ಲ. ಇನ್ನು ಇವರಿಬ್ಬರ ವಯಸ್ಸಿನ ಅಂತರಕ್ಕಿಂತ ತುಂಬಾ ವಯಸ್ಸಿನ ಅಂತರ ಇರುವ ಜೋಡಿಗಳೇ ಚೆನ್ನಾಗಿ ಜೀವನ ಮಾಡುತ್ತಿದ್ದು, ಈ ಮುದ್ದಾದ ಜೋಡಿಗೂ ಎಲ್ಲರೂ ಶುಭ ಹಾರೈಸಿದ್ದಾರೆ.  

ಈ ನಟಿಯರಿಗೆ ಅಪ್ಪನೂ ಸೈ- ಮಕ್ಕಳೂ ಸೈ... ತಂದೆ-ಮಗನ ಜೊತೆ ಲಿಪ್​ಲಾಕ್ ಮಾಡಿದ ತಾರೆಯರು ಇವರೇ...

 

 
 
 
 
 
 
 
 
 
 
 
 
 
 
 

A post shared by Namma KFI (@namma_kfi)

click me!