
ಮಲಯಾಳಂ ನಟ ಪೃಥ್ವಿರಾಜ್ (Prithviraj) ಅವರು ತೆಲಗುದ ನಟ ಡಾರ್ಲಿಂಗ್ ಖ್ಯಾತಿಯ ಪ್ರಭಾಸ್ (Prabhas) ಬಗ್ಗೆ ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದೆ. ಪ್ರಭಾಸ್ ಅವರಿಗೆ ಯಾಕೆ ಡಾರ್ಲಿಂಗ್ ಕರೆಯುತ್ತಾರೆ ಮತ್ತು ಅದು ಸರಿಯಾಗಿದೆ ಕೂಡ, ಎಂದಿದ್ದಾರೆ ನಟ ಪೃಥ್ವಿರಾಜ್. ಯಾಕೆ ಪ್ರಭಾಸ್ ಅವರಿಗೆ ಡಾರ್ಲಿಂಗ್ ಎಂದು ಕರೆಯುವುದು ಮ್ಯಾಚ್ ಆಗುತ್ತದೆ ಎಂಬುದನ್ನು ನಟ ಪೃಥ್ವಿರಾಜ್ ವಿವರಿಸಿದ್ದಾರೆ. ನಟ ಪೃಥ್ವಿರಾಜ್ ಅವರು ಸಲಾರ್ ಚಿತ್ರದಲ್ಲಿ ನಟ ಪ್ರಭಾಸ್ ಅವರ ಜತೆ ನಟಿಸಿದ್ದಾರೆ.
ಡಾರ್ಲಿಂಗ್ ಪ್ರಭಾಸ್ ಬಗ್ಗೆ ಮಾತನಾಡುತ್ತ ನಟ ಪೃಥ್ವಿರಾಜ್ 'ಪ್ರಭಾಸ್ ಅವರಿಗೆ ಎಲ್ಲರೂ ಡಾರ್ಲಿಂಗ್ ಎಂದೇ ಕರೆಯುತ್ತಾರೆ. ಅದು ಯಾಕೆ ಎಂಬುದು ನನಗೆ ಅವರ ಜತೆ ಸಲಾರ್‌ನಲ್ಲಿ ಕೆಲಸ ಮಾಡುವಾಗ ಗೊತ್ತಾಯಿತು. ಶೂಟಿಂಗ್ ಸೆಟ್‌ನಲ್ಲಿ ಪ್ರಭಾಸ್ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಾರೆ. ದಿನಾಲೂ ನೋಡಿದ ತಕ್ಷಣ ತಿಂಡಿ ತಿಂದ್ರಾ, ಊಟ ಮಾಡಿದ್ರಾ ಎಂದು ಎಲ್ಲರನ್ನೂ ವಿಚಾರಿಸುತ್ತಾರೆ. ಜತೆಗೆ, ನಿಮಗೇನಾದರೂ ಸ್ಪೆಷಲ್ ಆಗಿ ಬೇಕಾಗಿದ್ದರೆ ಅಡಿಗೆಯವರಿಗೆ ಹೇಳಿ ಮಾಡಿಸಲು ಏರ್ಪಾಡು ಮಾಡುತ್ತೇನೆ, ಏನಾದರೂ ಬೇಕಾ ಎಂದು ವಿಚಾರಿಸುತ್ತಾರೆ.
ಬಾಲಿವುಡ್ ಆಫರ್ ಬಂದಿದ್ದು, ನಾನು ರಿಜೆಕ್ಟ್ ಮಾಡಿದ್ದೂ ನಿಜ; ನಟ ಮಹೇಶ್ ಬಾಬು ಶಾಕಿಂಗ್ ಹೇಳಿಕೆ!
ಯಾರೇ ಆದರೂ ಇಂಥ ಕೆಲಸವನ್ನು, ಆತ್ಮೀಯತೆಯನ್ನು ಒಂದೆರಡು ದಿನ ತೋರಿಸಬಹುದು. ಆದರೆ, ಶೂಟಿಂಗ್ ಇರುವಷ್ಟೂ ದಿನ ಯಾರಿಗೂ ಮಾಡಲು ಸಾಧ್ಯವಿಲ್ಲ. ಅದು ಪ್ರಭಾಸ್ ಅವರಂಥ ಮಾನವೀಯತೆ ಮೂರ್ತಿಗೆ ಮಾತ್ರ ಸಾಧ್ಯ ಎಂಬುದು ನನ್ನ ಅನಿಸಿಕೆ. ಅವರ ಜತೆ ಕೆಲಸ ಮಾಡುವಾಗ ನೀವು ಅವರ ಗೆಸ್ಟ್ ಎಂದೇ ಪ್ರಭಾಸ್ ಭಾವಿಸುತ್ತಾರೆ. ನೀವು ಖುಷಿಯಾಗಿ ಇದ್ದೀರಾ? ನಿಮಗೆ ಏನಾದ್ರೂ ಬೇಕಾಗಿತ್ತಾ? ಎಂದೆಲ್ಲಾ ಪ್ರಭಾಸ್ ಪ್ರತಿಯೊಬ್ಬರನ್ನೂ ಕೇಳುತ್ತಾರೆ. ಅವರು ದೊಡ್ಡವರು ಇವರು ಚಿಕ್ಕವರು ಎಂಬ ಯಾವುದೇ ಬೇಧಭಾವ ಮಾಡುವುದಿಲ್ಲ.
ಉದ್ದ ಕೂದಲು ಉಳಿಸಿಕೊಳ್ಳಲು ಆರ್ಮಿ ಆಫೀಸರ್ ಕನಸನ್ನೇ ಕೈ ಬಿಟ್ಟಿದ್ರಾ ಶಾರುಖ್ ಖಾನ್!
ನಿಜವಾಗಿಯೂ ಹೇಳಬೇಕು ಎಂದರೆ ಪ್ರಭಾಸ್ ಅವರಂಥ ದೊಡ್ಡ ಸ್ಟಾರ್ ಹೀಗೆ ನಡೆದುಕೊಳ್ಳುತ್ತಾರೆ, ಬೇರೆಯವರ ಯೋಗಕ್ಷೇಮವನ್ನು ವಿಚಾರಿಸುತ್ತಾರೆ, ಅದೂ ಕೂಡ ಶೂಟಿಂಗ್ ಇರುವಷ್ಟೂ ದಿನ ಎಂಬುದನ್ನು ನಂಬುಲಿಕ್ಕೆ ಸ್ವಲ್ಪ ಕಷ್ಟವೇ. ಆದರೆ, ಅವರ ಜತೆ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಪ್ರಭಾಸ್ ಅವರ ಈ ಒಳ್ಳೆಯತನದ ಅನುಭವ ಆಗುತ್ತದೆ. ಅವರಿಗೆ ಡಾರ್ಲಿಂಗ ಎನ್ನುವುದು ಅತ್ಯಂತ ಸೂಕ್ತ ಪದವಾಗಿದೆ' ಎಂದಿದ್ದಾರೆ 'ಸಲಾರ್'ನ ವಿಲನ್ ಪಾತ್ರಧಾರಿ ಮಲಯಾಳಂ ನಟ ಪೃಥ್ವಿರಾಜ್.
ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.