ತೆಲುಗು ಸ್ಟಾರ್ ನಟಿಯರಿಗೆ ದೊಡ್ಡ ತಲೆನೋವಾದ ಕನ್ನಡತಿ ಶ್ರೀಲೀಲಾ; ರಶ್ಮಿಕಾ ಕಥೆ ಅಷ್ಟೆ ಎಂದ ನೆಟ್ಟಿಗರು

Published : Feb 28, 2023, 01:08 PM IST
ತೆಲುಗು ಸ್ಟಾರ್ ನಟಿಯರಿಗೆ ದೊಡ್ಡ ತಲೆನೋವಾದ ಕನ್ನಡತಿ ಶ್ರೀಲೀಲಾ; ರಶ್ಮಿಕಾ ಕಥೆ ಅಷ್ಟೆ ಎಂದ ನೆಟ್ಟಿಗರು

ಸಾರಾಂಶ

ಕನ್ನಡತಿ ಶ್ರೀಲೀಲಾ ಈಗ ತೆಲುಗಿನ ಸ್ಟಾರ್ ನಾಯಕಿಯರಿಗೆ ದೊಡ್ಡ ತಲೆನೋವಾಗಿದ್ದಾರೆ. ಶ್ರೀಲೀಲಾ ಕೈಯಲ್ಲಿರುವ ಸಿನಿಮಾಗಳು ಉಳಿದ ನಾಯಕಿಯರಿಗೆ ಶಾಕ್ ಆಗಿದೆ. 

ಕನ್ನಡದ ಅನೇಕ ನಟಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಕನ್ನಡ ಸುಂದರಿಯರದ್ದೆ ಹವಾ ಎಂದರೂ ತಪ್ಪಾಗಲ್ಲ. ಅನೇಕ ನಟಿಯರು ತೆಲುಗು ಸ್ಟಾರ್ ಜೊತೆ ನಟಿಸುತ್ತಿದ್ದಾರೆ. ಕನ್ನಡದ ಕಿಸ್ ಬ್ಯೂಟಿ ಶ್ರೀಲಿಲಾ ಕೂಡ ಅದೇ ಲಿಸ್ಟ್‌ನಲ್ಲಿದ್ದಾರೆ. ನಟಿ ಶ್ರೀಲೀಲಾ ತೆಲುಗಿನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಶ್ರೀಲೀಲಾ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿವೆ. ಎಷ್ಟು ಚಿತ್ರಗಳು ಎಂದರೆ ಉಳಿದ ನಾಯಕಿಯರಿಗೆ ಶ್ರೀಲಿಲಾ ದೊಡ್ಡ ತಲೆನೋವಾಗಿದ್ದಾರಂತೆ. ಯುವ ನಟಿಯರು ಈ ಪರಿ ಬೇಡಿಕೆ ಸೃಷ್ಟಿಸಿಕೊಂಡು ಎಲ್ಲಾ ಸಿನಿಮಾಗಳಲ್ಲೂ ಅವಕಾಶ್ ಗಿಟ್ಟಿಸಿಕೊಳ್ಳುತ್ತಿರುವುದು ತೆಲುಗಿನ ಸ್ಟಾರ್ ನಟಿಯರಿಗೆ ಶಾಕ್ ನೀಡಿದೆ. 

ಅಷ್ಟಕ್ಕೂ ಕನ್ನಡದ ಸುಂದರಿ ಶ್ರೀಲೀಲಾ ಕೈಯಲ್ಲಿ ಸದ್ಯ 8ಕ್ಕೂ ಹೆಚ್ಚು ಸಿನಿಮಾಗಳಿವೆ. ಬ್ಯಾಕು ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಎಲ್ಲಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವ ಶ್ರೀಲೀಲಾ ನೋಡಿ ಉಳಿದ ನಟಿಯರು ಅಚ್ಚರಿ ಪಡುತ್ತಿದ್ದಾರೆ. ಅಂದಹಾಗೆ ಸದ್ಯ ಶ್ರೀಲೀಲಾ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಗಾಲೇ ಮಹೇಶ್ ಬಾಬು ಜೊತೆ SSMB ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಕೃಷ್ಣ ಅವರ NBK108 ಸಿನಿಮಾದಲ್ಲಿ ಬಾಲಯ್ಯ ಮಗಳಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಪೋತಿನೇನಿ ಸಿನಿಮಾ, ನಿತಿನ್ 32, ನವವೀನ್ ಪೋಲಿಶೆಟ್ಟಿ ವೈಷ್ಣನ್ ತೇಜ್ ಅವರ PVT04 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

30 ದಿನ ಹೋಟೆಲ್‌ ರೂಮ್‌ಗೆ 6 ಲಕ್ಷ: ಶ್ರೀಲೀಲಾ ಐಷಾರಾಮಿ ಜೀವನದಿಂದ ನಿರ್ಮಾಪಕರಿಗೆ ನಷ್ಟ?

ತೆಲುಗು ಸಿನಿಮಾರಂಗದಲ್ಲಿ ರಶ್ಮಿಕಾ ಮತ್ತು ಪೂಜಾ ಹೆಗ್ಡೆ ಇಬ್ಬರೂ ಪೈಪೋಟಿ ಮೇರೆಗೆ ಅವಕಾಶಗಳನ್ನು ಗೆಟ್ಟಿಸಿಕೊಳ್ಳುತ್ತಿದ್ದರು. ಆದರೀಗ ಶ್ರೀಲೀಲಾ ನೋಡಿ ಶಾಕ್ ಆಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ನಟಿಸುತ್ತಿರುವ ಶ್ರೀಲೀಲಾ ಉಳಿದ ನಾಯಕಿಯರಿಗೆ ತಲೆನೋವಾಗಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ರಶ್ಮಿಕಾ ಕಥೆ ಅಷ್ಟೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ರಶ್ಮಿಕಾ ಸದ್ಯ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತೆಲುಗುರಂಗವನ್ನು ಶ್ರೀಲೀಲಾ ಆಳುತ್ತಿರುವುದು ಅಚ್ಚರಿ ಮೂಡಿಸಿದೆ. 

ತೆಲುಗು ಸ್ಟಾರ್ ಬಾಲಯ್ಯ ಸಿನಿಮಾಗೆ ಕನ್ನಡತಿ ಶ್ರೀಲೀಲಾ ನಾಯಕಿ

ಶ್ರೀಲೀಲಾ ಬಗ್ಗೆ 

ಕಿಸ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಮೊದಲ ಸಿನಿಮಾದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದರು. ಬಳಿಕ ಶ್ರೀಮುರಳಿ ಜೊತೆ ಭಟಾರೆ ಸಿನಿಮಾದಲ್ಲಿ ಮಿಂಚಿದರು. ನಂತರ ತೆಲುಗು ಸಿನಿಮಾರಂಗಕ್ಕೆ ಹಾರಿದರು. ಪೆಳ್ಳಿ ಸಂದಟು ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್‌ಗೆ ಕಾಲಿಟ್ಟರು. ತೆಲುಗು ಮಂದಿಯ ಹೃದಯ ಗೆದ್ದ ಶ್ರೀಲೀಲಾಗೆ ಅವಕಾಶಗಳು ಹೆಚ್ಚಾಯಿತು. ಕನ್ನಡದಲ್ಲಿ ಬೈ ಟು ಲವ್ ನಲ್ಲಿ ಮಿಂಚಿದ ಬಳಿಕ ಶ್ರೀಲೀಲಾ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಸದ್ಯ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಶ್ರೀಲೀಲಾ ಬಾಲಿವುಡ್‌ಗೂ ಹಾರುತ್ತಾರಾ ಕಾದು ನೋಡಬೇಕಿದೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?