ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿದ್ದ ಅವತಾರ್-2 ಸಿನಿಮಾ ಕೊನೆಗೂ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಲ್ಲೂ ಅವತಾರ್-2 ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಬರೋಬ್ಬರಿ 13 ವರ್ಷಗಳ ಬಳಿಕ ಬಂದ ಅವತಾರ್ ಸೀರಿಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಜೇಮ್ಸ್ ಕ್ಯಾಮರೂನ್ ದೃಶ್ಯ ವೈಭವಕ್ಕೆ ಮತ್ತೊಮ್ಮೆ ಫಿದಾ ಆಗಿದ್ದಾರೆ ಅಭಿಮಾನಿಗಳು. ಅವತಾರ್-2 ನೋಡಿ ಸಂಭ್ರಮಿಸುವ ವೇಳೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಸಂಭವಿಸಿದೆ.
ಅಭಿಮಾನಿ ಲಕ್ಷ್ಮೀರೆಡ್ಡಿ ತನ್ನ ಸಹೋದರನ ಜೊತೆ ಅವತಾರ್-2 ನೋಡಲು ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ನೋಡುವಾಗ ಹೃದಯಾಘಾತವಾಗಿದ್ದು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವತಾರ್: ದಿ ವೇ ಆಫ್ ವಾಟರ್ ವೀಕ್ಷಿಸುವಾಗ ಲಕ್ಷ್ಮೀ ರೆಡ್ಡಿ ಚಿತ್ರಮಂದಿರದಲ್ಲೇ ಕುಸಿದು ಬಿದ್ದಿದ್ದಾರೆ ತಕ್ಷಣವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ನಿಧನಹೊಂದಿದ್ದಾರೆ. ಲಕ್ಷ್ಮೀ ರೆಡ್ಡಿ ಅವರು ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವತಾರ್-2 ನೋಡುವಾಗ ಅತಿಯಾದ ಉತ್ಸಾಹದಿಂದ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.
Avatar:The Way of Water; 'ಅವೆಂಜರ್ಸ್ ಎಂಡ್‌ಗೇಮ್' ಕಲೆಕ್ಷನ್ ಬ್ರೇಕ್ ಮಾಡಲು ವಿಫಲವಾದ 'ಅವತಾರ್-2'
ಅಂದಹಾಗೆ ಈ ರೀತಿಯ ಘಟನೆ ಈ ಮೊದಲು ಅಂದರೆ ಅವತಾರ್ ಮೊದಲ ಭಾಗ ರಿಲೀಸ್ ಆದಾಗಲೂ ಸಂಭವಿಸಿತ್ತು. 'ಸಿನಿಮಾ ನೋಡುವಾಗ ಅತಿಯಾದ ಉತ್ಸಾಹದಿಂದ' ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಬಹಿರಂಗಪಡಿಸಿದರು. ಇದೀಗ ಅದೇ ರೀತಿಯ ಘಟನೆ ಆಂಧ್ರ ಪ್ರದೇಶದಲ್ಲಿ ಸಂಭವಿಸಿರುವುದು ದುರದೃಷ್ಟಕರವಾಗಿದೆ.
Avatar2: ವಿಶ್ವಾದ್ಯಂತ ಅವತಾರ್-2 ರಿಲೀಸ್: ಮೊದಲ ದಿನವೇ ಭರ್ಜರಿ ಓಪನಿಂಗ್
'ಅವತಾರ್ ದಿ ವೇ ಆಫ್ ವಾಟರ್' ಬಗ್ಗೆ
ಡಿಸೆಂಬರ್ 16ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ. ಜೇಮ್ಸ್ ಕ್ಯಾಮರೂನ್ ಅವರ ಅವತಾರ್-2 ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಭಾರತದಲ್ಲೂ ಮೊದಲ ದಿನ ಉತ್ತಮ ಗಳಿಕೆ ಮಾಡಿದೆ. ಭಾರತದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಹಾಲಿವುಡ್ ಸಿನಿಮಾ ಇದಾಗಿದೆ. ಅವತಾರ್-2 ಭಾರತದಲ್ಲಿ 2ನೇ ದಿನಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಬಾಚಿಕೊಂಡಿದೆ ಎನ್ನಲಾಗಿದೆ. ಒಂದು ದಶಕದ ನಂತರ ಬಂದಿರುವ ಪಾರ್ಟ್-2 ಅವತಾರ್: ದಿ ವೇ ಆಫ್ ವಾಟರ್ ಚಿತ್ರಕ್ಕೆ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲ ಸಿಕ್ವೇಲ್‌ನಲ್ಲಿ ಕಾಡನ್ನು ತೋರಿಸಲಾಗಿತ್ತು. ಈಗ ನೀರಿನ ಹಿನ್ನಲೆಯಲ್ಲಿ ಸಿನಿಮಾ ಮೂಡಿಬಂದಿರುವುದು ವಿಶೇಷ. 3Dಯಲ್ಲಿ ಮೂಡಿಬಂದ ಈ ಸಿನಿಮಾ ದೊಡ್ಡ ದೃಶ್ಯ ವೈಭವವಾಗಿದೆ. Sam Worthington,Kate Winslet, Zoe Saldaña, Joel David Moore, CCH Pounder ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.