ಹನುಮಂತನ ಸೀಟ್‌ನಲ್ಲಿ ಕುಳಿತು 'ಆದಿಪುರುಷ್' ವೀಕ್ಷಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ: ವಿಡಿಯೋ ವೈರಲ್

By Shruthi Krishna  |  First Published Jun 16, 2023, 2:30 PM IST

ಹನುಮಂತನಿಗಾಗಿ ಕಾಯ್ದಿರಿಸಿದ ಸೀಟ್‌ನಲ್ಲಿ ಕುಳಿತು 'ಆದಿಪುರುಷ್' ವೀಕ್ಷಿಸಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದೆ. 


ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿದೆ. ರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಸೀತೆಯ ಪಾತ್ರದಲ್ಲಿ ಬಾಲಿವುಡ್ ನಟಿ ಕೃತಿ ಸನೊನ್ ಮಿಂಚಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕರು ಕಳಪೆ ವಿಎಕ್ಸ್‌ಎಫ್ ಎಂದು ಜರಿಯುತ್ತಿದ್ದಾರೆ. ಈ ನಡುವೆ ಸಿನಿಮಾತಂಡ ಆದಿಪುರುಷ್ ಪ್ರದರ್ಶನ ಕಾಣುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಹನುಮಾನ್‌ಗಾಗಿ ಸೀಟು ಕಾಯ್ದಿರಿಸುವಂತೆ ಸಿನಿಮಾತಂಡ ಹೇಳಿತ್ತು. ಅದರಂತೆ ಇಂದು ಸಿನಿಮಾ ರಿಲೀಸ್ ಆದ ಪ್ರತಿ ಚಿತ್ರಮಂದಿರಗಳಲ್ಲೂ ಮಾಲಿಕರು ಹುನುಮಾನ್‌ಗಾಗಿ ಒಂದು ಸೀಟನ್ನು ಕಾಯ್ದಿರಿಸಿದ್ದಾರೆ. ಅನೇಕ ಕಡೆ ಆಂಜನೇಯನ ಫೋಟೋವನ್ನು ಇಡಲಾಗಿದೆ.

ಆದಿಪುರುಷ್ ಸಿನಿಮಾ ಅನೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಟೆಕೆಟ್ ಸಿಗದೆ ಪರದಾಡುತ್ತಿದ್ದಾರೆ. ಚಿತ್ರಮಂದಿರಗಳು ತುಂಬಿದ ಕಾರಣ ಆಂಜನೇಯನಿಗೆ ಮೀಸಲಿಟ್ಟ ಆಸನದ ಮೇಲೆ ಕುಳಿತಿದ್ದಿದ್ದಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಲಾಗಿದೆ.  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. 

Tap to resize

Latest Videos

ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಈ ಘಟನೆ ನಡೆದಿದೆ. ಚಿತ್ರಮಂದಿರ ಹೌಸ್​ಫುಲ್ ಇದ್ದಿದ್ದರಿಂದ ವ್ಯಕ್ತಿಯೋರ್ವ ಹನುಮಂತನಿಗೆ ಕಾಯ್ದಿರಿಸಿದ ಸೀಟ್ ಮೇಲೆ ಕುಳಿತಿದ್ದಾನೆ. ಇದನ್ನು ಸಹಿಸದ ಉಳಿದವರು ಆತನಮೇಲೆ ದಾಳಿ ಮಾಡಲಾಗಿದೆ. ಕೆಲವರು ಈ ಹಲ್ಲೆಯನ್ನು ತಪ್ಪಿಸಲು ಪ್ರಯತ್ನಿಸಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

A person was attacked by Prabhas fans for sitting in a seat allocated to Lord Hanuman in Bramarambha theatre Hyderabad in the early hours of this morning. (Audio muted due to abusive words) pic.twitter.com/2dkUhQFNVi

— Kartheek Naaga (@kartheeknaaga)

6 ವರ್ಷಗಳಿಂದ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ ಸೌತ್‌ ಸೂಪರ್ ಸ್ಟಾರ್ ಪ್ರಭಾಸ್!

ತಿರುಪತಿಯಲ್ಲಿ ಚಿತ್ರದ ಟ್ರೇಲರ್ ಕಾರ್ಯಕ್ರಮದ ಸಂದರ್ಭದಲ್ಲಿ ನಿರ್ದೇಶಕ ಓಂ ರಾವುತ್ ಹನುಮಂತನಿಗಾಗಿ ಸೀಟ್ ಒಂದನ್ನು ಮೀಸಲಿಡುವ ಬಗ್ಗೆ ತಂಡ ಘೋಷಣೆ ಮಾಡಿತು. ರಾಮನ ಆರಾಧನೆ ನಡೆದರೆ ಆ ಸ್ಥಳದಲ್ಲಿ ಹನುಮಂತ ಬರುತ್ತಾನೆ ಎಂಬ ನಂಬಿಕೆ ಅನೇಕರದ್ದು. ‘ಆದಿಪುರುಷ್​’ ಸಿನಿಮಾ ಪ್ರಸಾರ ಆಗುವಾಗ ಚಿತ್ರಮಂದಿರಕ್ಕೆ ಹನುಮಂತ ಬರುತ್ತಾನೆ ಎಂಬ ನಂಬಿಕೆ ಚಿತ್ರತಂಡದ್ದು. 

Adipurush Twitter Review: ರಾಮನಾಗಿ ಪ್ರಭಾಸ್ ಇಷ್ಟವಾದ್ರ? ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಹೇಳಿದ್ದೇನು?
 
ಆದಿಪುರುಷ್ ಸಿನಿಮಾ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಪ್ರಭಾಸ್, ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇಂದು ಸಿನಿಮಾ ರಿಲೀಸ್ ಆಗುವ ಮೊದಲು ಸೀಟಿನ ಮೇಲೆ ಹನುಂತನ ಫೋಟೋವನ್ನುಇರಿಸಿ ವಿಶೇಷ ಪೂಜೆ ಮಾಡಲಾಗಿದೆ. ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. 

click me!