21ರ ಅವನೀತ್ ಜೊತೆ 49ರ ನವಾಜುದ್ದೀನ್ ಸಿದ್ದಿಕ್ಕಿ ಲಿಪ್‌ ಕಿಸ್; ಕಂಗನಾ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ

Published : Jun 16, 2023, 01:50 PM ISTUpdated : Jun 16, 2023, 03:41 PM IST
21ರ ಅವನೀತ್ ಜೊತೆ 49ರ ನವಾಜುದ್ದೀನ್ ಸಿದ್ದಿಕ್ಕಿ ಲಿಪ್‌ ಕಿಸ್; ಕಂಗನಾ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ

ಸಾರಾಂಶ

21 ವರ್ಷದ ಅವನೀತ್ ಕೌರ್ ಜೊತೆ 49ರ ನಟ ನವಾಜುದ್ದೀನ್ ಸಿದ್ದಿಕ್ಕಿ ಲಿಪ್‌ ಕಿಸ್ ವಿಡಿಯೋ ವೈರಲ್ ಆಗಿದೆ. ಕಂಗನಾ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ ಹೊರಹಾಕುತ್ತಿದ್ದಾರೆ. 

ಬ್ಯಾಕ್ ಟು ಬ್ಯಾಕ್ ಸೋಲಿನಲ್ಲಿರುವ ನಟಿ ಕಂಗನಾ ರಣಾವತ್ ಇದೀಗ ಮತ್ತೊಂದು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಆದರೆ ನಟಿಯಾಗಿ ಅಲ್ಲ ನಿರ್ಮಾಪಕಿಯಾಗಿ. ಹೌದು ಕಂಗನಾ ನಿರ್ಮಾಣದಲ್ಲಿ ಮೂಡಿ ಬಂದಿರುವ ಟಿಕು ವೆಡ್ಸ್ ಶೇರು ಸಿನಿಮಾ ಚಿತ್ರಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆದರೆ ರಿಲೀಸ್‌ಗೂ ಮೊದಲೇ ಈ ಸಿನಿಮಾ ಈಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ನಟಿ ಅವನೀತ್ ಕೌರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರ ಲಿಪ್‌ಲಾಕ್ ದೃಶ್ಯವೀಗ ವೈರಲ್ ಆಗಿದ್ದು ನೆಟ್ಟಿಗರು ಗರಂ ಆಗಿದ್ದಾರೆ. ಕಂಗನಾ ಸಿನಿಮಾದಲ್ಲಿ ಇದೆಂತಾ ದೃಶ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಸದ್ಯ  ಟಿಕು ವೆಡ್ಸ್ ಶೇರು ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ನೋಡಿದ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. 49 ವರ್ಷದ ನವಾಜುದ್ದೀನ್ ಸಿದ್ದಿಕಿ ಮತ್ತು 21ರ ಹರೆಯದ ನಟಿ ಅವವನೀತ್ ಕೌರ್ ಜೊತೆ ಇಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಹಿಡಿಸಿಲ್ಲ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು, ನವಾಜುದ್ದೀನ್ ಸಿದ್ದಿಕಿ ಅರ ಸಿನಿಮಾ ಆಯ್ಕೆಗೆ ಏನಾಗಿದೆ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಸಿನಿಮಾ ಪ್ರಾರಂಭವಾದಾಗ ನವನೀತ್‌ಗೆ ಇನ್ನು 19 ಅಥವಾ 20 ವರ್ಷ ಅಷ್ಟೆ. ಆದರೆ ಈ ಸಿನಿಮಾದಲ್ಲಿ ಹೆಚ್ಚು ಹಸಿಬಿಸಿ ದೃಶ್ಯಗಳಿವೆ' ಎಂದು ಹೇಳಿದ್ದಾರೆ.  

80 ಸೀರೆ, 6 ತಿಂಗಳು: ನವಾಜುದ್ದೀನ್ ಸಿದ್ದಿಕಿ ಮಂಗಳಮುಖಿ ಪಾತ್ರದ ಲುಕ್ ಫೈನಲ್‌ಗೆ ಹರಸಾಹಸ

ಟಿಕು ವೆಡ್ಸ್ ಶೇರು ಮೂಲಕ ನಟಿ ಅವನೀತ್ ಕೌರ್ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಪ್ರಮೋಷನ್ ನಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ನಟಿ ಕಂಗನಾ ಕೂಡ ಎಲ್ಲಾ ಕಡೆ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಸಿನಿಮಾದ  ಟ್ರೈಲರ್ ನೋಡಿ ನಟಿ ಅವನೀತ್ ಸಿಕ್ಕಾಪಟ್ಟೆ ಭಾವುಕರಾಗಿದ್ದರು. ಮೊದಲ ಸಿನಿಮಾ ಮೂಲಕ ಸಿನಿ ಅಭಿಮಾನಿಗಳ ಮುಂದೆ ಬರ್ತಿರುವ ನವನೀತ್ ಸಿಕ್ಕಾಪಟ್ಟೆ ಎಕ್ಸಾಯಿಟ್ ಆಗಿದ್ದಾರೆ. ಜೊತೆಗೆ ಅಕಾಶ ನೀಡಿದ ಕಂಗನಾಗೆ ಧನ್ಯವಾದ ತಿಳಿಸಿದರು. 

Viral Video: ಕಂಗನಾ ರಣಾವತ್​ ಕೊನೆಗೂ ಕೊಟ್ರು ಮದ್ವೆ ಗುಡ್​ ನ್ಯೂಸ್-​ ಯಾರೀ ಶೇರು?

ಟಿಕು ವೆಡ್ಸ್ ಶೇರು ಸಾಯಿ ಕಬೀರ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಅವನೀತ್ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 23 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಚಿತ್ರವು ಪ್ರೀಮಿಯರ್ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?