ಲವ್ ಜಿಹಾದ್‌ನಲ್ಲಿ ಸಿಲುಕಿಕೊಳ್ಳುವ ಹುಡುಗಿಯರಿಗೆ ದೊಡ್ಡ ಪಾಠವಿದು; ರಾಖಿ ಸಾವಂತ್ ಮಾಜಿ ಪತಿ ರಿತೇಶ್

Published : Feb 08, 2023, 04:14 PM IST
ಲವ್ ಜಿಹಾದ್‌ನಲ್ಲಿ ಸಿಲುಕಿಕೊಳ್ಳುವ ಹುಡುಗಿಯರಿಗೆ ದೊಡ್ಡ ಪಾಠವಿದು; ರಾಖಿ ಸಾವಂತ್ ಮಾಜಿ ಪತಿ ರಿತೇಶ್

ಸಾರಾಂಶ

ಆದಿಲ್ ಖಾನ್ ಜೊತೆಗಿನ ದಾಂಪತ್ಯ ಕಲಹದ ನಡುವೆ ರಾಖಿ ಸಾವಂತ್ ಮಾಜಿ ಪತಿ ರಿತೇಶ್ ಪ್ರತಿಕ್ರಿಯೆ ನೀಡಿದ್ದಾರೆ. 

ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದಾಂಪತ್ಯ ಕಲಹ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಸಾಲು ಸಾಲು ಅರೋಪಗಳನ್ನು ಮಾಡಿದ್ದಾರೆ. ಅನೈತಿಕ ಸಂಬಂಧ, ಹಣ ಮತ್ತು ಚಿನ್ನ ಕದ್ದ ಆರೋಪ ಸೇರಿದ್ದಂತೆ ರಾಖಿ ಸಾವಂತ್ ಅನೇಕ ಆರೋಪ ಮಾಡಿದ್ದಾರೆ. ಅಂದಹಾಗೆ ಇದು ರಾಖಿ ಸಾವಂತ್‌ಗೆ ಇದು ಎರಡನೇ ಮದುವೆ. ಆದಿಲ್ ಜೊತೆಗಿನ ದಾಂಪತ್ಯ ಕಲಹದ ನಡುವೆಯೂ ಮಾಜಿ ಪತಿ ರಿತೇಶ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ ತಾನು ರಾಖಿ ಪರ ಇರುವುದಾಗಿ ಹೇಳಿದ್ದಾರೆ. 

ರಾಖಿಗೆ ತಾನು ಸದಾ ಬೆಂಬಲವಾಗಿ ನಿಲ್ಲುತ್ತೇನೆ, ಏನೇ ಆಗಲಿ ಅವಳ ಬಳಿ ಇರುತ್ತೇನೆ ಎಂದು ಹೇಳಿದ್ದಾರೆ. ಮೂರು ತಿಂಗಳ ಹಿಂದೆ ರಾಖಿ ತನಗೆ ಕರೆ ಮಾಡಿ  ಎಲ್ಲಾ ವಿವರಿಸಿದ್ದಳು ಎಂದು ಹೇಳಿದ್ದಾರೆ. ತನ್ನನ್ನು ತೊರೆದರೂ ‘ಪ್ರೀತಿ’ಯ ನಿಜವಾದ ಅರ್ಥ ಗೊತ್ತಿರುವುದರಿಂದ ಆಕೆಯ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ರಾಖಿಯ ಕಣ್ಣಲ್ಲಿ ಸತ್ಯವನ್ನು ನೋಡಬಹುದು ಆದರೆ ಅದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಮೂರು ತಿಂಗಳ ಹಿಂದೆಯೇ ರಾಖಿ ಈ ನನಗೆ ಬಗ್ಗೆ ಮಾಹಿತಿ ನೀಡಿದ್ದಳು, ಎಲ್ಲವನ್ನೂ ಹೇಳಿದ್ದಳು. ರಾಖಿ ಬಹಿರಂಗಪಡಿಸಿದ ವಿಷಯಗಳು ಸುಳ್ಳಲ್ಲ' ಎಂದು ಹೇಳಿದರು. 

'ನಾನು MBA, MTech, LLB ಪದವಿಗಳನ್ನು ಹೊಂದಿದ್ದೇನೆ ಮತ್ತು ನಾನು ವೃತ್ತಿಪರವಾಗಿ ಚೆನ್ನಾಗಿದ್ದೇನೆ. ನಾನು ಸ್ವಯಂ ಬೆಳೆದ ವ್ಯಕ್ತಿ. ನಾನು ಯಾವುದಕ್ಕೂ ಕಮ್ಮಿ ಇಲ್ಲ. ನಾನು ಮೋಸ ಹೋಗಿದ್ದೇನೆ ಮತ್ತು ಜನರು ನನ್ನ ತಪ್ಪು ಎಂದು ಭಾವಿಸಿದ್ದಾರೆ. ರಾಖಿ ನಿನ್ನ ಜೊತೆ ನಾನಿದ್ದೇನೆ. ನಿನ್ನ ಸಹೋದರನೂ ನಿನ್ನ ಜೊತೆಗಿದ್ದಾನೆ. ಲವ್ ಜಿಹಾದ್‌ನಲ್ಲಿ ಸಿಕ್ಕಿಹಾಕಿಕೊಳ್ಳುವ ಹುಡುಗಿಯರಿಗೆ ಇದೊಂದು ಪಾಠ. ನಾನು ಯಾವಾಗಲೂ ನಿಮ್ಮ ಪರವಾಗಿ ನಿಲ್ಲುತ್ತೇನೆ' ಎಂದು ಹೇಳಿದ್ದಾರೆ. ಜೊತೆಗೆ ತಮ್ಮ ಹಿಂದಿನ ಸಂಬಂಧದ ಬಗ್ಗೆ ಮಾತನಾಡುವಂತೆ ರಾಖಿ ಸಾವಂತ್‌ಗೆ ಒತ್ತಾಯ ಮಾಡಿದ್ದಾರೆ. 

ಪತಿ ಅರೆಸ್ಟ್‌ ಆಗುತ್ತಿದ್ದಂತೆ ನಡು ರಸ್ತೆಯಲ್ಲಿ ತಲೆ ಸುತ್ತಿ ಬಿದ್ದ ರಾಖಿ ಸಾವಂತ್; ವಿಡಿಯೋ ವೈರಲ್

ಆದಿಲ್ ಅರೆಸ್ಟ್

ಪತಿ ವಿರುದ್ಧ ರಾಖಿ ಸಾವಂತ್ ದೂರು ದಾಖಲಿಸಿದ್ದ ಬೆನ್ನಲ್ಲೇ ಆದಿಲ್ ಖಾನ್‌ನನ್ನು ಪೊಲೀಸರು ಆರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಮುಂಬೈನ ಓಶಿವಾರಾ ಪೊಲೀಸರು ಅರೆಸ್ಟ್ ಮಾಡಿ ಠಾಣೆಗೆ ಕರೆದೊಯ್ದಿ ಬಗ್ಗೆ ರಾಖಿ ಸಾವಂತ್ ಬಹಿರಂಗ ಪಡಿಸಿದರು. ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ತನ್ನ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು. ತಾಯಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತ ಆಸ್ಪತ್ರೆ ದಾಖಲಾಗಿದ್ದರು. ತಾಯಿಯನ್ನು ನೋಡಿಕೊಳ್ಳುವಂತೆ ಆದಿಲ್‌ಗೆ ಹೇಳಿದ್ದೆ, ಆದರೆ ಸರಿಯಾದ ಸಮಯಕ್ಕೆ ತಾಯಿ ಚಿಕಿತ್ಸೆಗೆ ಹಣ ನೀಡಿಲ್ಲ, ಹಣ ಮತ್ತು ಚಿನ್ನ ತೆಗೆದುಕೊಂಡು ಹೋಗಿದ್ದಾರೆ, ತನ್ನ ತಾಯಿ ಸಾವಿಗೆ ಆದಿಲ್ ಕಾರಣ ಎಂದು ಆರೋಪಿಸಿದ್ದರು. 

ಅವರಿಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ, ನನ್ನ ಬಳಿ ಅವರ ಹೋಟೆಲ್ ಬಿಲ್‌ಗಳಿವೆ; ಪತಿ ವಿರುದ್ಧ ರಾಖಿ ಸಾವಂತ್ ಆರೋಪ

ಆದಿಲ್‌ಗೆ ಅನೈತಿಕ ಸಂಬಂಧ ಆರೋಪ

ಆದಿಲ್‌ಗೆ ಅನೈತಿಕ ಸಂಬಂಧವಿದೆ. ಹಾಗಾಗಿ ತನ್ನನ್ನು ದೂರ ತಳ್ಳಿದ್ದಾನೆ ಎಂದು ರಾಖಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆತನ ಗರ್ಲ್‌ಫ್ರೆಂಡ್ ಗಾಗಿ ಆದಿಲ್ ನನಗೆ ಮೋಸ ಮಾಡಿದ ಎಂದು ರಾಖಿ ಕಣ್ಣೀರು ಹಾಕಿದ್ದರು. ಆದಿಲ್ ತನ್ನನ್ನು ಮಾನಸಿಕವಾಗಿ, ದೈಹಿಕವಾಗಿ ಬಳಸಿಕೊಂಡ ಎಂದು 44 ವರ್ಷದ ನಟಿ ರಾಖಿ ಸಾವಂತ್ ಆರೋಪಿಸಿದ್ದರು. 'ಆದಿಲ್ ನನ್ನನ್ನು  ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದಿಲ್ ತನ್ನ ಎಲ್ಲಾ ಹಣವನ್ನು ಬಳಸಿಕೊಂಡಿದ್ದಾನೆ, ಮೈಸೂರಿನಲ್ಲಿ ಆತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಮದುವೆ ಬಳಿಕ ಗೊತ್ತಾಯಿತು' ಎಂದು ರಾಖಿ ಸಾವಂತ್ ಕಿಡಿ ಕಾರಿದ್ದಾರೆ. 'ಅವನು ಬಾಲಿವುಡ್‌ಗೆ ಬರಲು ನನ್ನನ್ನು ಬಳಸಿಕೊಂಡ, ಬಾಲಿವುಡ್‌ನಲ್ಲಿ ಸ್ಟಾರ್ ಆಗಲು ನನ್ನನ್ನು ಏಣಿಯಾಗಿ ಮಾಡಿಕೊಂಡ. ನನ್ನಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡು ಹೋದ. ನನ್ನ ಬಳಿ ಎಲ್ಲ ಪುರಾವೆಗಳಿವೆ. ಅವನು ನನ್ನನ್ನು ಭಾವನಾತ್ಮಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಬಳಸಿಕೊಂಡ. ನಾನು ಮದುವೆ ನಂತರ ಚಿತ್ರಹಿಂಸೆ ಎದುರಿಸಿದ್ದೇನೆ' ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!