ಚಂದದ ಗಾರ್ಡನ್, ಕೂಲ್ ಪೂಲ್: ಲಾಸ್‌ ಏಂಜಲೀಸ್‌ನಲ್ಲಿ ಮಲ್ಲಿಕಾ ಮನೆ ಇದು

Published : Jun 01, 2021, 04:18 PM IST
ಚಂದದ ಗಾರ್ಡನ್, ಕೂಲ್ ಪೂಲ್: ಲಾಸ್‌ ಏಂಜಲೀಸ್‌ನಲ್ಲಿ ಮಲ್ಲಿಕಾ ಮನೆ ಇದು

ಸಾರಾಂಶ

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರ ಲಾಸ್ ಏಂಜಲೀಸ್ ಮನೆ ನೊಡಿದ್ರಾ? ಗ್ಲಾಸ್ ಡೋರ್, ಚಂದದ ಗಾರ್ಡನ್, ನ್ಯಾಚುರಲ್ ಟಚ್ ಇರೋ ಪೂಲ್

ನಟಿ ಮಲ್ಲಿಕಾ ಶೆರಾವತ್ ಸೋಷಿಯಲ್ ಮೀಡಿಯಾದಲ್ಲಿ ಚಂದದ್ದೊಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಲಾಸ್ ಏಂಜಲೀಸ್‌ನಲ್ಲಿರುವ ತನ್ನ ಚಂದದ ವಿಲ್ಲಾದ ಕಿರುನೋಟವನ್ನು ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಸಣ್ಣ ವೀಡಿಯೊದಲ್ಲಿ ನಟಿ ನಾಯಿಯೊಂದಿಗೆ ಆಟವಾಡುವುದನ್ನು ಮತ್ತು ಪೂಲ್ ಪಕ್ಕ ಚಿಕ್ ಮಾಡುವುದನ್ನು ಕಾಣಬಹುದು.

ದೊಡ್ಡ ನೀಲಿ ಫ್ರೆಂಚ್ ಬಾಗಿಲುಗಳು ಮತ್ತು ಮನೆ ಮುಂದೆ ಆಡುವ ಬಿಳಿ ನಾಯಿಯ ವೀಡಿಯೊದೊಂದಿಗೆ ವೀಡಿಯೊ ಆರಂಭವಾಗುತ್ತದೆ. ಮಲ್ಲಿಕಾ ಬಾಗಿಲಿನ ಹಿಂದಿನಿಂದ ಸಡಿಲವಾದ, ಬಹು ಬಣ್ಣದ ಉಡುಪಿನಲ್ಲಿ ಹೊರ ಬರುತ್ತಾರೆ. ನಾಯಿಯೊಂದಿಗೆ ಮಾತನಾಡುತ್ತಾರೆ. ಸ್ವಲ್ಪ ಮುಂದೆ ಬಂದು ಉದ್ಯಾನದ ಮೂಲಕ ತನ್ನ ಈಜುಕೊಳದತ್ತ ನಡೆಯುತ್ತಾರೆ. ಪಾದಗಳನ್ನು ಕೊಳದಲ್ಲಿ ಮುಳುಗಿಸಿ ಸುತ್ತಲೂ ನೀರನ್ನು ಚೆಲ್ಲುತ್ತಾರೆ.

ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಲ್ಲಿಕಾ: ನೈತಿಕವಾಗಿ ಕೊಂದೇ ಬಿಟ್ಟಿದ್ದರು ಎಂದ ನಟಿ...

ವೀಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ವಾವ್ ಬ್ಯೂಟಿಫುಲ್ ಹೌಸ್ ಎಂದು ಬರೆದಿದ್ದಾರೆ. ಇನ್ನೊಬ್ಬರು, ನಿಮ್ಮ ಮನೆ ಸುಂದರವಾಗಿದೆ ಮಲ್ಲಿಕಾ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್‌ನ ಈ ಹಾಟ್ ಚೆಲುವೆಗೆ ಪ್ರತಿ ಬಾರಿಯೂ ಆಡಿಷನ್..!

ಮಲ್ಲಿಕಾ ಕಳೆದ ಎರಡೂವರೆ ತಿಂಗಳಿನಿಂದ ಲಾಸ್ ಏಂಜಲೀಸ್‌ನ ಈ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರು ಆಗಾಗ ಮನೆ ಮತ್ತು ಹೊರಾಂಗಣ ಪ್ರದೇಶದಿಂದ ಫೋಟೋ ಹಂಚಿಕೊಳ್ಳುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?