ಹೃತಿಕ್ ಕಾರಣಕ್ಕೆ ಡಾನ್ಸ್ ಮಾಡೋದನ್ನೇ ಬಿಟ್ಟೆ; ಫ್ಯಾಮಿಲಿ ಮ್ಯಾನ್ ಸ್ಟಾರ್ ಮನೋಜ್ ಬಾಜಪಾಯಿ ಶಾಕಿಂಗ್ ಹೇಳಿಕೆ

Published : Feb 28, 2023, 01:36 PM IST
ಹೃತಿಕ್ ಕಾರಣಕ್ಕೆ ಡಾನ್ಸ್ ಮಾಡೋದನ್ನೇ ಬಿಟ್ಟೆ; ಫ್ಯಾಮಿಲಿ ಮ್ಯಾನ್ ಸ್ಟಾರ್ ಮನೋಜ್ ಬಾಜಪಾಯಿ  ಶಾಕಿಂಗ್ ಹೇಳಿಕೆ

ಸಾರಾಂಶ

ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಕಾರಣಕ್ಕೆ ಡಾನ್ಸ್ ಮಾಡುವುದನ್ನೇ ಬಿಟ್ಟೆ ಎಂದು ಫ್ಯಾಮಿಲಿ ಮ್ಯಾನ್ ಸ್ಟಾರ್ ಮನೋಜ್ ಹೇಳಿದ್ದಾರೆ. 

ಬಾಲಿವುಡ್ ಸ್ಟಾರ್, ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಅವರಿಂದ ಡಾನ್ಸ್ ಬಿಟ್ಟೆ ಎಂದು ಖ್ಯಾತ ನಟ, ಫ್ಯಾಮಿಲಿ ಮ್ಯಾನ್ ಹೀರೋ ಮನೋಜ್ ಬಾಜಪಾಯಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಮನೋಜ್ ಬಾಜಪಾಯಿ ಅವರಿಗೆ ದೊಡ್ಡ ಡಾನ್ಸರ್ ಆಗಬೇಕೆನ್ನುವ ಕನಸುಹೊಂದಿದ್ದರಂತೆ. ಆದರೆ ಹೃತಿಕ್ ರೋಷನ್ ಕಾರಣ ಅವರ ಕನಸನ್ನು ತ್ಯಜಿಸಬೇಕಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಮನೋಜ್ ಸಂದರ್ಶದಲ್ಲಿ ಬಹಿರಂಗ ಪಡಿಸಿದರು. ಮನೋಜ್ ಬಾಜಪಾಯಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟ ಸಿನಿಮಾ ಸತ್ಯಾ. 1998ರಲ್ಲಿ ರಿಲೀಸ್ ಆದ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಆಯಿತು. ಅದೇ ಸಮಯದಲ್ಲಿ ಅಂದರೆ 2 ವರ್ಷಗಳ ಅಂತರದಲ್ಲಿ ಹೃತಿಕ್ ರೋಷನ್  ಕಹೋ ನಾ ಪ್ಯಾರ್ ಹೈ ಸಿನಿಮಾ ಮೂಲಕ ಸಿನಿಮಾರಂಗಕ ಪ್ರವೇಶಿಸಿದರು. 

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮನೋಜ್, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ, ತಮ್ಮ ಆರಂಭದ ದಿನಗಳ ಬಗ್ಗೆ ಬಹಿರಂಗ ಪಡಿಸಿದರು. ರಂಗಭೂಮಿಯಿಂದ ಬಂದ ಮನೋಜ್ ಆ ದಿನಗಳನ್ನು ನೆನಪಿಸಿಕೊಂಡರು. ರಂಗಭೂಮಿಯಿಂದ ಬಂದವರಿಗೆ ಡಾನ್ಸ್ ಮತ್ತು ಹಾಡುವುದು ಸಹವಾಗಿ ಬರುತ್ತದೆ ಎಂದು ಹೇಳಿದರು. 

'ನಾನು ರಂಗಭೂಮಿಯಿಂದ ಬಂದವನಾದ್ದರಿಂದ ಒಬ್ಬ ಕಲಾವಿದನಿಗೆ ಹಾಡಲು ಸಹ ಗೊತ್ತಿರಬೇಕು ಎಂಬ ಪೂರ್ವಾಪೇಕ್ಷಿತ ಇತ್ತು. ನೀವು ಟಾಪ್ ಗಾಯಕರಾಗದಿದ್ದರೂ ಕನಿಷ್ಠ ಕೋರಸ್ ಗಾಯಕರಾಗಬೇಕು ಎನ್ನುವುದು ನನ್ನ ಅಭಿಪ್ರಾಯ. ನಾನು ಉತ್ತಮ ಡಾನ್ಸರ್ ಕೂಡ ಹೌದು' ಎಂದು ಮನೋಜ್ ಹೇಳಿದ್ದಾರೆ. 

ಮತ್ತೆ ಬರ್ತಿದೆ 'ಫ್ಯಾಮಿಲಿ ಮ್ಯಾನ್': ಇಂಟ್ರಸ್ಟಿಂಗ್ ಅಪ್‌ಡೇಟ್ ನೀಡಿದ ಮನೋಜ್ ಬಾಜಪಾಯಿ, ಸಮಂತಾ ಇರ್ತಾರಾ?

'ನಾನು ಚಾವು ನೃತ್ಯದಲ್ಲಿ ತರಬೇತಿ ಪಡೆದಿದ್ದೇನೆ ಆದರೆ ಹೃತಿಕ್ ಎಂಟ್ರಿ ಕೊಟ್ಟಾಗ ನಾನು ಅವರ ಅಭಿನಯವನ್ನು ನೋಡಿದೆ. ಬಳಿಕ ನಾನು ಇದನ್ನು ಕಲಿಯಲು ಸಾಧ್ಯವಿಲ್ಲ ಎಂದುಕೊಂಡೆ. ನನ್ನ ನೃತ್ಯದ ಕನಸಿಗೆ ಅಂತ್ಯಹಾಡಬೇಕೆಂದು ಎಂದು ನನಗೆ ನಾನೇ ಹೇಳಿಕೊಂಡು, ಡಾನ್ಸ್ ಮಾಡುವುದನ್ನು ಬಿಟ್ಟೆ' ಎಂದು ಮನೋಜ್ ಹೇಳಿದರು. 'ನಾನೇನು ಡಾನ್ಸ್ ಮಾಡಬೇಕಿತ್ತೊ ಅದನ್ನು ಹೃತಿಕ್ ರೋಷನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಮಾಡಿದ್ದೀನಿ' ಎಂದರು. ಸತ್ಯ ಸಿನಿಮಾದಲ್ಲಿ ಮನೋಜ್  ಸಪ್ನೆ ಮಿ ಮಿಲ್ತಿ ಹೈ ಹಾಡಿಗೆ ಮಸ್ತ್ ಡಾನ್ಸ್ ಮಾಡಿದ್ದರು. 

ಮನೋಜ್ ಸದ್ಯ ತಮ್ಮ ಮುಂದಿನ ಗುಲ್ಮೊಹರ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ರಾಹುಲ್ ವಿ ಚಿತ್ತೆಲ್ಲಾ ನಿರ್ದೇಶನದಲ್ಲಿರುವ ಬಂದಿರುವ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಸದ್ಯ ಪ್ರಚಾರದಲ್ಲಿ ಮನೋಜ್ ಬ್ಯುಸಿಯಾಗಿದ್ದಾರೆ. ಮಾರ್ಚ್ 3ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. 

ಜೀವನ್ಮರಣ ಸನ್ನಿವೇಶ, ಸುಳ್ಳು ಸುದ್ದಿ ಎಲ್ಲಿ ಸಿಗುತ್ತೆ: ಪುಷ್ಪ ಚಿತ್ರದ ಬಗ್ಗೆ ಮನೋಜ್ ಬಾಜ್‌ಪಾಯಿ ಸ್ಪಷ್ಟನೆ

ದಿ ಫ್ಯಾಮಿಲಿ ಮ್ಯಾನ್ 3

ದಿ ಫ್ಯಾಮಿಲಿ ಮ್ಯಾನ್ ಸೀರಿಸ್‌ನಲ್ಲಿ ಮನೋಜ್ ಬಾಜಪಾಯಿ ಶ್ರೀಕಾಂತ್ ಆಗಿ ಮಿಂಚಿದ್ದರು. ದಿ ಫ್ಯಾಮಿಲಿ ಮ್ಯಾನ್ 1 ಮತ್ತು 2 ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದ್ದು 3ನೇ ಭಾಗಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಾರ್ಟ್ -3 ಬಗ್ಗೆ ಮನೋಜ್ ಇತ್ತೀಚೆಗಷ್ಟೆ ಸುಳಿವು ನೀಡುವ ಮೂಲಕ ಅಭಿಮಾನಿಗಳ ಕುತೂಹಲ ದುಪ್ಪಟ್ಟು ಮಾಡಿದ್ದರು. ಈ ಸೀರಿಸ್ ಜೊತೆಗೆ ಮನೋಜ್ ಇನ್ನು ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?