ಮಲ್ಲಿಕಾ ಶೆರಾವತ್ ಹುಟ್ಟಿದಾಗ ಅವರ ಮನೆಯವರು ತುಂಬಾ ಬೇಜಾರಾಗಿದ್ರಂತೆ. ಅವರ ಅಪ್ಪಅಮ್ಮ ತುಂಬಾ ದುಃಖದಲ್ಲಿದ್ರಂತೆ. ಹುಡುಗಿ ಅಂತ ತುಂಬಾ ತಾರತಮ್ಯ ಮಾಡ್ತಿದ್ರಂತೆ ಅವರ ಮನೆಯವರು.
ಫೇಮಸ್ ನಟಿ ಮಲ್ಲಿಕಾ ಶೆರಾವತ್ ಇತ್ತೀಚೆಗೆ ತಮ್ಮ ಹೊಸ ಸಿನಿಮಾ 'ವಿಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ಪ್ರಮೋಷನ್‌ನಲ್ಲಿ ಬ್ಯುಸಿ ಇದ್ದಾರೆ. ಈ ವೇಳೆ, ಅವರು ಹುಟ್ಟಿದಾಗ ಮನೆಯವರೆಲ್ಲಾ ಖಿನ್ನತೆಗೆ ಒಳಗಾಗಿದ್ದರು ಅಂತ ಹೇಳಿದ್ದಾರೆ. ಜೊತೆಗೆ, ಹುಡುಗಿ ಅಂತ ತಮ್ಮ ಮನೆಯವರು ತುಂಬಾ ತಾರತಮ್ಯ ಮಾಡ್ತಿದ್ರು ಅಂತಲೂ ಹೇಳಿದ್ದಾರೆ.
'ನನಗೆ ಯಾರ ಸಪೋರ್ಟ್ ಸಿಕ್ಕಿಲ್ಲ. ಅಮ್ಮನಿಂದಲೂ ಅಪ್ಪನಿಂದಲೂ ಸಿಕ್ಕಿಲ್ಲ. ಮನೆಯವರು ಯಾವತ್ತೂ ನನ್ನ ಪರ ಇರ್ಲಿಲ್ಲ. ನನ್ನ ಮತ್ತು ನನ್ನ ಅಣ್ಣನ ನಡುವೆ ತುಂಬಾ ವ್ಯತ್ಯಾಸ ತೋರಿಸ್ತಿದ್ರು. ನಾನು ಯಾಕೆ ಹುಡುಗಿ ಅಂತ ಹುಟ್ಟಿದೆ ಅಂತ ತುಂಬಾ ಬೇಜಾರಾಗ್ತಿತ್ತು. ಚಿಕ್ಕ ವಯಸ್ಸಲ್ಲಿ ಅರ್ಥ ಆಗ್ತಿರ್ಲಿಲ್ಲ, ಆದ್ರೆ ಈಗ ಅರ್ಥ ಆಗ್ತಿದೆ. ಹುಡುಗ ಅಂದ್ರೆ ವಿದೇಶಕ್ಕೆ ಕಳಿಸ್ತಾರೆ, ಓದಿಸ್ತಾರೆ, ದುಡ್ಡು ಹಾಕ್ತಾರೆ. ಮನೆಯ ಎಲ್ಲಾ ಆಸ್ತಿ ಹುಡುಗನಿಗೆ, ಮೊಮ್ಮಗನಿಗೆ. ಹುಡುಗಿಯರ ಬಗ್ಗೆ ಏನು? ಅವರು ಮದುವೆ ಆಗ್ತಾರೆ, ಅವರು ಭಾರ ಅಂತ.' ಎಂದು ಮಲ್ಲಿಕಾ ಹೇಳಿದ್ದಾರೆ.
ಬೋನಿ ಕಪೂರ್‌ಗೂ ಮುನ್ನ ವಿವಾಹಿತ ನಟನೊಂದಿಗೆ ಶ್ರೀದೇವಿ ಸೀಕ್ರೆಟ್ ಮದುವೆ, ವಿಷ್ಯ ತಿಳಿದು ನಟನ ಪತ್ನಿ ಸಾಯಲು ಯತ್ನ!
ಮಲ್ಲಿಕಾ ಹುಟ್ಟಿದ್ದಕ್ಕೆ ಅಮ್ಮ ಖಿನ್ನತೆಗೆ ಒಳಗಾಗಿದ್ರಂತೆ: ಮಲ್ಲಿಕಾ ಮುಂದುವರಿದು ಹೇಳಿದ್ದಾರೆ, 'ಇದೆಲ್ಲಾ ನೋಡಿ ನನಗೆ ತುಂಬಾ ಬೇಜಾರಾಗ್ತಿತ್ತು. ಆದ್ರೆ ನಾನೊಬ್ಬಳೇ ಅಲ್ಲ, ನಮ್ಮೂರಿನ ಎಲ್ಲಾ ಹುಡುಗಿಯರಿಗೂ ಇದೇ ಪರಿಸ್ಥಿತಿ ಅಂತ ಗೊತ್ತಾಯ್ತು. ನನ್ನ ಅಪ್ಪಅಮ್ಮ ನನಗೆ ಎಲ್ಲಾ ಕೊಟ್ರು, ಒಡ್ಡು ಓದಿಸ್ದ್ರು, ಆದ್ರೆ ಒಳ್ಳೆ ಯೋಚನೆ, ಸ್ವಾತಂತ್ರ್ಯ ಕೊಡ್ಲಿಲ್ಲ. ನನ್ನನ್ನ ಸರಿಯಾಗಿ ಬೆಳೆಸಲಿಲ್ಲ, ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನ ಮಾಡ್ಲಿಲ್ಲ. ನಾನು ಯಾರೂ ಗೊತ್ತಿಲ್ಲದ ಹಾಗೆ ತುಂಬಾ ಆಟ ಆಡ್ತಿದ್ದೆ. ಯಾಕಂದ್ರೆ ಮನೆಯವರು ನನ್ನ ಆಟ ಆಡೋಕೆ ಬಿಡ್ತಿರ್ಲಿಲ್ಲ. ಯಾರು ನಿನ್ನ ಮದುವೆ ಆಗ್ತಾರೆ ಅಂತಿದ್ರು. ನನ್ನ ಮೇಲೆ ತುಂಬಾ ನಿರ್ಬಂಧ ಇತ್ತು. ನಾನು ಹುಟ್ಟಿದಾಗ ಮನೆಯಲ್ಲಿ ಮೌನ ಆವರಿಸಿತ್ತು. ನನ್ನ ಅಮ್ಮ ಖಿನ್ನತೆಗೆ ಒಳಗಾಗಿದ್ರು ಅಂತ ನನಗೆ ಗೊತ್ತು.'
ಸಿಲ್ಸಿಲಾದಲ್ಲಿ ಬಳಿಕ ಅಮಿತಾಬ್ ಜೊತೆ ಸಡನ್ ಆಗಿ ರೇಖಾ ನಟನೆ ನಿಲ್ಲಿಸಿದ್ದೇಕೆ?
ನನ್ನ ಪೋಷಕರು ನನ್ನ ಮತ್ತು ನನ್ನ ಸಹೋದರನ ನಡುವೆ ತುಂಬಾ ತಾರತಮ್ಯ ಮಾಡುತ್ತಿದ್ದರು. ನಾನು ಅದರ ಬಗ್ಗೆ ತುಂಬಾ ಕೆಟ್ಟದಾಗಿ ಭಾವಿಸುತ್ತಿದ್ದೆ, ಆದರೆ ನಾನು ಮಾತ್ರವಲ್ಲ, ನನ್ನ ಹಳ್ಳಿಯ ಎಲ್ಲಾ ಹುಡುಗಿಯರು ಈ ರೀತಿಯ ತಾರತಮ್ಯ ಮತ್ತು ಅನ್ಯಾಯವನ್ನು ಅನುಭವಿಸುತ್ತಿದ್ದಾರೆ ಎಂದು ಬಳಿಕ ಅರಿತುಕೊಂಡೆ. ನನ್ನ ಪೋಷಕರು ನನಗೆ ಎಲ್ಲವನ್ನೂ ನೀಡಿದರು. ಉತ್ತಮ ಶಿಕ್ಷಣ, ಆದರೆ ಮುಕ್ತ ಮನಸ್ಥಿತಿ ಅಥವಾ ಒಳ್ಳೆಯ ಆಲೋಚನೆಗಳನ್ನು ನೀಡಲಿಲ್ಲ. ಅವರು ನನಗೆ ಸ್ವಾತಂತ್ರ್ಯವನ್ನು ನೀಡಲಿಲ್ಲ. ಅವರು ನನ್ನನ್ನು ಬೆಳೆಸಲಿಲ್ಲ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ನಾನು ರಹಸ್ಯವಾಗಿ ಬಹಳಷ್ಟು ಕ್ರೀಡೆಗಳನ್ನು ಆಡುತ್ತಿದ್ದೆ, ಏಕೆಂದರೆ ನನ್ನ ಮನೆಯವರು ನನಗೆ ಅವಕಾಶ ನೀಡಲಿಲ್ಲ, ಹುಡುಗಿಯರು ಪುರುಷರಂತಿರಬಾರದು ಎಂದು ಬೈಯುತ್ತಿದ್ದರು ಎಂದಿದ್ದಾರೆ.
ಮಲ್ಲಿಕಾ ಅವರು ಗೋವಿಂದ್ ಮೆನನ್ ಅವರ ಖ್ವಾಹಿಶ್ (2003) ಚಿತ್ರದೊಂದಿಗೆ ಹಿಮಾಂಶು ಮಲಿಕ್ ಜೊತೆಯಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಮಹೇಶ್ ಭಟ್ ನಿರ್ಮಿಸಿದ ಅನುರಾಗ್ ಬಸು ಅವರ ಮರ್ಡರ್ (2004) ಚಿತ್ರದಲ್ಲಿ ಖ್ಯಾತಿ ಗಳಿಸಿದರು. ಇಮ್ರಾನ್ ಹಶ್ಮಿ ಮತ್ತು ಅಶ್ಮಿತ್ ಪಟೇಲ್ ಸಹ-ನಟಿಸಿದರು. ನಂತರ ಪ್ಯಾರ್ ಕೆ ಸೈಡ್ ಎಫೆಕ್ಟ್ಸ್ (2006), ವೆಲ್ಕಮ್ (2007), ಡರ್ಟಿ ಪಾಲಿಟಿಕ್ಸ್ (2015) ಮತ್ತು RK/RKay (2022) ನಂತಹ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.