ಬಾಲಿವುಡ್ ಸೂಪರ್ ಸ್ಟಾರ್ ಗಳ ಗ್ಯಾಂಗೇ ಸಿಂಗಂ ಅಗೇನ್ ನಲ್ಲಿ ನೋಡಲು ಸಿಗ್ತಿದೆ. ಬಿಗ್ ಬಜೆಟ್ ಸಿನಿಮಾದಲ್ಲಿ ಸ್ಟಾರ್ಸ್ ಸಂಭಾವನೆ ಕಡಿಮೆ ಏನಿಲ್ಲ. ಅಜಯ್ ದೇವಗನ್, ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್, ದೀಪಿಕಾ ಇವರಲ್ಲಿ ಯಾರಿಗೆ ಸಿಕ್ಕಿದೆ ಹೆಚ್ಚು ಸಂಭಾವನೆ ಗೊತ್ತಾ?
ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ ಸಿಂಗಂ ಅಗೇನ್ (Singam Again) ಥಿಯೇಟರ್ ಗೆ ಅಪ್ಪಳಿಸಲು ಸಿದ್ಧವಾಗಿದೆ. ರೋಹಿತ್ ಶೆಟ್ಟಿ (Rohit Shetty) ನಿರ್ದೇಶನದ ಸಿನಿಮಾ ಸಿಂಗಂ ಅಗೇನ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಐದು ನಿಮಿಷಗಳ ಟ್ರೈಲರ್‌ನಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಣವೀರ್ ಸಿಂಗ್, ಜಾಕಿ ಶ್ರಾಫ್ ಮತ್ತು ಅರ್ಜುನ್ ಕಪೂರ್ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ಎಲ್ಲಾ ದೊಡ್ಡ ಮುಖಗಳು ಈ ಚಿತ್ರದಲ್ಲಿವೆ. ಬಿಗ್ ಬಜೆಟ್ ಸಿನಿಮಾಕ್ಕೆ ರೋಹಿತ್ ಶೆಟ್ಟಿ ಕೈಬಿಚ್ಚಿ ಖರ್ಚು ಮಾಡಿದ್ದಾರೆ. ಸೂಪರ್ ಸ್ಟಾರ್ ಗಳಿಗೆ ಕೋಟಿ ಕೋಟಿಯಲ್ಲಿ ಸಂಭಾವನೆ ಸಿಕ್ಕಿದೆ. ಯಾವೆಲ್ಲ ಸ್ಟಾರ್ಸ್ ಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಅಜಯ್ ದೇವಗನ್ (Ajay Devgn) – ಅಕ್ಷಯ್ ಕುಮಾರ್ (Akshay Kumar) ಯಾರಿಗೆ ಸಿಕ್ಕಿದೆ ಹೆಚ್ಚು ಸಂಭಾವನೆ? : ಸಿಂಗಮ್ ಅಗೇನ್ ಸಿನಿಮಾಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದವರು ಅಜಯ್ ದೇವಗನ್. ವರದಿಯ ಪ್ರಕಾರ, ಅಜಯ್ ದೇವಗನ್ ಚಿತ್ರಕ್ಕಾಗಿ 35 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಬರ್ತಾರೆ. ಅಕ್ಷಯ್ ಕುಮಾರ್ ಈ ಚಿತ್ರಕ್ಕೆ 20 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
ಮಲ್ಲಿಕಾ ಶೆರಾವತ್ ಹೊಟ್ಟೆ ಮೇಲೆ ರೊಟ್ಟಿ ಬೇಯಿಸಲು ಮುಂದಾಗಿದ್ದ ಟಾಲಿವುಡ್ ನಿರ್ದೇಶಕರು..!
ಈ ಸಿನಿಮಾದಲ್ಲಿ ಬಾಲಿವುಡ್ ನ ಇಬ್ಬರು ದಿಗ್ಗಜ ನಟಿಯರು ಕಾಣಿಸಿಕೊಂಡಿದ್ದಾರೆ. ಈಗಷ್ಟೇ ಅಮ್ಮನಾಗಿರುವ ದೀಪಿಕಾ ಹಾಗೂ ಎರಡು ಮಕ್ಕಳ ತಾಯಿ ಕರೀನಾ ಕಪೂರ್ ಖಾನ್. ಇವರಿಬ್ಬರಲ್ಲಿ ಯಾರಿಗೆ ಹೆಚ್ಚು ಸಂಭಾವನೆ ಎಂಬ ಪ್ರಶ್ನೆ ಬರೋದು ಸಾಮಾನ್ಯ. ಬಹುತೇಕರು ಕರೀನಾಗಿಂತ ದೀಪಿ ಹೆಚ್ಚು ಸಂಬಳ ಪಡೆದಿರ್ತಾರೆ ಎಂದೇ ಭಾವಿಸಿದ್ದಾರೆ. ಆದ್ರೆ ನಿಮ್ಮ ಗೆಸ್ ತಪ್ಪು. ಡಿಂಪಲ್ ಬೆಡಗಿ ದೀಪಿಕಾಗಿಂತ ಕರೀನಾ ಟಾಪ್ ನಲ್ಲಿದ್ದಾರೆ. ಕರೀನಾ ಸಂಭಾವನೆ, ದೀಪಿಕಾಗಿಂತ ಹೆಚ್ಚಿದೆ.
ದೀಪಿಕಾ ಪಡುಕೋಣೆ (Deepika Padukone) – ಕರೀನಾ ಕಪೂರ್ ಖಾನ್ (Kareena Kapoor Khan) ಗೆ ಸಿಕ್ಕ ಸಂಭಾವನೆ ಎಷ್ಟು? : ಲೇಡಿ ಸಿಂಗಂ ದೀಪಿಕಾ ಪಡುಕೋಣೆ ಈ ಚಿತ್ರಕ್ಕಾಗಿ 6 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಅದೇ ಕರೀನಾ ಕಪೂರ್ ಶುಲ್ಕ 10 ಕೋಟಿ ರೂಪಾಯಿ ಎನ್ನಲಾಗಿದೆ.
ಜಾಕಿಶ್ರಾಫ್ ಶುಲ್ಕಕ್ಕಿಂತ ಟೈಗರ್ ಸಂಭಾವನೆ ಹೆಚ್ಚು : ಚಿತ್ರದಲ್ಲಿ ಜಾಕಿ ಶ್ರಾಫ್ ಗೆ 2 ಕೋಟಿ ಸಿಕ್ಕಿದ್ರೆ, ಟೈಗನ್ ಶ್ರಾಫ್ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ವಿಲನ್ ಪಾತ್ರದಲ್ಲಿ ಅರ್ಜುನ್ ಕಪೂರ್ : ಇನ್ನು ಚಿತ್ರದಲ್ಲಿ ಅರ್ಜುನ್ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಅವರು ಮಿಂಚಲಿದ್ದಾರೆ. ಸಿಂಗಮ್ ಅಗೇನ್ ಸಿನಿಮಾಕ್ಕೆ ಅರ್ಜುನ್ ಕಪೂರ್ಗೆ 6 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ. ದೀಪಿಕಾ ಪಡುಕೋಣೆ ಪತಿ ಹಾಗೂ ಬಾಲಿವುಡ್ ಟಾಪ್ ಆಕ್ಟರ್ ರಣವೀರ್ ಸಿಂಗ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಅವರು ಬರೋಬ್ಬರಿ 10 ಕೋಟಿ ರೂಪಾಯಿ ಶುಲ್ಕ ಪಡೆದಿದ್ದಾರೆ.
ಮಗನ ಮಾಜಿ ಗರ್ಲ್ ಫ್ರೆಂಡ್ ಜೊತೆ ಜಯಾ ಹರಟೆ, ನಾಚಿಕೆಯಾಗಲ್ವಾ ಎಂದ ಐಶ್ ಫ್ಯಾನ್ಸ್
ಬಿಡುಗಡೆಯಾದ ಟ್ರೈಲರ್ ಪ್ರಕಾರ, ಅಪಹರಣಕ್ಕೊಳಗಾಗುವ ಪತ್ನಿ ಕರೀನಾ ಕಪೂರ್ ರಕ್ಷಣೆ ಮಾಡಲು ಸಿಂಗಮ್ ಅಜಯ್ ದೇವಗನ್ ಜೊತೆ ಇಡೀ ತಂಡ ಹೋರಾಡುವ ಕಥೆ ಇದಾಗಿದೆ. ಟ್ರೈಲರ್ ನಲ್ಲಿ ದೀಪಿಕಾ, ಲೇಡಿ ಸಿಂಗಮ್ ಅನ್ನೋದನ್ನು ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಚಿತ್ರದ ಟ್ರೈಲರ್ ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನವೆಂಬರ್ ಒಂದರಂದು ಸಿನಿಮಾ ತೆರೆಗೆ ಬರಲಿದ್ದು, ಬಾಕ್ಸ್ ಆಫೀಸ್ ಕೊಳ್ಳೆಹೊಡೆಯುತ್ತಾ ಕಾದು ನೋಡ್ಬೇಕು.