ಇದು ನಿಜವಾದ ಕೇರಳ ಸ್ಟೋರಿ; '2018' ಸಿನಿಮಾಗೆ ಮಲಯಾಳಿ ಪ್ರೇಕ್ಷಕರು ಫಿದಾ

By Shruthi KrishnaFirst Published May 9, 2023, 11:25 AM IST
Highlights

'2018' ಸಿನಿಮಾ ನೋಡಿ ಮಲಯಾಳಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದು ನಿಜವಾದ ಕೇರಳ ಸ್ಟೋರಿ ಎಂದು ಹೇಳುತ್ತಿದ್ದಾರೆ. 

ದಿ ಕೇರಳ ಸ್ಟೋರಿ ಸದ್ಯ ಚರ್ಚೆಯಲ್ಲಿರುವ ಸಿನಿಮ. ಭಾರಿ ವಿರೋಧದ ನಡುವೆಯೂ ಕೇರಳ ಸ್ಟೋರಿ ರಿಲೀಸ್ ಆಗಿದ್ದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿದೆ. ಪ್ರೊಪಗಂಡ ಸಿನಿಮಾ ಎಂದು ಕೇರಳಿಗರು ವಿರೋಧಿಸಿದ್ದರು. ದಿ ಕೇರಳ ಸ್ಟೋರಿ ರಿಲೀಸ್ ಆದ ದಿನವೇ '2018' ಮಲಯಾಳಂ ಸಿನಿಮಾ ತೆರೆಗೆ ಬಂದಿದೆ. 2018 ಸಿನಿಮಾ ನೋಡಿದ ಅಭಿಮಾನಿಗಳು ಇದು ನಿಜವಾದ ಕೇರಳ ಸ್ಟೋರಿ ಎಂದು ಹೇಳುತ್ತಿದ್ದಾರೆ. 2018 ಸಿನಿಮಾ ಅದೇ ವರ್ಷ ಕೇರಳದ ಭೀಕರ ಪ್ರವಾದ ಬಗ್ಗೆ ಇರುವ ಸಿನಿಮಾವಾಗಿದೆ. 

2018 ಸಿನಿಮಾ ನೋಡಿ ಅಭಿಮಾನಿಗಳು ಇದು ನಿಜವಾದ ಕೇರಳ ಸ್ಟೋರಿ ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಪ್ರವಾಹ ಸಮಯದಲ್ಲಿ ಕೇರಳ ಅನುಭವಿಸಿದ ಕಷ್ಟಗಳ ಪೋಸ್ಟ್ ಮಾಡುತ್ತಿದ್ದಾರೆ. ನೈಜ ಘಟನೆಗಳನ್ನು ಶೇರ್ ಮಾಡುತ್ತಿದ್ದಾರೆ. ಇದು ನಿಜವಾದ ಕೇರಳ ಸ್ಟೋರಿ ಎನ್ನುತ್ತಿದ್ದಾರೆ. ಸಿನಿಮಾ ರಿಲೀಸ್ ಆಗಿ 4 ದಿನಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. 2018 ಸಿನಿಮಾದ ಹ್ಯಾಶ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ.    

ಕೇರಳದ ಅಭಿಮಾನಿಗಳು 2018 ಸಿನಿಮಾದ ಬಗ್ಗೆ ದೀರ್ಘವಾಗಿ ಬರೆದುಕೊಳ್ಳುತ್ತಿದ್ದಾರೆ. 'ಇಡೀ ಕೇರಳ ಮತ್ತು ಜನರು ದುರಂತದ ವಿರುದ್ಧ ಹೇಗೆ ಹೋರಾಡಿದರು ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ನಾವು ಧೈರ್ಯ, ಮಾನವೀಯತೆ ಮತ್ತು ಜವಾಬ್ದಾರಿಯಿಂದ ಆ ವಿಪತ್ತನ್ನು ಹೇಗೆ ಎದುರಿಸಿದ್ದೇವೆ ಎಂಬುದು ನಿಮಗೆ ತೋರಿಸುತ್ತದೆ. ಇದು ನಮ್ಮ ಕೇರಳದ ನಿಜವಾದ ಕಥೆ' ಎಂದು ಹೇಳುತ್ತಿದ್ದಾರೆ. 

ಊಹಿಸಲಾಗದ ದ್ವೇಷ ಅನುಭವಿಸ್ತೀರಿ: 'ದಿ ಕೇರಳ ಸ್ಟೋರಿ' ತಂಡಕ್ಕೆ 'ಕಾಶ್ಮೀರ್ ಫೈಲ್ಸ್' ನಿರ್ದೇಶಕ ಎಚ್ಚರಿಕೆ

ದಿ ಕೇರಳ ಸ್ಟೋರಿ ಸಿನಿಮಾ ಚರ್ಚೆಯ ಮುಂದೆ 2018 ಸಿನಿಮಾ ಕಳೆದುಹೋಗಿತ್ತು. ಆದರೀಗ ನಿಧಾನಕ್ಕೆ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು ಪ್ರೇಕ್ಷಕರು ಚಿತ್ರಮಂದಿರದತ್ತ ಮುಖ ಮಾಡುತ್ತಿದ್ದಾರೆ. ಭಾನುವಾರ 4 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ ಇದೀಗ 9 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ವರದಿಯಾಗಿದೆ.  ಸದ್ಯ ಕೇರಳ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡುತ್ತಿರುವ 2018 ಸಿನಿಮಾ ತಮಿಳಿನಲ್ಲೂ ಡಬ್ ಆಗಿ ರಿಲೀಸ್ ಆಗಲು ಸಿದ್ಧವಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗದರೇ ಸೌತ್‌ನ ಎಲ್ಲಾ ಭಾಷೆಗೂ ಡಬ್ ಆಗಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ವರ್ಷದಲ್ಲಿ ಬಂದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾಗಳಲ್ಲಿ ಒಂದಾಗಿದೆ. 

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

2018 ಸಿನಿಮಾಗೆ ಜೂಡ್ ಆಂಥನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಜನಪ್ರಿಯ ಕಲಾವಿದರು ಕಾಣಿಸಿಕೊಂಡಿದ್ದಾರೆ. ಟೊವಿನೋ ಥಾಮಸ್ ಆಸಿಪ್ ಅಲಿ, ಅಪರ್ಣಾ ಬಾಲಮುರಳಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾಗಿಂತ 2018 ಸಿನಿಮಾ ಮಲಯಾಳಿಗಳ ಮನ ಗೆದ್ದಿದ್ದು ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಆಗುವ ಸಾಧ್ಯತೆ ಇದೆ.  

click me!