ಮಲೆಯಾಳ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ ಬಗ್ಗೆ ಕೊಂಕಾಡಿದ ಸ್ಟಾರ್ ನಟ, ಪತ್ನಿ

Published : Aug 26, 2024, 04:51 PM ISTUpdated : Aug 26, 2024, 04:58 PM IST
ಮಲೆಯಾಳ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಹೇಮಾ ಕಮಿಟಿ ಬಗ್ಗೆ ಕೊಂಕಾಡಿದ ಸ್ಟಾರ್ ನಟ, ಪತ್ನಿ

ಸಾರಾಂಶ

ಮಲೆಯಾಳಂ ಸಿನಿಮಾ ರಂಗದ ನಟ ಕೃಷ್ಣಕುಮಾರ್ ಅವರ ಪತ್ನಿ ಯೂಟ್ಯೂಬರ್ ಸಿಂಧು ಕೃಷ್ಣ  ಇತ್ತೀಚೆಗೆ ಮಲೆಯಾಳಂ ಚಿತ್ರರಂಗದ ಬಂಡವಾಳ ಬಯಲು ಮಾಡಿದ ಹೇಮಾ ಕಮಿಟಿ ಬಗ್ಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಅಣಕವಾಡಿದ್ದು ಇದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೇರಳ ಸಿನಿಮಾ ರಂಗದ ಕರಾಳ ಮುಖವನ್ನು ಬಿಚ್ಚಿಟ್ಟ ಹೇಮಾ ಕಮಿಟಿಯ ಬಗ್ಗೆ  ಟೀಕೆ ಮಾಡಿ ಮಲೆಯಾಳಂ ನಟರೋರ್ವ ಪತ್ನಿ ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ. ನಟನಾಗಿ ಬಳಿಕ ರಾಜಕಾರಣಿಯಾಗಿ ಬದಲಾದ ಮಲೆಯಾಳಂ ಸಿನಿಮಾ ರಂಗದ ನಟ ಕೃಷ್ಣಕುಮಾರ್ ಅವರ ಪತ್ನಿ ಯೂಟ್ಯೂಬರ್ ಸಿಂಧು ಕೃಷ್ಣ  ಇತ್ತೀಚೆಗೆ ಮಲೆಯಾಳಂ ಚಿತ್ರರಂಗದ ಬಂಡವಾಳ ಬಯಲು ಮಾಡಿದ ಹೇಮಾ ಕಮಿಟಿ ಬಗ್ಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಅಣಕವಾಡಿದ್ದು ಇದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೃಷ್ಣಕುಮಾರ್ ನಟನಾಗಿ ಬಳಿಕ ರಾಜಕಾರಣಿಯಾಗಿ ಬದಲಾದವರು ಅವರ ಇಡೀ ಕುಟುಂಬವೇ ಈಗ ಯೂಟ್ಯೂಬ್ ಸ್ಟಾರ್‌ಗಳಾಗಿದ್ದಾರೆ. ಇತ್ತೀಚೆಗೆ ಮಲೆಯಾಳಂ ಸಿನಿಮಾ ರಂಗದ ಬಗ್ಗೆ ಹೇಮಾ ಕಮಿಟಿ ನೀಡಿದ ವರದಿಗೆ ಕೃಷ್ಣಕುಮಾರ್ ಪತ್ನಿ ಸಿಂಧು ಕೃಷ್ಣ ಕುಹಕವಾಡಿದ್ದಾರೆ. ಮಲೆಯಾಳಂ ಸಿನಿಮಾರಂಗದಲ್ಲಿ ಹೇಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗಲಾಗುತ್ತದೆ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಹೇಮಾ ಕಮಿಟಿ ಸರ್ಕಾರಕ್ಕೆ ವರದಿ ನೀಡಿತ್ತು. 

ನಟ ಸಿದ್ದಿಕಿ ಮಗಳೇ ಎಂದು ರೇಪ್​ ಮಾಡ್ದ, 'ವೀರ ಕನ್ನಡಿಗ' ನಟ ರಿಯಾಜ್‌ ಖಾನ್‌ ಫೋನ್​ನಲ್ಲೇ... ನಟಿಯ ಕರಾಳ ಅನುಭವ...

ಸಿಂಧು ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ದಿನಚರಿ ಜೀವನಶೈಲಿಯ ಬಗ್ಗೆ ಸದಾ ತಮ್ಮ ಫಾಲೋವರ್ಸ್‌ಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ಟೀಕೆಗೆ ಗುರಿಯಾಗಿರುವ ವೀಡಿಯೋದಲ್ಲಿ ಸಿಂಧು ತಮ್ಮ ಪತಿ ಕೃಷ್ಣಕುಮಾರ್ ಹಾಗೂ ತಮ್ಮ ಮದುವೆ ನಿಗದಿಯಾಗಿರುವ ದಿವ್ಯಾ ಕೃಷ್ಣ ಅವರ ಜೊತೆ ತಮ್ಮ ಮಗಳ ಮದುವೆ ಬಗ್ಗೆ ಮಾತನಾಡುತ್ತಿರುತ್ತಾರೆ. ಈ ಮಾತುಕತೆ ವೇಳೆ ಕುಟುಂಬ ಸದಸ್ಯರ ಬಟ್ಟೆಯ ಬಗ್ಗೆ ಮಾತನಾಡುತ್ತಿರುತ್ತಾರೆ. ಈ ವೇಳೆ ಕೃಷ್ಣಕುಮಾರ್ ಹಾಸ್ಯ ಮಾಡುತ್ತಾರೆ. ಮಗಳ ಮದುವೆ ಬಗ್ಗೆ ನನ್ನ ಉತ್ಸಾಹ ನೋಡಿದರೆ ಜನ ನನ್ನದೇ ಮದುವೆ ಎಂದು ಭಾವಿಸಿ ಬಿಡುತ್ತಾರೆ ಎಂದು ಹೇಳುತ್ತಾರೆ. 

ಇದೇ ಮಾತು ಮುಂದುವರೆಯುತ್ತಾ ನೀವು ಏನು ಹೇಳಬೇಡಿ ಇದು ಕಮೀಷನ್‌ನ ಕಾಲ, ಮದುವೆ ಎಂದು ಹೇಳಬೇಡಿ,  ಬರಬೇಡಿ ಬಂದು ನನ್ನ ರೂಮ್‌ನ ಬಾಗಿಲು ಬಡಿಬೇಡಿ ಎಂದು  ಆತ ಮಲೆಯಾಲಂನಲ್ಲಿ ಪತ್ನಿಗೆ ಕೃಷ್ಣಕುಮಾರ್ ಹೇಳಿದ್ದಾರೆ. ಕೃಷ್ಣಕುಮಾರ್ ಅವರ ಈ ಮಾತು ಅವರು ಹೇಮಾ ಕಮಿಟಿಗೆ ನೀಡಿದ ಟಾಂಟ್ ಎನ್ನಲಾಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಜಡ್ಜ್‌ ಹೇಮಾ ಕಮಿಟಿಯಲ್ಲಿ ಮಲೆಯಾಳಂ ಸಿನಿಮಾ ರಂಗದಲ್ಲಿ ಎಲ್ಲದಕ್ಕೂ ಓಕೆ ಎಂದರೆ ಮಾತ್ರ ನಟಿಯರಿಗೆ ಅವಕಾಶ ನೀಡಲಾಗುತ್ತದೆ. ಮಹಿಳೆಯರಿಗೆ ತೀವ್ರ ದೌರ್ಜನ್ಯ ಮಾಡಲಾಗುತ್ತದೆ. ಸಿನಿಮಾ ಇಂಡಸ್ಟ್ರಿಯ ಕೆಲವರು ಕುಡಿದು ಬಂದು ನಟಿಯರು ಇರುವ ಕೋಣೆಯ ಬಾಗಿಲು ಬಡಿಯುತ್ತಿದ್ದರು ಎಂದು ವರದಿ ನೀಡಿದ್ದರು. ಈ ವರದಿಗೆ ಅಣಕಿಸುವ ಬರದಲ್ಲಿ ನಟ ಹೀಗೆ ಹೇಳಿದ್ದು, ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಲಯಾಳಂ ಚಿತ್ರೋದ್ಯಮ ಸೆಕ್ಸ್‌ ಹಗರಣಕ್ಕೆ 2 ತಲೆದಂಡ!

ಇವರಿಗೆ ಇವರ ನಡವಳಿಕೆ ಅಸಭ್ಯವಾಗಿತ್ತು ಎಂಬುದು ಈಗ ಬಯಲಾಗಿದೆ. ಇವರು ಈಗಲಾದರೂ ತಾವು ಒಳ್ಳೆಯವರಂತೆ ನಟಿಸುವುದನ್ನು ಕೈ ಬಿಡಬೇಕು. ಅವರ ನಿಜವಾದ ಮುಖ ಈಗ ಬಯಲಾಗಿದೆ. ಇವರು ಇಂಟರ್‌ನೆಟ್‌ನಲ್ಲಿ ಫೇಮಸ್ ಆಗಲು ತಮ್ಮ ಖಾಸಗಿ ಬದುಕಿನ ಎಲ್ಲವನ್ನು ಹೇಳಿಕೊಳ್ಳುತ್ತಾ ಏನು ಬೇಕಾದರೂ ಮಾಡುತ್ತಾರೆ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ ಕೃಷ್ಣಕುಮಾರ್ ಪತ್ನಿ ಸಿಂಧು ಕುಮಾರ್ ಯೂಟ್ಯೂಬ್‌ನಲ್ಲಿ 5.15 ಲಕ್ಷ ಫಾಲೋವರ್ಸ್‌ಗಳನ್ನು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 3.18 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಕೃಷ್ಣಕುಮಾರ್ ಹಾಗೂ ಸಿಂಧು ಕೃಷ್ಣಗೆ  ನಾಲ್ವರು ಹೆಣ್ಣು ಮಕ್ಕಳಿದ್ದು,  ಅವರಲ್ಲಿ ಅಹಾನಾ ಕೃಷ್ಣ ನಟಿಯಾಗಿದ್ದಾರೆ. ಇವರು= ಜೊತೆ ದಿವ್ಯ ಕೃಷ್ಣ, ಇಶಾನಿ ಕೃಷ್ಣ ಹಾಗೂ ಹಂನ್ಸಿಕಾ  ಕೃಷ್ಣ ಎಂಬ ಒಟ್ಟು ನಾಲ್ವರು ಮಕ್ಕಳಿದ್ದು, ಯಶಸ್ವಿ ಯೂಟ್ಯೂಬರ್‌ಗಳೆನಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?