ಸೊಂಟದ ಮೇಲೆ ಕೈಹಾಕುವಂತೆ ಗಂಡನಿಗೆ ತಿವಿದು ಕ್ಯಾಮೆರಾಕ್ಕೆ ಸಿಕ್ಕಿಬಿದ್ದ ನಟಿ ಕಾಜೋಲ್​! ವಿಡಿಯೋಗೆ ಫನ್ನಿ ಕಮೆಂಟ್ಸ್​

By Suchethana D  |  First Published Oct 12, 2024, 4:17 PM IST

ತನ್ನ ಸೊಂಟದ ಮೇಲೆ ಕೈ ಹಾಕುವಂತೆ ಗಂಡ ಅಜಯ್​ ದೇವಗನ್​ಗೆ ನಟಿ ಕಾಜೋಲ್​ ತಿವಿದು ಹೇಳಿದ ವಿಡಿಯೋ ವೈರಲ್​ ಆಗಿದ್ದು, ಸಾಕಷ್ಟು ತಮಾಷೆ ಕಮೆಂಟ್ಸ್​ ಬರುತ್ತಿವೆ....
 


ತಾರಾ ಜೋಡಿಗಳು ಬಹುಕಾಲ ಒಟ್ಟಿಗೇ ಇರುವುದು ಅಪರೂಪದ ಎಂದೇ ಹೇಳಬೇಕು. ಈ ಬಣ್ಣದ ಲೋಕದಲ್ಲಿ ಅಕ್ರಮ ಸಂಬಂಧ, ಒಂದಕ್ಕಿಂತ ಹೆಚ್ಚು ಮದುವೆ, ವಿಚ್ಛೇದನ ನೀಡದೇ ಮದುವೆಯಾಗುವುದು, ದೀರ್ಘ ಕಾಲ ಲಿವ್​ ಇನ್​ ಸಂಬಂಧದಲ್ಲಿ ಇದ್ದು ಕೈಕೊಡುವುದು, ಮಗಳ ವಯಸ್ಸಿನವಳ ಜೊತೆ ಮದುವೆಯಾಗುವುದು, ಇನ್ನೊಬ್ಬಳು ನಟಿ ಸಿಕ್ಕಳೆಂದು ಪತ್ನಿಯನ್ನು ಬಿಡುವುದು ಇವೆಲ್ಲವೂ ಮಾಮೂಲು. ಆದರೆ ಕೆಲವೇ ಕೆಲವು ತಾರಾ ಜೋಡಿಗಳು ಮಾತ್ರ ಆದರ್ಶವಾಗಿವೆ. ಮದುವೆಯಾಗಿ ಹತ್ತಾರು ವರ್ಷಗಳಾದರೂ ಸುಖದಿಂದ ಬಾಳುತ್ತಿರುವ ಜೋಡಿಗಳ ನಿದರ್ಶನ ಅಪರೂಪ. ಅಂಥ ತಾರಾ ಜೋಡಿಯಲ್ಲೊಂದು ಅಜಯ್​ ದೇವಗನ್​ ಮತ್ತು ಕಾಜೋಲ್​ ಜೋಡಿ. 1999ರ ಫೆಬ್ರುವರಿ 24ರಂದು ಮದುವೆಯಾಗಿರುವ ಈ ಜೋಡಿ ಇಂದಿಗೆ ಮದುವೆಯಾಗಿ 25 ವರ್ಷಗಳಾಗಿವೆ.  

ಇದೀಗ ಇವರ ವಿಡಿಯೋ ಒಂದು ವೈರಲ್​ ಆಗಿದ್ದು, ಅದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುವಂತಾಗಿದೆ. ಅಷ್ಟಕ್ಕೂ ಈ ಜೋಡಿ ಕ್ಯಾಮೆರಾಗೆ ಪೋಸ್ ಕೊಡಲು ಮುಂದಾಗಿದೆ. ಮಗ ಯುಗ್​ ಕೂಡ ಇದ್ದಾನೆ. ಈ ಸಮಯದಲ್ಲಿ ಅಜಯ್​ ಮಗನ ಸೊಂಟವನ್ನು ಬಳಸಿ ಪೋಸ್​ ಕೊಡಲು ಮುಂದಾಗಿದ್ದಾರೆ. ಆಗ ಕಾಜೋಲ್​ ತನ್ನ ಸೊಂಟವನ್ನೂ ಹಿಡಿದುಕೊಳ್ಳುವಂತೆ ಗಂಡ ಅಜಯ್​ಗೆ ತಿವಿದು ಸಿಗ್ನಲ್​ ಕೊಟ್ಟಿದ್ದಾರೆ. ಅದನ್ನು ತಿಳಿದ ಅಜಯ್​ ಕೂಡಲೇ ಕಾಜೋಲ್​ ಸೊಂಟ ಹಿಡಿದುಕೊಂಡಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗಿದೆ. ಫೋಟೋ ತೆಗೆಯುವಾಗ ಇದು ಯಾರ ಗಮನಕ್ಕೂ ಬರುವುದಿಲ್ಲ ಎಂದು ಕಾಜೋಲ್​ ಅಂದುಕೊಂಡಿದ್ದಾರೆ. ಆದರೆ ಸೆಲೆಬ್ರಿಟಿಗಳ ಇಂಥ ವಿಡಿಯೋಗಳು ಸುಮ್ಮನೆ ಇರ್ತಾವಾ? ಸಾಕಷ್ಟು ವೈರಲ್​ ಆಗಿಯೇ ಆಗುತ್ತವೆ. ಈಗಲೂ ಸಿಕ್ಕಾಪಟ್ಟೆ ತಮಾಷೆಯ ಕಮೆಂಟ್ಸ್​ ಬರುತ್ತಿವೆ.

Tap to resize

Latest Videos

undefined

ಅಮಿತಾಭ್​ @82: ಜಯಾ ಜೊತೆ ಮದುವೆಗೆ ಅಡ್ಡಿ ಬಂದಿತ್ತು ಜಾತಿ! ಹುಟ್ಟುಹಬ್ಬದಂದು ಕುತೂಹಲದ ವಿಷ್ಯ ರಿವೀಲ್​

ಅಂದಹಾಗೆ, ಕಾಜೋಲ್​ (Kajol) ಮತ್ತು ಅಜಯ್​ ದೇವಗನ್​ (Ajay Devagan) ಅವರ ಮದುವೆಯ ಹಿಂದೆ ದೊಡ್ಡ ಕಥೆಯೇ ಇದೆ. ಇದು ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲ. ಕಾಜೋಲ್​ ತಮ್ಮ ತಂದೆಯ ವಿರುದ್ಧ ಕಟ್ಟಿಕೊಂಡು ಈ ಮದುವೆಯಾಗಿದ್ದಾರೆ.  ಹುಲ್​ಚಲ್ (Hulchal) ಚಿತ್ರದ ವೇಳೆ ಇಬ್ಬರ ಮನದಲ್ಲೂ ಹಲ್​ಚಲ್​ (ಕೋಲಾಹಲ) ಉಂಟಾಗಿ ಪ್ರೀತಿ ಅರಳಿತ್ತು. ಇದರ ನಂತರ, ಅಜಯ್ ಮತ್ತು ಕಾಜೋಲ್ ಅನೇಕ ಚಿತ್ರಗಳಲ್ಲಿ ರೋಮಾಂಟಿಕ್​ ಪಾತ್ರಗಳನ್ನು ನಿರ್ವಹಿಸಿದರು. ಅದಾದ ಮೇಲೆ ಇವರ ಮದುವೆಯಾಗಿದ್ದು. ಆದರೆ ಸಿನಿ ರಂಗದಲ್ಲಿ ಮಾಮೂಲು ಎನ್ನುವಂತೆ ಅಜಯ್​ ದೇವಗನ್​ ಅವರ ಸುತ್ತಲೂ ಕೆಲ ನಟಿಯರ ಹೆಸರು ಸುತ್ತುತ್ತಿತ್ತು. ಅವರು, ಕಾಜೋಲ್​ರನ್ನು ಭೇಟಿಯಾಗುವ ಮೊದಲು  ರವೀನಾ ಟಂಡನ್, ಕರಿಷ್ಮಾ ಕಪೂರ್ ಮತ್ತು ಟಬು ಅವರೊಂದಿಗೆ ಅಜಯ್​ ಸಂಬಂಧ ಹೊಂದಿದ್ದರು ಎಂದೇ ಸುದ್ದಿಯಾಗಿತ್ತು. ಆದರೆ ಕೊನೆಗೆ ಅಜಯ್​ ಅವರು ಕಾಜೋಲ್​ ಅವರನ್ನು ಬಾಳಸಂಗಾತಿಯಾಗಿ ಸ್ವೀಕರಿಸಿದರು.

ಅಜಯ್ ಮತ್ತು ಕಾಜೋಲ್ ಉತ್ತಮ ಸ್ನೇಹಿತರಾಗಿದ್ದರು, DDLJ ನಟಿ ಆಗಾಗ್ಗೆ ಅಜಯ್ ದೇವಗನ್ ಅವರ ಪ್ರೀತಿಯ ಜೀವನದ ಬಗ್ಗೆ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇವರ ಈ ಸಲುಗೆ ಮುಂದೊಂದು ದಿನ ಪ್ರೀತಿಯಲ್ಲಿ ಬದಲಾಗಿ, ಮದುವೆಯಾಗುವ ಮಟ್ಟಿಗೂ ಹೋಗುತ್ತದೆ ಎಂದು ಅಂದುಕೊಂಡಿರಲಿಲ್ಲವಂತೆ. ಈ ಬಗ್ಗೆ ಅವರೇ ಖುದ್ದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕಾಜೋಲ್​ ತಂದೆಗೆ ಈ ಮದುವೆ ಇಷ್ಟವಿಲ್ಲದೇ ಇರಲು ಕಾರಣ ಏನೆಂದರೆ, ಕಾಜೋಲ್​ ಅದಾಗಲೇ 24 ವರ್ಷ ವಯಸ್ಸು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗಳ ಮದುವೆ ಬೇಡ ಎನ್ನುವುದು ಅಪ್ಪನ ಸಲಹೆ. ಅದರಲ್ಲಿಯೂ ತಾವು ಅಜಯ್​ ದೇವಗನ್​ ಅವರನ್ನು ಮದುವೆಯಾಗುವ ವಿಷಯ ಪ್ರಸ್ತಾಪಿಸಿದಾಗ ಬೇಡವೇ ಬೇಡ ಎಂದರಂತೆ. ಆಗ ಅಜಯ್​ ಅವರಿಗೆ 29 ವರ್ಷ ವಯಸ್ಸು. ಇಬ್ಬರ ನಡುವೆ ಐದು ವರ್ಷ ಅಂತರವಷ್ಟೇ. ಆದರೆ ಈ ಮದುವೆಗೆ ತಂದೆ ಅದ್ಯಾಕೋ ಇಷ್ಟಪಟ್ಟಿರಲಿಲ್ಲ. ಆದರೆ  ಕಾಜೋಲ್ ಅವರ ಪರ ವಹಿಸಿಕೊಂಡು ಬಂದದ್ದು ತಾಯಿ ತನುಜಾ. ಅವರು ಮಗಳ ಇಷ್ಟದಂತೆ ಮದುವೆಯಾಗು ಎಂದು ಗ್ರೀನ್​ ಸಿಗ್ನಲ್​ (Green Signal) ಕೊಟ್ಟರು. ಆದರೆ ಭಾವಿ ಅಳಿಯನಿಗೆ ದೀರ್ಘ ಕಾಲ ಈ ಭಾವಿ ಅತ್ತೆ ಪಾಠವನ್ನೂ ಮಾಡಿದರಂತೆ!

ಪುನೀತ್ ರಾಜ್​​ರನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ ನೋವಿನ ನುಡಿ... ಕೈ ಮೇಲೆ ಅಪ್ಪು ಹಚ್ಚೆ...

ಕಾಜೋಲ್ ಮತ್ತು ಅಜಯ್ ದೇವಗನ್ 24 ಫೆಬ್ರವರಿ 1999 ರಂದು ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಮದುವೆಯಾದ ಮೇಲೆ ಕಾಜೋಲ್​ ಅವರ ತಾಯಿಯನ್ನು  ಅಜಯ್ ಅತ್ತೆ ಎಂದು ಕರೆಯುತ್ತಿರಲಿಲ್ಲವಂತೆ. ಕೊನೆಗೆ ತನುಜಾ ಅವರೇ ಸಿಟ್ಟಿನಿಂದ ಜೋರು ಮಾಡಿ ಅತ್ತೆ ಎಂದು ಹೇಳುವಂತೆ ಹೇಳಿಸಿರುವುದಾಗಿ ಕಾಜೋಲ್​ ಹೇಳಿದ್ದಾರೆ. 
 

click me!