'ಯಶ್ ಈಸ್ ವಾವ್...'; ಶಾರುಖ್ ಖಾನ್ ರಿಯಾಕ್ಷನ್‌ಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಫಿದಾ

Published : Dec 18, 2022, 12:51 PM IST
'ಯಶ್ ಈಸ್ ವಾವ್...'; ಶಾರುಖ್ ಖಾನ್ ರಿಯಾಕ್ಷನ್‌ಗೆ ರಾಕಿಂಗ್ ಸ್ಟಾರ್ ಫ್ಯಾನ್ಸ್ ಫಿದಾ

ಸಾರಾಂಶ

ಪಠಾಣ್ ಸ್ಟಾರ್ ಶಾರುಖ್ ಖಾನ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೇಳಿರುವ ಮಾತು ವೈರಲ್ ಆಗಿದೆ. 

ಬಾಲಿವುಡ್ ಸ್ಟಾರ್ ಶಾರುಖ್​ ಖಾನ್  ಸದ್ಯ‘ಪಠಾಣ್’ ಸಿನಿಮಾದ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಶಾರುಖ್ ಅನೇಕ ವರ್ಷಗಳ ಬಳಿಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಭಾರಿ ನಿರೀಕ್ಷೆಯೊಂದಿಗೆ ಬಂದ ಈ ಹಾಡು ಅಭಿಮಾನಿಗಳ ಹೃದಯ ಗೆದ್ದಿದೆ. ಮತ್ತೊಮ್ಮೆ ಮೋಡಿ ಮಾಡಿದ ಶಾರುಖ್ ಮತ್ತು ದೀಪಿಕಾ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಇನ್ನು ಕೆಲ ವರ್ಗ ಈ ಹಾಡಿನ ವಿರುದ್ಧ ಆಕ್ರೋಶ ಹೋರಹಾಕುತ್ತಿದ್ದಾರೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ. ಈ ಹಾಡನ್ನು ಅಶ್ಲೀಲವಾಗಿ ಚಿತ್ರೀಕರಿಸಲಾಗಿದೆ ಎಂದು ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೂ ಬೇಷರಂ ರಂಗ್ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಬೇಷರಂ ರಂಗ್ ಹಾಡಿನ ವಿವಾದ ನಡುವೆ ಶಾರುಖ್ ಖಾನ್ ಅಭಿಮಾನಿಗಳ ಜೊತೆ ನೇರ ಮಾತುಕತೆಗೆ ಇಳಿದಿದ್ದಾರೆ. 

ಸಾಮಾಜಿಕ ಜಾಲತಾಣದ ಮೂಲಕ ಶಾರುಖ್ ಖಾನ್ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಫ್ಯಾನ್ಸ್ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಹೌದು ಶಾರುಖ್ ಖಾನ್ ಶನಿವಾರ ಟ್ವಿಟರ್‌ನಲ್ಲಿ ನಡೆದ ‘ಆಸ್ಕ್ ಮಿ ಎನಿಥಿಂಗ್’​ ಸೆಷನ್‌ ಮಾಡಿದ್ದರು. ಶಾರುಖ್ ಖಾನ್‌ಗೆ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಬಂದಿದೆ. ಕೆಲವು ಆಯ್ದ ಅಭಿಮಾನಿಗಳ ಪ್ರಶ್ನೆಗಳಿಗೆ ಶಾರುಖ್ ಉತ್ತರ ನೀಡಿದ್ದಾರೆ. ಕಿಂಗ್ ಖಾನ್ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಅಭಿಮಾನಿಯೊಬ್ಬ ಎಸ್ ಆರ್ ಕೆಗೆ ಸ್ಯಾಂಡಲ್ ವುಡ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾಡಿದ್ದಾರೆ. 

ಯಶ್ ಬಗ್ಗೆ ಶಾರುಖ್ ರಿಯಾಕ್ಷನ್  

‘ಆಸ್ಕ್ ಮಿ ಎನಿಥಿಂಗ್’​ ಸೆಷನ್‌ಗೆ ಪ್ರಸ್ನೆ ಮಾಡಿದ ಫ್ಯಾನ್,'ಸರ್ ನೀವು ಕೆಜಿಎಫ್-2 ಸಿನಿಮಾ ನೋಡಿದ್ದೀರಾ. ಯಶ್ ಬಗ್ಗೆ ಒಂದು ಪದದಲ್ಲಿ ಹೇಳಿ' ಎಂದು ಕೇಳಿದ್ದಾರೆ. ಅಭಿಮಾನಿ ಪ್ರಶ್ನೆಗೆ ಶಾರುಖ್ ನೀಡಿದ ಉತ್ತರ ವೈರಲ್ ಆಗಿದೆ. ಹೌದು ಶಾರುಖ್ ಖಾನ್, 'ಯಶ್ ಈಸ್ ವಾವ್...' ಎಂದು ಹೇಳಿದ್ದಾರೆ. ಇದು ಯಶ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ.

ರಾಮ್ ಚರಣ್ ಬಗ್ಗೆ ಹೇಳಿದ್ದೇನು?

ಮತ್ತೋರ್ವ ಅಭಿಮಾನಿ ಆರ್ ಆರ್ ಆರ್ ಸ್ಟಾರ್ ತೆಲುಗು ನಟ ರಾಮ್ ಚರಣ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 'ರಾಮ್ ಚರಣ್ ಬಗ್ಗೆ ಒಂದು ಮಾತು' ಎಂದು ಕೇಳಿದ್ದಾರೆ. ಅಭಿಮಾನಿ ಪ್ರಶ್ನೆಗೆ ಶಾರುಖ್ ಖಾನ್, 'ಅವರು ನನ್ನ ಹಳೆಯ ಗೆಳೆಯ. ನನ್ನ ಮಕ್ಕಳಿಗೆ ತುಂಬಾ ಇಷ್ಟ' ಎಂದು ಹೇಳಿದ್ದಾರೆ.

ಇನ್ನೂ ಅನೇಕ ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರ ನೀಡಿದ್ದಾರೆ. ಸಲ್ಮಾನ್ ಖಾನ್ ನಟನೆಯ ಇಷ್ಟದ ಸಿನಿಮಾ ಯಾವುದು ಎಂದು ಸಹ ಉತ್ತರ ನೀಡಿದ್ದಾರೆ. ಸಲ್ಮಾನ್ ಖಾನ್ ಅವರ ಬಜರಂಗಿ ಬಾಯಿಜಾನ್ ಸಿನಿಮಾ ತುಂಬಾ ಇಷ್ಟ ಎಂದು ಹೇಳಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಪಠಾಣ್ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಅಭಿಮಾನಿಯೊಬ್ಬರು ಪಠಾಣ್ ಸಿನಿಮಾದಲ್ಲಿ ದೇಶಭಕ್ತಿ ಬಗ್ಗೆ ಇದಿಯಾ ಎಂದು ಕೇಳಿದ್ದಕ್ಕೆ ಉತ್ತರ ನೀಡಿದ್ದಾರೆ. ಪಠಾಣ್ ಕೂಡ ಒಬ್ಬ ದೇಶ ಭಕ್ತ ಎಂದು ಹೇಳಿದ್ದಾರೆ. 

ಪಠಾಣ್ ಸಿನಿಮಾದ ಬಗ್ಗೆ

ಅಂದಹಾಗೆ ಪಠಾಣ್ ಹಿಂದಿ ಜೊತೆಗೆ ತೆಲುಗು ಹಾಗೂ ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಈ ಸಿನಿಮಾದ ಮೇಲೆ ಅಭಿಮಾನಿಗಳ ಹೆೇಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೋ ಹಾಗೆ ಶಾರುಖ್ ಕೂಡ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಗ್ಯಾಪ್‌ನ ಬಳಿಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಲ್ಲದೆ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್​ ಖಾನ್​ ಅವರಿಗಿದೆ. ಈ ಚಿತ್ರಕ್ಕಾಗಿ ಶಾರುಖ್ ತುಂಬಾ ಶ್ರಮಪಟ್ಟಿದ್ದು ದೇಹ ಹುರಿಗೊಳಿಸಿ 6 ಪ್ಯಾಕ್​​ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಹಾಡಿನಲ್ಲಿ ಶಾರುಖ್ ಅವರ 6 ಪ್ಯಾಕ್ ದರ್ಶನ ಆಗಿದೆ. ಈ ವಯಸ್ಸಿನಲ್ಲೂ ಶಾರುಖ್ ಫಿಟ್ನೆಸ್ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್